ನಿರಂತರ ತೈಲ ಬೆಲೆಯೇರಿಕೆ,ಉಜ್ವಲ ಸಿಲಿಂಡರ್ ರಿಯಾಯಿತಿ ಇಳಿಕೆ: ಕಾರ್ಮಿಕ ವರ್ಗಗಳಿಗೆ ಕೇಂದ್ರ ಸರಕಾರದ ಅನ್ಯಾಯದ SDTU ವತಿಯಿಂದ ಅಭಿಯಾನ

ಇತ್ತೀಚೆಗೆ ನಡೆಯುತ್ತಿರುವ ಮಧ್ಯ ಪ್ರಾಚ್ಯ ರಾಷ್ಟ್ರಗಳ ಯುದ್ಧದ ನೆಪವನ್ನಿಟ್ಟುಕೊಂಡು ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ತೈಲಬೆಲೆಯೇರಿಕೆ ಮಾಡುತ್ತಿದ್ದು ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಸಿಲಿಂಡರ್ ಸಂಖ್ಯೆಯನ್ನು ಕಳೆದ ವರ್ಷಕ್ಕಿಂತ ಕಡಿತಗೊಳಿಸಿ ನಾಲ್ಕಕ್ಕೆ ಸೀಮಿತಗೊಳಿಸಿರುವುದು ಜನಸಾಮಾನ್ಯರ ಮೇಲೆ ಮತ್ತೊಂದು ಆರ್ಥಿಕ‌ ಸಂಕಷ್ಟವನ್ನುಂಟು ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಮ್ ಗುರುವಾಯನಕೆರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ,ನಿರುದ್ಯೋಗ ದಿಂದಾಗಿ ಕಂಗೆಟ್ಟಿರುವ ಕಾರ್ಮಿಕಕುಟುಂಬಗಳಿಗೆ ತೈಲಬೆಲೆಯೇರಿಕೆ ಹಾಗೂ ಅಡುಗೆ ಅನಿಲ ದರ ಏರಿಕೆ ಹಾಗೂ ಮಹಿಳೆಯರು ಮತ್ತು ಕುಟುಂಬಗಳ ಕಲ್ಯಾಣದ ಹೆಸರಿನಲ್ಲಿ ಜಾರಿಗೆ ತಂದ ಉಜ್ವಲ ಯೋಜನೆಯ ಸಬ್ಸಿಡಿಯನ್ನು ಕಡಿತಗೊಳಿಸಿರುವುದು ಕೂಡಾ ಕೇಂದ್ರ ಸರ್ಕಾರದ ಈ ಜನವಿರೋಧಿ‌,ಕಾರ್ಮಿಕ ವಿರೋಧಿ ನೀತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ.

ಯುಧ್ದಗಳು ಇನ್ನು ಎಲ್ಲಿ ನಡೆದರೂ ನಮ್ಮ ದೇಶದಲ್ಲಿ ತೈಲ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕೇಂದ್ರ ಸರಕಾರವು ಕಂಡುಕೊಳ್ಳಬೇಕು ಅಡುಗೆ ಅನಿಲ ದರವನ್ನು ತಕ್ಷಣ ಹಿಂದಿನ ಮಟ್ಟಕ್ಕೆ ಇಳಿಸಬೇಕು ಹಾಗೂ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಸಬ್ಸಿಡಿಯನ್ನು ಮರುಸ್ಥಾಪಿಸಬೇಕು ಎಂದು SDTU ಆಗ್ರಹಿಸುತ್ತದೆ.

ಕೇಂದ್ರ ಸರಕಾರದ ಈ ಅನ್ಯಾಯದ ವಿರುದ್ಧ SDTU ರಾಜ್ಯಾದ್ಯಂತ ಕಾರ್ಮಿಕ ಬಂಧುಗಳಿಗೆ,ಮಹಿಳೆಯರಿಗೆ,ಬಡಮಧ್ಯಮ ವರ್ಗದ ಜನರಿಗೆ ಜಾಗೃತಿ‌ ಮೂಡಿಸುವಂತಹ,ಕೇಂದ್ರ ಸರಕಾರವನ್ನು ಎಚ್ಚರಿಸುವಂತಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು SDTU ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಸಲೀಮ್ ಗುರುವಾಯನಕೆರೆ ಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!