🙏ಹರಿಜಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಮೇಲ್ಚಾವಣಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ D.D ಹಸ್ತಾಂತರ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಾಸರಗೋಡು ತಾಲೂಕಿನ ಮೊಗ್ರಾಲ್ ಪುತ್ತೂರು ಸಮೀಪದ ಹರಿಜಲ್ ಶ್ರೀ ಮಹಾವಿಷ್ಣು ದೇವಸ್ಥಾನದ ಮೇಲ್ಚವಾನಿ ನಿರ್ಮಾಣಕ್ಕೆ 50,000 ರೂಪಾಯಿ ಮೊತ್ತ D.Dಯನ್ನ ನಿನ್ನೆ ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ಶ್ರೀ ದಿನೇಶ್ ಅವರು ಶ್ರೀ ಮಹಾವಿಷ್ಣು ದೇವಸ್ಥಾನದ ಸಮಿತಿಯ ಅಧಕ್ಷರ ಹಾಗೂ ಪದಾಧಿಕಾರಿಗಳ ಉಪ್ಪಸ್ಥಿತಿಯಲ್ಲಿ ಸಮಿತಿಯರಿಗೆ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಸಮಿತಿಯ ಅಧಕ್ಷರಾದ ಶ್ರೀ ಉಮೇಶ್ ಕಡಪುರ , ಪದಾಧಿಕಾರಿಗಳಾದ ಶಿವಪ್ಪ ಗಟ್ಟಿ , ಶ್ರೀನಿವಾಸ , ಸುಂದರ , ಮುರಳೀಧರ ನಾಯಕ್ , ಸಚ್ಚಿತಾನಂದ , ಶ್ರೀಧರ, ಕೃಷ್ಣಪ್ಪ ಗಟ್ಟಿ , ರಮೇಶ್, ವೇಣುಗೋಪಾಲ, ಹಾಗೂ ಮೊಗ್ರಾಲ್ ಪುತ್ತೂರು ಒಕ್ಕೂಟದ ಅಧಕ್ಷರಾದ ಶ್ರೀಮತಿ ಭಾರತಿ , ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಮೊಗ್ರಾಲ್ ಪುತ್ತೂರು ಕಾರ್ಯ ಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಪ್ರಿಯ ಶಾಸ್ತನಗರ ಮೊಗ್ರಾಲ್ ಪುತ್ತೂರು ಉಪ್ಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!