ಬದಿಯಡ್ಕ: ದೈನಂದಿನ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಪರಿಹಾರವ ಅಂಗೈಯಲ್ಲಿ ಅರೋಗ್ಯ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದಲ್ಲಿ ನಡೆಯಿತು.


ಆದುನಿಕ ಜಗತ್ತಿನಲ್ಲಿ ವೇಗ ಭರಾಟೆಯಲ್ಲಿ ವಿದ್ಯಾಭ್ಯಾಸ ,ಉದ್ಯೋಗದ ನಡುವೆ ಮರೆತು ಹೋಗುತ್ತಿರುವ ಆರೋಗ್ಯದ ಕಾಳಜಿಯನ್ನು ಸುಲಲಿತವಾಗಿ ದಿನದ ಕೆಲವೇ ಕೆಲವು ನಿಮಿಷಗಳನ್ನು ಮೀಸಲಿಟ್ಟು ಆರೋಗ್ಯವನ್ನು ಕಾಪಾಡೋದು ಹೇಗೆ ಮತ್ತು ಆರೋಗ್ಯವಾಗಿರಲು ನಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಬೇಕಾದ ನಿಯಮಗಳನ್ನು ಸುಂದರವಾಗಿ ಹೇಳಿಕೊಡುವ ಸಾಂದೀಪಿನಿ ಯೋಗಾಲಯಂ ಬದಿಯಡ್ಕ ಪ್ರಕಾಶನಗೊಳಿಸಿರುವ ಕುಟುಂಬ ಕೈಪಿಡಿ ಅಂಗೈಯಲ್ಲಿ ಆರೋಗ್ಯ ಎನ್ನುವ ಶೀರ್ಷಿಕೆಯ ಪುಸ್ತಕವನ್ನು ಬದಿಯಡ್ಕದ ಶ್ರೀ ಭಾರತಿ ವಿದ್ಯಾಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಶ್ರೀ ಮಧುಕರ್ ರೈ ಕೊರಕ್ಕಾನ ಬಿಡುಗಡೆಗೊಳಿಸಿದರು.


ಅಷ್ಟಾಂಗಯೋಗ , ಸೂಕ್ಶ್ಮ ಯೋಗ,ಪ್ರಾಣಯಾಮ ಶ್ರೀ ಪುಂಡರೀಕಾಕ್ಷ ಆಚಾರ್ಯ ಬೆಳ್ಳೂರು , ಸೂರ್ಯ ನಮಸ್ಕಾರ ಶ್ರೀಮತಿ ದಿವ್ಯ ಶರ್ಮ ಪಳ್ಳತ್ತಡ್ಕ ,ಮುದ್ರಾ ವಿಜ್ಞಾನ ಶ್ರೀಮತಿ ಮಮತಾ ಸಾವಿತ್ರಿ, ಅವಯವಕ್ಕೊಂದು ಸಾವಯವ ,ದಿನಚರಿ ,ಗೃಹ ವೈದ್ಯ ಡಾ | ಸ್ನೇಹ ವಿ ಭಟ್ ಬಿ. ಎನ್ .ವೈ .ಎಸ್ ಮುಜಂಗಾವು ,ಅವರುಗಳ ಲೇಖನ ಈ ಪುಸ್ತಕ ಒಳಗೊಂಡಿದೆ .




ಶ್ರೀ ಮಧುಕರ್ ರೈ ಕೊರಕ್ಕಾನ ಅವರ ಅದ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮವನ್ನು ಅಧ್ಯಕ್ಷ ಶ್ರೀ ಡಿ. ಶಂಕರ್ ದೀಪ ಪ್ರಜ್ವಲನೆ ಗೊಳಿಸಿದರು. ವಾರ್ಡ್ ಸದಸ್ಯೆ ಫಾತಿಮಾ ಪೌಝಿಯಾ ಉಪಸ್ಥಿತರಿದ್ದು ಶುಭ ಹಾರೈಸಿದ್ರು. ಮಾತಾಶ್ರೀಶ್ರೀಮತಿ ಸರೋಜಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದುಶ್ಚಟ, ಮಾದಕ ವಸ್ತು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಸಾಂದೀಪಿನಿ ಯೋಗಾಲಯಂ ಬದಿಯಡ್ಕ, ಕಾಸರಗೋಡು ಇದರ ವತಿಯಿಂದ ಮಾದಕ ವಸ್ತು ಜಾಗೃತಿ ಕಾರ್ಯಾಗಾರ ನಡೆಯಿತು.



ಮಾದಕ ವಸ್ತುಗಳ ಪರಿಣಾಮದ ಬಗ್ಗೆ ಮಕ್ಕಳಿಗೆ ಭಾಷಣ ಸ್ಪರ್ಧೆ , ಪ್ರಶ್ನೋತ್ತರ ಕಾರ್ಯಕ್ರಮ ಜರಗಿತು.



ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘಟಕರು, ಮಾದಕ ವಸ್ತುಗಳಿಗೆ ಬಲಿಯಾದವರು ಜೀವನದ ಅಮೂಲ್ಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ವ್ಯಸನವು ವ್ಯಕ್ತಿಯ ಸ್ವಾಭಿಮಾನ, ಆರ್ಥಿಕ ಸ್ಥಿತಿ ಹಾಗೂ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ವ್ಯಸನಕ್ಕೆ ಬಲಿಯಾದವರನ್ನು ತಿದ್ದಿ, ಅವರಿಗೆ ಉತ್ತಮ ಜೀವನದ ದಾರಿ ತೋರಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.

ಆರೋಗ್ಯದ ಕಾಳಜಿ , ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ದುಶ್ಚಟಮುಕ್ತ, ಲಹರಿಮುಕ್ತ ಹಾಗೂ ವ್ಯಸನಮುಕ್ತ ಗ್ರಾಮ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂಬ ಸಂದೇಶವನ್ನು ಶ್ರೀ ಪುಂಡರೀಕಾಕ್ಷ ಯೋಗಾಚಾರ್ಯ ಬೆಳ್ಳೂರು ತಮ್ಮ ಪ್ರಸ್ತಾವನೆಯಲ್ಲಿ ಒತ್ತಿ ಹೇಳಿದರು.

ಸಾಂದೀಪಿನಿ ಯೋಗಾಲಯಂನ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಕಾರ್ಯಕ್ರಮವನ್ನು ಸಂಯೋಜಿಸಿದರು. ಶ್ರೀ ಲಕ್ಷ್ಮಣ ಪ್ರಭು ಬದಿಯಡ್ಕ ಸ್ವಾಗತಿಸಿ, ಶ್ರೀ ಗಂಗಾಧರ ಮಾಸ್ಟರ್ ಮವ್ವಾರು ವಂದಿಸಿದರು. ಮಾತಾಶ್ರೀ ಶ್ರೀಮತಿ ಮಮತಾ ಸಾವಿತ್ರಿ ಅವರು ನಿರೂಪಿಸಿದರು.

ಬಿಂದು ಜ್ಯುವೆಲ್ಲರಿ ಕಾಸರಗೋಡು ಸಹಯೋಗದಲ್ಲಿ, ನಮ್ಮ ಮೀಡಿಯಾ ಹೊಸಂಗಡಿ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.

