ನೆಕ್ಸ್ಟ್‌ಜೆನ್ ಸ್ಕಿಲ್ ಕಾನ್ಕ್ಲೇವ್ – 2025ರಲ್ಲಿ ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ8 ಪ್ರಶಸ್ತಿ ಪಡೆದು ಸಾಧನೆ

[5:22 am, 24/9/2025] Reporter Girish Mangalore: ಮಂಗಳೂರು: ವಲಚ್ಚಿಲ್‌ನ ಶ್ರೀನಿವಾಸ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಪ್ರತಿಷ್ಠಿತ ನೆಕ್ಸ್ಟ್‌ಜೆನ್ ಸ್ಕಿಲ್ ಕಾನ್ಕ್ಲೇವ್ – 2025ರಲ್ಲಿ ಅನೇಕ ಆಲ್-ಇಂಡಿಯಾ ಟಾಪ್ 5 ಪ್ರಶಸ್ತಿಗಳನ್ನು ಗಳಿಸಿದೆ. ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 17ರಿಂದ 19ರವರೆಗೆ ಶಿಮ್ಲಾದ ಈಸ್ಟ್ ಬೋರ್ಣ್ ರೆಸಾರ್ಟ್‌ನಲ್ಲಿ ನಡೆಯಿತು. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಅಕಾಡೆಮಿಷಿಯನ್ನರು, ಉದ್ಯಮ ತಜ್ಞರು ಹಾಗೂ ನೀತಿ ರೂಪಕರು ಒಂದೇ ವೇದಿಕೆಯಲ್ಲಿ ಸೇರಿ ಕೌಶಲ್ಯಾಭಿವೃದ್ಧಿ, ಕೃತಕ ಬುದ್ಧಿಮತ್ತೆ ಹಾಗೂ ಕೈಗಾರಿಕಾ ಹೊಂದಾಣಿಕೆಯ ಶಿಕ್ಷಣದ ಇತ್ತೀಚಿನ ಪ್ರವೃತ್ತಿಗಳ ಕುರಿತು ಚರ್ಚೆ ನಡೆಸಿದರು.


ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯಾ ಡಿ. ಅವರು ಸಂಸ್ಥೆಯನ್ನು ಪ್ರತಿನಿಧಿಸಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ಭವಿಷ್ಯದ ಸುಧಾರಿತ ಕೌಶಲ್ಯಾಭಿವೃದ್ಧಿ ಸಹಕಾರದ ಮಾರ್ಗಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಮಾನ್ಯ ರಾಜ್ಯಪಾಲರಾದ ಶ್ರೀ ಶಿವಪ್ರತಾಪ ಶುಕ್ಲಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ವಿವಿ ಮಾನ್ಯ ಕುಲಾಧಿಪತಿಗಳಾದ ಡಾ. ಸಿ.ಎ. ರಾಘವೇಂದ್ರ ರಾವ್ ಅವರು, ಎಸ್‌ಐಟಿ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಅಧ್ಯಾಪಕರ ಶ್ರಮವನ್ನು ಮೆಚ್ಚಿದರು. “ಈಗಿನ ದಿನಗಳಲ್ಲಿ ಮಾನ್ಯತೆ ದೊರಕುವುದು ನಿರಂತರ ಪರಿಶ್ರಮದಿಂದ ಮಾತ್ರ. ಎಸ್‌ಐಟಿ ವಿದ್ಯಾರ್ಥಿಗಳು ನವೀಕೃತ ಪಠ್ಯಕ್ರಮದೊಂದಿಗೆ ತರಬೇತಿ ಪಡೆಯುತ್ತಿದ್ದಾರೆ, ಇದರಿಂದ ಅವರು ಕೈಗಾರಿಕೆಗೆ ಸಿದ್ಧರಾಗುತ್ತಿದ್ದಾರೆ” ಎಂದು ಹೇಳಿದರು.


ಮಾನ್ಯ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್ ಅವರು ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಅವಕಾಶಗಳು ಮತ್ತು ಸರಿಯಾದ ತರಬೇತಿಯನ್ನು ಒದಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿದರು. ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಎಸ್‌ಐಟಿ ಗೆದ್ದಿರುವುದು ಐತಿಹಾಸಿಕ ಸಾಧನೆಯೆಂದು ಅವರು ಹೇಳಿದರು. “ತಂತ್ರಜ್ಞಾನ ಪ್ರತಿದಿನವೂ ಬದಲಾಗುತ್ತಿದೆ, ಪ್ರತಿಯೊಂದು ಬದಲಾವಣೆಯೂ ಪ್ರಗತಿಯನ್ನು ತರುತ್ತದೆ. ಕಲಿಕೆಗೆ ಅಂತ್ಯವಿಲ್ಲ – ಅದು ಸಾಗರದಷ್ಟು ವಿಶಾಲ,” ಎಂದು ಅವರು ಅಭಿಪ್ರಾಯ ಪಟ್ಟರು.
ನಮ್ಮ ಸಂಸ್ಥೆಯು ಈ ಎಂಟು ಪ್ರತಿಷ್ಠಿತ ಪ್ರಶಸ್ತಿ ಗಳನ್ನು ಪಡೆದು ಹಲವು ವಿಭಾಗಗಳಲ್ಲಿ ಆಲ್ ಇಂಡಿಯಾ ಟಾಪ್ 5 ಸ್ಥಾನ ಪಡೆದಿದೆ.

  1. ಅತ್ಯುತ್ತಮ ಪ್ರದರ್ಶನ ನೀಡಿದ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ -2025
  2. ಅತ್ಯುತ್ತಮ ಪ್ರದರ್ಶನ ನೀಡಿದ ಕೋರ್ಡಿನೇಟರ್ – 2025
  3. ಅತ್ಯುತ್ತಮ ಪ್ರದರ್ಶನ ನೀಡಿದ ಸೆಂಟರ್ ಆಫ್ ಎಕ್ಸಲೆನ್ಸ್-2025
  4. AI ಸ್ಕಿಲ್ಲಿಂಗ್ ಎಕ್ಸಲೆನ್ಸ್ ಪ್ರಶಸ್ತಿ-2025
  5. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ-Celonis domain
  6. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ -Microchip domain
  7. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ – Zscalar domain
  8. ಅತ್ಯುತ್ತಮ ಪ್ರದರ್ಶನ ನೀಡಿದ ಸಂಸ್ಥೆ – Wadhwani domain

ಈ ಸಾಧನೆಗಳು ನಮ್ಮ ಸಂಸ್ಥೆಯು ಸದಾ ತಂತ್ರಜ್ಞಾನ ನವೀನತೆ ಹಾಗೂ ಕೈಗಾರಿಕಾ ಅಗತ್ಯಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧರನ್ನಾಗಿಸಲು ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಬಿಂಬಿಸುತ್ತವೆ ಇದು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಆಡಳಿತದ ಸಮರ್ಪಣೆಯ ಪ್ರತೀಕವಾಗಿದ್ದು ನಮ್ಮ ಸಂಸ್ಥೆಯನ್ನು ನೆಕ್ಸ್ಟ್ ಜೆನ್ ಸ್ಕಿಲ್ಸ್ ಪ್ರಮುಖ ಕೇಂದ್ರವನ್ನಾಗಿ ಸ್ಥಾಪಿಸಿದೆ.
ಶಿಮ್ಲಾದ ಸಮಾವೇಶದಲ್ಲಿ ನಮ್ಮ ಗೌರವಾನ್ವಿತ ಪ್ರಾಚಾರ್ಯರಾದ ಡಾ ಶ್ರೀನಿವಾಸ ಮಯ್ಯ ಡಿ. ಅವರು ಸಂಸ್ಥೆಯನ್ನು ಪ್ರತಿನಿಧಿಸಿ, ಗಣ್ಯರೊಂದಿಗೆ ಸಂವಾದ ನಡೆಸಿ, ಉನ್ನತ ಕೌಶಲ್ಯಾತ್ಮಕ ಉಪಕ್ರಮಗಳಲ್ಲಿ ಭವಿಷ್ಯದ ಸಹಕಾರದ ಮಾರ್ಗಗಳನ್ನು ಅನ್ವೇಷಿಸಿದರು.ನಮ್ಮ ಸಂಸ್ಥೆ ಆಲ್ ಇಂಡಿಯಾ ಟಾಪ್ – 5 ಪ್ರಶಸ್ತಿಗಳನ್ನು ಅನೇಕ ವಿಭಾಗಗಳಲ್ಲಿ ಗಳಿಸಿರುವುದು ಹೆಮ್ಮೆಯ ವಿಚಾರವಾಗಿದ್ದು ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಕೈಗಾರಿಕಾ ಸಿದ್ಧತೆಯಲ್ಲಿ ರಾಷ್ಟ್ರದ ಪ್ರಮುಖ ಸಂಸ್ಥೆಗಳಲ್ಲಿ ನಮ್ಮ ಸ್ಥಾನವನ್ನು ದೃಢಪಡಿಸಿದೆ.

ಉಪಸ್ಥಿತಿ:
ಡಾ. ಸಿಎ ಎ. ರಾಘವೇಂದ್ರ ರಾವ್‌, ಮಾನ್ಯ ಕುಲಾಧಿಪತಿ, ಶ್ರೀನಿವಾಸ ವಿವಿ
ಡಾ. ಎ. ಶ್ರೀನಿವಾಸ ರಾವ್‌, ಮಾನ್ಯ ಸಹ ಕುಲಾಧಿಪತಿ, ಶ್ರೀನಿವಾಸ ವಿವಿ
ಡಾ. ಶ್ರೀನಿವಾಸ ಮಯ್ಯಾ ಡಿ – ಪ್ರಿನ್ಸಿಪಲ್, SIT
ಡಾ. ಅಜಯ್‌ಕುಮಾರ್‌, ಅಭಿವೃದ್ಧಿ ರಿಜಿಸ್ಟ್ರಾರ್‌, ಶ್ರಿನಿವಾಸ ವಿವಿ.
ಡಾ. ಧೀರಜ್ ಹೆಬ್ರಿ – ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್, SIT
[6:14 pm, 24/9/2025] Reporter Girish Mangalore: ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 ಕಾರ್ಯಕ್ರಮದ ಅಂಗವಾಗಿ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಕೀರ್ತನಾ ಪ್ರತಿಷ್ಠಾನ ಮುಜುಂಗಾವು ಇದರ ಆಶ್ರಯದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ಬಗ್ಗೆ ಗಾನಗಂಗೆ ಕೃತಿ ರಚಿಸಿದ ಖ್ಯಾತ ಪತ್ರಕರ್ತ,ಲೇಖಕ, ಸಂಘಟಕ, ನಿರೂಪಕ ರವಿ ನಾಯ್ಕಾಪು ಅವರಿಗೆ ಹೃದ್ಯ ಗೌರವಾರ್ಪಣೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಪಾಂಗೋಡು ಪ್ರವೀಣ ನಾಯಕ ಅವರ ಗೌರವ ಉಪಸ್ಥಿತಿಯಲ್ಲಿ ಕನ್ನಡ ಜಾನಪದ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕನ್ನಡ ಭವನದ ಸಂಸ್ಥಾಪಕರಾದ ಡಾಕ್ಟರ್ ವಾಮನ್ ರಾವ್ ಬೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರವಿ ನಾಯ್ಕಾಪು ಓರ್ವ ಬಹುಮುಖ ಪ್ರತಿಭೆ. ಪತ್ರಿಕಾ ರಂಗದಲ್ಲಿ ಮಾತ್ರವಲ್ಲ ಕಾಸರಗೋಡಿನ ಹಲವಾರು ಕಡೆ ನಿರೂಪಕರಾಗಿ ಜನರ ಮನ ಗೆದ್ದಿದ್ದಾರೆ. ಹಲವಾರು ಕಡೆ ಪ್ರಶಸ್ತಿಗಳನ್ನು ಸ್ವೀಕರಿಸಿದ ಇವರಿಗೆ ಇನ್ನೂ ಹೆಚ್ಚಿನ ಕಡೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಒದಗುವಂತಾಗಲಿ ಎಂದರು. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಎ ಶ್ರೀನಾಥ ರವಿ ನಾಯ್ಕಾಪು ಅವರ ಪರಿಚಯ ಭಾಷಣ ಮಾಡಿ ಮಾತನಾಡಿ ಕುಂಬಳೆ ಸಮೀಪದ ನಾಯ್ಕಾಪು ನಿವಾಸಿಯಾದ ಇವರು ಪತ್ರಕರ್ತ ಲೇಖಕ ಮಾತ್ರವಲ್ಲದೆ ಕನ್ನಡ ಕಾರ್ಯಕ್ರಮಗಳ ಶ್ರೇಷ್ಠ ನಿರೂಪಕರು ಆಗಿದ್ದಾರೆ. ಗಾನಗಂಗೆ ಕೃತಿಯೊಂದಿಗೆ ದಾನಗಂಗೆ ಸ್ನೇಹ ಗಂಗೆ ಸಾವಿರದ ಸಾಧಕ ಸಮಾಜ ಸಂಪದ ಮುಂತಾದವುಗಳು ಇವರ ಪ್ರಕಟಿತ ಕೃತಿಗಳು ಈ ಪೈಕಿ ನೇಹಗಂಗೆಯು ಎರಡನೆ ಮುದ್ರಣವನ್ನು ಕಂಡಿದೆ. ಸ್ನೇಹ ಗಂಗೆಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿರುವುದಲ್ಲದೆ ತೃತೀಯ ಸಂಕ್ಷಿಪ್ತ ರೂಪವು ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಬಿಸಿಎ ನಾಲ್ಕನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಒಳಪಟ್ಟಿರುವುದು ಗಮನೀಯ. ಕಥೆ ಕವನಗಳು ಸಾಮಾಜಿಕ ಸ್ಪಂದನದ ಮಾನವೀಯ ಕಳಕಳಿಯ ನೂರಾರು ಬರಹಗಳು ಪರಿಸರ ಸಂಬಂಧಿ ಲೇಖನಗಳು ಕನ್ನಡದ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಕನ್ನಡ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಪ್ರಧಾನ ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷನೂ ಆಗಿರುವ ಇವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಒದಗಿ ಬರಲಿ ಎಂದು ಹೇಳಿದರು. ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ರವಿ ನಾಯ್ಕಾಪು ಅವರನ್ನು ಪ್ರಶಸ್ತಿ ಪತ್ರ, ಫಲಕ ಸಹಿತ ಶಾಲು ಹೊದಿಸಿ ಗೌರವಿಸಿದರು. ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ನಾಯ್ಕಾಪು ನನಗೆ ದೊರೆತ ಸನ್ಮಾನ ನನ್ನ ಸಹೋದ್ಯೋಗಿ ಬಂಧುಗಳಿಗೂ ಹಿತೈಷಿಗಳಿಗೂ ಸಮರ್ಪಿಸುತ್ತೇನೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕೆ ಯು ಡಬ್ಲ್ಯೂ ಜೆ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪತ್ರಿಕಾ ದೃಶ್ಯ ಮಾಧ್ಯಮಗಳೆರಡರಲ್ಲಿಯೂ ಪಳಗಿರುವ ರವಿ ನಾಯ್ಕಾಪು ಅನೇಕ ಮಾಧ್ಯಮಗಳಲ್ಲಿ ವರದಿಗಾರ ಉಪಸಂಪಾದಕ ಸುದ್ದಿ ಸಂಪಾದಕ ಸಂಪಾದಕರ ಹುದ್ದೆಗಳಲ್ಲಿ ಟಿವಿ ಚಾನೆಲ್ ಗಳ ಸುದ್ದಿ ಸಂಪಾದಕ ವಾರ್ತಾವಾಚಕನಾಗಿ ಸೇವೆಸಲ್ಲಿಸಿ, ಹಲವು ಕ್ಷೇತ್ರಗಳಲ್ಲಿ ಪಳಗಿರುವ ಇವರು ಪತ್ರಕರ್ತರಿಗೆ ಹೆಮ್ಮೆ. ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಎ ಆರ್ ಸುಬ್ಬಯ್ಯ ಕಟ್ಟೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಅಧ್ಯಕ್ಷರಾದ ಚನಿಯಪ್ಪ ನಾಯ್ಕ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಖಿಲೇಶ್ ನಗುಮುಗಂ , ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಪುಷ್ಪರಾಜ್ ಬಿಎನ್ ಉಪಸ್ಥಿತರಿದ್ದರು. ಸಂಕೀರ್ತನ ಪ್ರತಿಷ್ಠಾನ ಮುಜಂಗಾವು ಇದರ ಅಧ್ಯಕ್ಷರಾದ ಹರಿದಾಸ್ ಜಯಾನಂದ ಕುಮಾರ್ ಹೊಸದುರ್ಗ ಸ್ವಾಗತಿಸಿ ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದಗೈದರು. ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!