ಕುಂಬಳೆ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಮತ್ತು ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಆಶ್ರಯದಲ್ಲಿ ನವಜೀವನೋತ್ಸವ ಹಾಗೂ ಕೆಸರ್ದ ಕಂಡದ್ ಕುಸಲ್ದ ಗೊಬ್ಬು ಲು ಅಗೋಸ್ಟ್ -23 ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಲಿದ್ದಾರೆ.
ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ. ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತೋಡಿ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಜೀವನಾಥ ಜೋಡುಕಟ್ಟೆ , ಅಖಿಲೇಶ್ ನಗುಮುಗಮ್ , ಗೋಪಾಲಶೆಟ್ಟಿ ಅರಿಬೈಲು , ಮಂಜುನಾಥ ಆಳ್ವ, ಅಶ್ವತ್ ಪೂಜಾರಿ ಲಾಲಬಾಗ್, ಹರೀಶ್ ಶೆಟ್ಟಿ ಕಡಂಬಾರು, ಮುಂತಾದವರು ಮುಖ್ಯ ಅತಿಥಿಗಳಾಗಿರುವರು.
ಸಂಜೆನಡೆಯುವ ಸಮರೂಪ ಸಮಾರಂಭದಲ್ಲಿ ನಾರಾಯಣ ಟೈಲಾರ್ ಕಳತ್ತೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀ ಬಾಬು ನಾಯ್ಕ್, ಶಶಿಕಲಾ ಸುವರ್ಣ , ಕಾಸರಗೋಡು ತಾಲೂಕು ಯೋಜನಾಧಿಕಾರಿ ದಿನೇಶ್ , ಗಣೇಶ್ ಆಚಾರ್ಯ , ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂಧರ್ಭದಲ್ಲಿ ಸಾಧಕರಿಗೆ ಗೌರವ , ವಿವಿಧ ಸ್ಪರ್ಧೆ ನಡೆಯಲಿದೆ.