ಕಾಸರಗೋಡು:ಮಡಿವಯಲಿನ ಪತ್ತಾನಂತ್ ಕುಂಞoಬು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎರಡನೇ ಆರೋಪಿ ಉಂಡ ರಾಜೇಶ್ (39) ಅಲಿಯಾಸ್ ವಿ. ರಾಜೇಶ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪಿಲಿಕೋಡ್ ಮಡಿವಯಲಿನ ನಿವಾಸಿಯಾಗಿದ್ದ ಇವರು, ಬುಧವಾರ ರಾತ್ರಿ 8.49ರ ಸುಮಾರಿಗೆ ಪರಿಯಾರಂ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಈ ತಿಂಗಳ 9ರಂದು ಪ್ರಕರಣದ ತೀರ್ಪು ಹೊರಬಿದ್ದಿದ್ದು, ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ರಾಜೇಶ್ ಅವರನ್ನು ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
10ರಂದು ಅಸ್ವಸ್ಥಗೊಂಡ ಅವರನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ 11ರಂದು ಪರಿಯಾರಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಕಣ್ಣೂರು ಕೇಂದ್ರ ಕಾರಾಗೃಹದ ಉಪ ಅಧೀಕ್ಷಕ ನಿತಿಲ್ ಥಾಮಸ್ ನೀಡಿದ ದೂರಿನ ಆಧಾರದ ಮೇಲೆ ಕಣ್ಣೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


