ಪ್ರಯಾಣಿಕರಿದ್ದಾಗಲೇ ಬಸ್‌ಗೆ ಇಂಧನ ತುಂಬಿಕೆ — ಸುರಕ್ಷತೆ ಬಗ್ಗೆ ಆತಂಕ

ಉಪ್ಪಳ :
ಪ್ರಯಾಣಿಕರು ತುಂಬಿರುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ತುಂಬಲಾಗುತ್ತಿರುವುದು ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಆತಂಕ ಉಂಟುಮಾಡಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳು ಕರ್ನಾಟಕದ ತೊಕ್ಕೊಟ್ಟು ಹಾಗೂ ಕೊಟ್ಟೆಕಾರು ಪ್ರದೇಶದ ಪಂಪ್‌ಗಳಲ್ಲಿ ಇಂಧನ ತುಂಬುತ್ತಿರುವುದಾಗಿ ತಿಳಿದುಬಂದಿದೆ. ಈ ವೇಳೆ ಸುಮಾರು 10 ನಿಮಿಷಗಳ ಕಾಲ ಬಸ್ ನಿಲುಗಡೆ ಆಗುತ್ತಿದ್ದು, ಬಳಿಕ ಟೋಲ್ ಪ್ಲಾಜಾಗಳಲ್ಲಿ ಮತ್ತಷ್ಟು ವಿಳಂಬ ಉಂಟಾಗುತ್ತಿರುವುದರಿಂದ ಪ್ರಯಾಣಿಕರಿಗೆ ಸಮಯ ನಷ್ಟವಾಗುತ್ತಿದೆ.

ಈ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಪ್ರಯಾಣಿಕರಿದ್ದಾಗಲೇ ಬಸ್ ನಿಲ್ಲಿಸಿ ಇಂಧನ ತುಂಬುವುದು ನಮ್ಮ ಜೀವಕ್ಕೆ ಅಪಾಯವಾಗಬಹುದು” ಎಂದು ಕೆಲ ಮಹಿಳಾ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಹಿಡಿದು, ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಕಾಪಾಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!