ನ.27ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ‘COSMIC 2026

ಮಂಗಳೂರು: ಆದ್ಯಾರದ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ವತಿಯಿಂದ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಾಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯುನಿಕೇಷನ್ಸ್ ಕುರಿತ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ‘ಕಾಸ್ಮಿಕ್ 2026’ ನ.27 ಮತ್ತು 28ರಂದು ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ ಈ ಮಾಹಿತಿ ನೀಡಿದರು. IEEE ಬೆಂಗಳೂರು ವಿಭಾಗ ಮತ್ತು IEEE ಮಂಗಳೂರು ಉಪವಿಭಾಗದ ತಾಂತ್ರಿಕ ಸಹಯೋಗದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಪೂರ್ವಭಾವಿಯಾಗಿ ನ.26ರಂದು ಜನರೇಟಿವ್ ಎಐ, ಸಂಶೋಧನಾ ಪ್ರಕಟಣೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಕಾರ್ಯಾಗಾರ ನಡೆಯಲಿದೆ. ಡಾ. ಹಸನ್ ಫಿರ್ದೌಸ್ ಮೊಹಮ್ಮದ್ ಝಕಿ, ಡಾ. ಚೆಂಗಪ್ಪ ಮುಂಜಂದಿರ ಮತ್ತು ಡಾ. ಕೃಷ್ಣರಾಜ ಚಡಗ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನಕ್ಕೆ ಒಟ್ಟು 1,076 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿದ್ದು, ದ್ವಿಮುಖ ಗೌಪ್ಯ ಪರಿಶೀಲನಾ ಪ್ರಕ್ರಿಯೆಯ ಬಳಿಕ ಶೇ.11ರಷ್ಟು ಪ್ರಬಂಧಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಜಪಾನ್ ಉಪ ರಾಯಭಾರಿ ಯೋಶಿಮುರಾ ತೊಮೊತಾಕಾ ಸಮ್ಮೇಳನ ಉದ್ಘಾಟಿಸಲಿದ್ದು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ನೆಡುಂಚೆಝಿಯನ್ ಸ್ವಾಮಿನಾಥನ್ ಮುಖ್ಯ ಭಾಷಣ ಮಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಮುಸ್ತಫಾ ಬಸ್ತಿಕೋಡಿ, ಸಹ ಸಂಘಟನಾ ಅಧ್ಯಕ್ಷ ಡಾ. ಅನುಷ್ ಬೇಕಲ್, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಮಂಜಪ್ಪ ಸಾರಥಿ ಹಾಗೂ ಟ್ರಸ್ಟಿ ಮತ್ತು ಆಡಳಿತಾಧಿಕಾರಿ ಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!