ತಿರುವನಂತಪುರಂ: ಕೇರಳ ರಾಜ್ಯ ಲಾಟರಿ ಇಲಾಖೆಯ ಪೂಜಾ ಬಂಪರ್ ಲಾಟರಿಯ ಪ್ರಥಮ ಬಹುಮಾನವಾದ ₹12 ಕೋಟಿ JC234427 ಸಂಖ್ಯೆಯ ಟಿಕೆಟ್‌ಗೆ ಲಭಿಸಿದೆ. ಇಂದು ಮಧ್ಯಾಹ್ನ 2 ಗಂಟೆಗೆ ತಿರುವನಂತಪುರಂನ ಗೋರ್ಕಿ ಭವನದಲ್ಲಿ ಲಾಟರಿ ಡ್ರಾ ನಡೆಯಿತು.
ಕಿಂಗ್ ಸ್ಟಾರ್ ಏಜೆನ್ಸಿ ಮೂಲಕ ಮಾರಾಟವಾದ ಟಿಕೆಟ್‌ಗೆ ಪ್ರಥಮ ಬಹುಮಾನ ದೊರೆತಿದೆ. ಎಸ್. ಸುರೇಶ್ ಅವರು ಈ ಟಿಕೆಟ್ ಮಾರಾಟ ಮಾಡಿದ ಏಜೆಂಟ್ ಆಗಿದ್ದಾರೆ.
₹300 ಬೆಲೆಯ ಈ ಲಾಟರಿಯಲ್ಲಿ ಎರಡನೇ ಬಹುಮಾನವಾಗಿ ತಲಾ ₹50 ಲಕ್ಷದಂತೆ 10 ಮಂದಿಗೆ, ಮೂರನೇ ಬಹುಮಾನವಾಗಿ ತಲಾ ₹5 ಲಕ್ಷದಂತೆ 10 ಮಂದಿಗೆ, ನಾಲ್ಕನೇ ಬಹುಮಾನವಾಗಿ ತಲಾ ₹3 ಲಕ್ಷದಂತೆ 5 ಮಂದಿಗೆ ಹಾಗೂ ಐದನೇ ಬಹುಮಾನವಾಗಿ ತಲಾ ₹2 ಲಕ್ಷದಂತೆ 10 ಮಂದಿಗೆ ಬಹುಮಾನ ದೊರೆಯಲಿದೆ. ಸಮಾಧಾನಕರ ಬಹುಮಾನವಾಗಿ ತಲಾ ₹1 ಲಕ್ಷದಂತೆ ನಾಲ್ವರಿಗೆ ನೀಡಲಾಗುತ್ತದೆ.

JA, JB, JC, JD ಮತ್ತು JE ಎಂಬ ಐದು ಸರಣಿಗಳಲ್ಲಿ ಮುದ್ರಿಸಲಾಗಿದ್ದ ಒಟ್ಟು 45 ಲಕ್ಷ ಟಿಕೆಟ್‌ಗಳು ಲಾಟರಿ ಇಲಾಖೆಯಿಂದ ಸಂಪೂರ್ಣವಾಗಿ ಮಾರಾಟವಾಗಿವೆ.
ಇದಕ್ಕೂ ಮೊದಲು ₹500 ಬೆಲೆಯ ಓಣಂ ಬಂಪರ್ ಲಾಟರಿಗಾಗಿ ಮುದ್ರಿಸಲಾಗಿದ್ದ 90 ಲಕ್ಷ ಟಿಕೆಟ್‌ಗಳೂ ಸಂಪೂರ್ಣವಾಗಿ ಮಾರಾಟವಾಗಿದ್ದವು.
ಎರಡನೇ ಬಹುಮಾನ ಪಡೆದ ಟಿಕೆಟ್ ಸಂಖ್ಯೆಗಳು:
- JA 400634
- JB 346893
- JC 682550
- JD 304468
- JE 632364
- JA 969347
- JB 866718
- JC 648565
- JD 766007
- JE 324064

