ಚಲಿಸುವ ರೈಲಿನಲ್ಲಿ ₹30 ಸಾವಿರದ ಮೊಬೈಲ್ ಕಳವು: 19ರ ಹರೆಯದ ಯುವಕ ಅರೆಸ್ಟ್

ಕಾಸರಗೋಡು : ಕಾಸರಗೋಡಿನಿಂದ ತಲಶ್ಯೇರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಮಜೀದ್ ಎಂಬುವವರ 30,000 ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ಬಿಹಾರ ಮೂಲದ ಚಂದ್ರಕುಮಾರ್ (19) ಎಂಬಾತ ಕಳವು ಮಾಡಿದ್ದನು.

ಮಜೀದ್ ಅವರು ನೀಡಿದ ದೂರಿನ ಮೇರೆಗೆ ಕಾಸರಗೋಡು ರೈಲ್ವೆ ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಪಳ್ಳಿಕೆರೆ ಮವ್ವಲ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಯಿಂದ ಅಪಹರಿಸಿದ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೈಲ್ವೇ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!