ಮಂಗಳೂರು: ನಗರದ ಹೃದಯ ಭಾಗವೆಂದು ಕರೆಯಲ್ಪಡುವ ಹಂಪನ ಕಟ್ಟೆಯ ಮಿನಿ ವಿಧಾನಸೌಧ ಎದುರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಹೂವಿನ ವ್ಯಾಪಾರ ಜೋರಾಗಿಯೇ ಇತ್ತು. ಘಟ್ಟ ಪ್ರದೇಶದಿಂದ ಕರಾವಳಿಯ ಕಡೆಗೆ ಹೂವಿನ ರಾಶಿಯೇ ಹರಿದು ಬಂದಿತ್ತು. ಸೇವಂತಿಕೆ, ಗೊಂಡೆ ಹೂವುಗಳ ರಾಶಿಯು ಕಣ್ಣಿಗೆ ಹಬ್ಬವಾಗಿತ್ತು. ಆದರೆ ಇದೀಗ ದೀಪಾವಳಿ ಹಬ್ಬ ಮುಗಿಯುತ್ತಿದಂತೆಯೇ ತಂದ ಹೂವುಗಳನ್ನು ಪಾದಚಾರಿ ಮಾರ್ಗದಲ್ಲೇ ಬಿಟ್ಟು ಹೋಗಿದ್ದು. ಅದು ಅಲ್ಲೇ ಚೆಲ್ಲಾಪಿಲ್ಲಿಯಾಗಿ ಉಳಿದು ಬಿಟ್ಟಿದೆ.
ಸಂಜೆಯ ವೇಳೆಗೆ ಎಡೆ ಬಿಡದೆ ಸುರಿದ ಹಿಂಗಾರು ಮಳೆಯು ಹೂವಿನ ವ್ಯಾಪಾರಕ್ಕೆ ತೊಡಕಾಗಿ ನಿರೀಕ್ಷಿತ ವ್ಯಾಪಾರ ನಡೆಯದೇ ಹೂವು ಅಲ್ಲೇ ಕೊಳೆತು ಉಳಿದುಕೊಳ್ಳುವಂತೆ ಮಾಡಿದೆ. ಹೂವನ್ನು ಅಲ್ಲಿಯೇ ಎಸೆದು ಹೋಗಿದ್ದರಿಂದ ಪಾದಚಾರಿಗಳು ತ್ರಾಸ ಪಡುವಂತೆ ಆಗಿದೆ. ಯಾಕೆಂದರೆ ಪಾದಚಾರಿಗಳು ನಡೆಯುವ ಮಾರ್ಗದಲ್ಲೇ ಹೂವಿನ ಕಸ ಇದ್ದು ಅದರ ಮೇಲೆ ಮಳೆ ಸುರಿದ ಪರಿಣಾಮ ಜಾರುವ ಸಾಧ್ಯತೆಗಳು ಹೆಚ್ಚಿವೆ. ಹೂವಿನ ವ್ಯಾಪಾರಿಗಳು ಮಾರಾಟದಿಂದ ಹಿಂದೆ ಸರಿಯುವ ಸಮಯದಲ್ಲಿ ಅದರ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆಯನ್ನು ನೀಡಬೇಕು.
✍️ಗಿರೀಶ್ ಪಿಎಂ
ಕಾಸರಗೋಡು