ಜಿಎಂಯು ಅಲ್ಯುಮ್ನಿ ಘಟಕಗಳ ಸಂಖ್ಯೆ 10ಕ್ಕೆ ಏರಿಕೆ; 28 ಸಾಧಕರಿಗೆ ‘ಜಿಎಂಯು ಐಕಾನ್ಸ್’ ಗೌರವ

ಅಜ್ಮಾನ್: ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) ವತಿಯಿಂದ ನಡೆದ ಅಲ್ಯುಮ್ನಿ ಶೃಂಗಸಭೆ-2026ರಲ್ಲಿ ಕೆನಡಾ, ಒಮಾನ್, ಕತಾರ್ ಮತ್ತು ಸ್ವೀಡನ್‌ನಲ್ಲಿ ನಾಲ್ಕು ಹೊಸ ಅಂತಾರಾಷ್ಟ್ರೀಯ ಹಳೆಯ ವಿದ್ಯಾರ್ಥಿಗಳ ಘಟಕಗಳನ್ನು ಆರಂಭಿಸಲಾಯಿತು. ಇದರೊಂದಿಗೆ ವಿಶ್ವದಾದ್ಯಂತ ಜಿಎಂಯು ಘಟಕಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಅಜ್ಮಾನ್‌ನ ತುಂಬೆ ಮೆಡಿಸಿಟಿಯ ಜಿಎಂಯು ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಘಟಕಗಳನ್ನು ಉದ್ಘಾಟಿಸಿದರು. ಜಿಎಂಯು ಕುಲಪತಿ ಪ್ರೊ. ಮಂದ ವೆಂಕಟ್ರಮಣ ಉಪಸ್ಥಿತರಿದ್ದರು.

ವಿಶ್ವದ ವಿವಿಧ ದೇಶಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿರುವ ಜಿಎಂಯುನ 28 ಹಳೆಯ ವಿದ್ಯಾರ್ಥಿಗಳನ್ನು ‘ಜಿಎಂಯು ಐಕಾನ್ಸ್’ ಗೌರವ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ 28 ಸಾಧಕರ ಕುರಿತ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

1998ರಲ್ಲಿ ಆರಂಭಗೊಂಡ ಜಿಎಂಯು ಇದುವರೆಗೆ 5,000ಕ್ಕೂ ಅಧಿಕ ಪದವೀಧರರನ್ನು ರೂಪಿಸಿದ್ದು, ಅವರು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ 117ಕ್ಕೂ ಅಧಿಕ ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ತುಂಬೆ ಗ್ರೂಪ್‌ನಲ್ಲಿನ ಶೇ.3ರಷ್ಟು ಉದ್ಯೋಗಾವಕಾಶಗಳನ್ನು ಜಿಎಂಯು ಹಳೆಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ಡಾ. ತುಂಬೆ ಮೊಯ್ದೀನ್ ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!