ಕುಬಣೂರು ಸೇತುವೆ ಬಳಿ ರಸ್ತೆಯ ಶೋಚನೀಯಾವಸ್ಥೆ .,ಸೇತುವೆ ಇಕ್ಕೆಡೆಗಳಲ್ಲಿ ಕುಸಿತದ ಭೀತಿ

ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿನ ಕುಬಣೂರು ಸೇತುವೆ ಸಮೀಪದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸೇತುವೆಯ ಎರಡು ಬದಿಗಳು ಕುಸಿಯುವ ಭೀತಿಯಲ್ಲಿದೆ.


ಈ ರಸ್ತೆಯಿಂದ ರಾತ್ರಿ ಸಮಯಗಳಲ್ಲಿ ಮರಳು ತುಂಬಿದ ಘನ ಗಾತ್ರದ ಲಾರಿಗಳು ಇಲ್ಲಿಂದ ಸಂಚರಿಸುವ ಕಾರಣ ರಸ್ತೆಗಳು ಸಂಪೂರ್ಣ ಹದ ಗೆಟ್ಟಿರಬಹುದೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.


ಬೇಕೂರು ಶಾಂತಿಗುರಿಯಿಂದ ಪಚ್ಚoಬಲ ಸಂಪರ್ಕಿಸುವ ಸೇತುವೆ ಇದಾಗಿದ್ದು , ಕುಬಣೂರು ಪರಿಸರದಲ್ಲಿ ವಿದ್ಯಾಸಂಸ್ಥೆಗಳು ಮತ್ತು ಗ್ರಾಮಾಧಿಕಾರಿ ಕಚೇರಿ , ಅಂಗನವಾಡಿ ವಿವಿಧ ಆರಾಧನಾ ಮಂದಿರಗಳು ಕಾರ್ಯಾಚರಿಸುತ್ತಿದ್ದು ವಿದ್ಯಾರ್ಥಿಗಳನ್ನು ಹೊತ್ತ ಶಾಲಾ ಬಸ್ಸ್, ರಿಕ್ಷಾ, ಇತರ ವಾಹನಗಳು ಇದೆ ಸೇತುವೆಯಿಂದ ಹಾದುಹೋಗುತ್ತಿದ್ದು ಸೇತುವೆಯ ಸನಿಹದಲ್ಲಿ ರಸ್ತೆಗಳು ಸಂಪೂರ್ಣ ಹೊಂಡಗಳಾಗಿದ್ದು ವಿದ್ಯಾರ್ಥಿಗಳ ಪ್ರಯಾಣವು ದುಸ್ಸಾಹಸವಾಗಿದೆ.


ಸಾರ್ವಜಿಕರಿಗೆ ಪ್ರಯಾಣವಂತೂ ತೀರಾ ಕಷ್ಟಕರವಾಗಿದೆ. ಇಲ್ಲಿನ ಶೋಚನೀಯಾವಸ್ಥೆ ಇದೆ ರೀತಿ ಮುಂದುವರಿದರೆ ಅಪಾಯ ಕಟ್ಟಿಟ್ಟಬುತ್ತಿ . ಕಳೆದ ವರ್ಷ ಇದೆ ಸೇತುವೆ ಸಂಪೂರ್ಣ ಕುಸಿದು ಇಲ್ಲಿನ ಪ್ರಯಾಣವನ್ನು ಅಲ್ಪಸಮಯ ಸಂಪೂರ್ಣ ನಿರ್ಬಂಧಿಸಿ ತದನಂತರ ಲಕ್ಷಾಂತರ ರೂ. ಭರಿಸಿ ನೂತನ ಸೇತುವೆ ನಿರ್ಮಿಸಲಾಗಿತ್ತು.


ಇದೀಗ ಈ ರಸ್ತೆ ಹಾಗು ಸೇತುವೆಯಾ ಭದ್ರತೆಗೆ ಮರಳು ಸಾಗಾಟ ಲಾರಿಗಳನ್ನು ನಿಯಂತ್ರಿಸಲು ಅಧಿಕೃತರು ಮುಂದಾಗಬೇಕೆಂದು ರಸ್ತೆಯ ಶಿಥಿಲಾವಸ್ಥೆ ಸರಿಪಡಿಸಲು ಸಂಭಂದಪಟ್ಟ ಅಧಿಕೃತರು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!