ಬಡ ವರ್ಗದ ಪಾಲಿಗೆ ವರವಾದ 2.0 ಜಿ ಎಸ್ ಟಿ

ಮಂಗಳೂರು: ಐತಿಹಾಸಿಕ 2.0 ಜಿ ಎಸ್ ಟಿ ಭಾರತದಾದಂತ್ಯ ಜಾರಿಗೆ ಬಂದಿದ್ದು ಇದು ಜನ ಸಾಮಾನ್ಯರಲ್ಲಿ ಸಾಕಷ್ಟು ಉಳಿತ್ತಾಯ ಮಾಡುವ ಕಾರಣ ಇದನ್ನು ಉಳಿತಾಯದ ಉತ್ಸವವಾಗಿ ಭಜತ್ ಉತ್ಸವವಾಗಿ ಬಿಜೆಪಿ ಮುಖಂಡರು ಕಾರ್ಯಕರ್ತರು ದೇಶದಾದಂತ್ಯ ಆಚರಿಸ್ತಾ ಇದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಜಿ ಎಸ್ ಟಿ ಯನ್ನು ಸರಳೀಕರಣ ಮಾಡಲಾಗಿದ್ದು ಇದರಿಂದ ಸಾಕಷ್ಟು ಉಳಿತ್ತಾಯವಾಗುವ ಜೊತೆಗೆ ತೆರೆಗೆ ಪದ್ಧತಿಯನ್ನು ಜನರು ಸುಲಭವಾಗಿ ತಿಳಿಯಲು ಸಹಕಾರಿಯಾಗಲಿದೆ. ಮತ್ತು ಉತ್ಪಾದಕರು -ಮಾರುಕಟ್ಟೆ – ಗ್ರಾಹಕ ವಲಯದಲ್ಲಿನ ಕೊಂಡುಕೊಳ್ಳುವಿಕೆ ಮಾರುವಿಕೆಯ ಹೆಚ್ಚಳಕ್ಕೆ ಕಾರಣವಾಗಲಿದೆ.

ಆಹಾರ ವಸ್ತುಗಳು ,ಔಷಧಿ, ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳು, ವಾಹನಗಳ ಬೆಲೆಯು ಕಡಿಮೆಯಾಗಲು ಈ ತೆರಿಗೆ ಪದ್ಧತಿಯಲ್ಲಿನ ಬದಲಾವಣೆ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದರ2.0 ಜಿ ಎಸ್ ಟಿ ಯ ಜಾರಿಯು ಭಾರತದ ಆರ್ಥಿಕತೆಗೆ ಪುಷ್ಟಿಯನ್ನು ನೀಡಲಿದೆ. ಇದು ಉದ್ಯೋಗದ ವೃದ್ಧಿಗೂ ಸಹಕಾರ ವಾಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಜಯ್ ಪ್ರಭು, ಸಿ ಎ ಶಾಂತಾರಾಮ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!