ಮಂಜೇಶ್ವರ: ಕೇರಳ ರಾಜ್ಯ ಹೈಯರ್ ಗೂಡ್ಸ್ ಓನರ್ಸ್ ಅಸೋಸಿಯೇಶನ್ 9ನೇ ಕಾಸರಗೋಡು ಜಿಲ್ಲಾ ಸಮ್ಮೇಳನದ ಅಂಗವಾಗಿ ಕೇರಳ ಕರ್ನಾಟಕ ಗಡಿಪ್ರದೇಶವಾದ ತಲಪ್ಪಾಡಿಯಿಂದ ಧ್ವಜ ಹಾಗೂ ಧ್ವಜ ಸ್ತಂಭದ ಮೆರವಣಿಗೆಗೆ ಚಾಲನೆ ದೊರಕಿತು.
ಕೆಎಸ್ಎಚ್ಜಿಒ ಜಿಲ್ಲಾ ಉಪಾಧ್ಯಕ್ಷ ಫಿರೋಜ್ ಪಡಿಂಇಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ವಿ. ಬಾಲನ್ ಉದ್ಘಾಟಿಸಿದರು.
ಜಾಥಾ ಕ್ಯಾಪ್ಟನ್ ಸುಕುಮಾರನ್ ಕೊಪ್ಪಲಂ, ವೈಸ್ ಕ್ಯಾಪ್ಟನ್ ಹನೀಫ್ ಕರಿಂಗಪ್ಪಲ್ಲಂ, ಜಾಥಾ ಮ್ಯಾನೇಜರ್ ರಜಾಕ್ ಕಾಫಿಲ, ರಿಯಾಜ್ ಚೌಕಿ, ಬಶೀರ್ಕೋಟೂರ್, ಅಬು ಹ್ಯಾಪಿ, ಪ್ರವೀಣ್ ಎಸ್, ಡಿ.ಎಸ್. ಅಬ್ದುಲ್ಲಾ ಅಪೊಲೊ ಮುಂತಾದವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ಲತೀಫ್ ಸ್ವಾಗತಿಸಿ ಪುಷ್ಪರಾಜ್ ಧನ್ಯವಾದ ಅರ್ಪಿಸಿದರು.