ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪ್ರೇರಣಾತ್ಮಕ ಭಾಷಣಕಾರರು ಹಾಗೂ ಶೈಕ್ಷಣಿಕ ಸಮಾಲೋಚಕರಾದ ರಫೀಕ್ ಮಾಸ್ಟರ್ ಅವರನ್ನು ವಾಫಿಯಾ ಕಾಲೇಜಿನ ಆಡಳಿತ ಸಮಿತಿಯ ವತಿಯಿಂದ ಪೋಷಕರ ಸಭೆಯ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಫಿಯಾ ಕಾಲೇಜಿನ ಅಧ್ಯಕ್ಷರಾದ ಕೆ.ಎಂ. ಅಬ್ದುಲ್ ಖಾದರ್ ಅವರು ರಫೀಕ್ ಮಾಸ್ಟರ್ ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಪ್ರೇರಣಾತ್ಮಕ ಸೇವೆಗಳನ್ನು ವಿವರವಾಗಿ ಪರಿಚಯಿಸಿ, ಅವರ ಸಾಧನೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿಯ ಕೋಶಾಧಿಕಾರಿ ಹಾಗೂ ವಾಫಿಯಾ ಕಾಲೇಜಿನ ಸದಸ್ಯರಾದ ಎಲ್.ಟಿ. ಉಮರ್ ಫಾರೂಕ್, ಉಪಾಧ್ಯಕ್ಷ ಹನೀಫ್ ಮಧುರ, ಉಪಪ್ರಾಂಶುಪಾಲ ಅಬ್ದುಲ್ ಬಾಸಿತ್ ಹುದವಿ, ಮ್ಯಾನೇಜರ್ ಇಸ್ಮಾಯಿಲ್ ದಾರಿಮಿ, ಸಿಬ್ಬಂದಿ ಸಲಾಂ ಫೈಝಿ, ಸದಸ್ಯ ಇಸ್ಮಾಯಿಲ್ ಕೆನರಾ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.

ರಫೀಕ್ ಮಾಸ್ಟರ್ ಅವರ ಸಾಧನೆ ಮತ್ತು ಸಮಾಜಮುಖಿ ಸೇವೆಯನ್ನು ಗುರುತಿಸಿ ನಡೆಸಿದ ಈ ಸನ್ಮಾನ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

