ವರ್ಕಾಡಿ : ಎಸ್ ಸಿ ಸಮುದಾಯ ಮತ್ತು ಪರಿಶಿಷ್ಟ ಪಂಗಡ ಈ ಬಾರಿ ಬಿಜೆಪಿ ಗೆ ರಾಜಕೀಯ ಬೆಂಬಲ ನೀಡಲಿದೆ.
ಹಿಂದೂ ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆ ಶಬರಿಮಲೆ ಮಲೆ ಯಲ್ಲಿ ಲೂಟಿ ಹಾಗೂ ಅನಾಚಾರ ಮಾಡಿರುವ ಎಡರಂಗ, ಎಸ್ ಸಿ ಸಮುದಾಯದ ವೋಟ್ ನ್ನು ಮುಸ್ಲಿಂ ಲೀಗ್ ಗೆ ಹಾಕಿಸುವ ಕಾಂಗ್ರೆಸ್ ಕುತಂತ್ರ ಕ್ಕೆ ಇನ್ನು ಪರಿಶಿಷ್ಟ ಜಾತಿ ಸಮುದಾಯ ಬಲಿ ಆಗುವುದಿಲ್ಲ ಎಂದು ಎಸ್ ಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ರಾಮ ಏದರ್ ಮಂಡಲ ಸಭೆಯಲ್ಲಿ ಹೇಳಿದರು.
ದೇಶದಲ್ಲಿ ಬುಡಕಟ್ಟು ವಿಭಾಗದ ವ್ಯೆಕ್ತಿಯನ್ನು ರಾಷ್ಟ್ರ ಪತಿ, ಮಾಡಿದ್ದು, ಸಮುದಾಯದವರು ಅತೀ ಹೆಚ್ಚು ಶಾಸಕರು, ಸಂಸದರು ಇರುವ ಪಕ್ಷ ಬಿಜೆಪಿ, ಬಿಜೆಪಿ ಯಲ್ಲಿ ಮಾತ್ರ ಸಾಮಾಜಿಕ ನ್ಯಾಯ ಇದೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಮಧೂ ಒಳಪ್ಪಿಲ್, ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ ಕೆ ಕಯ್ಯರ್, ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ರಮೇಶ್ ಆಟ್ಟೆ ಗೋಳಿ, ಏತಿರಾಜ್ ಶೆಟ್ಟಿ, ಪ್ರಮೋದ್ ಕುಂಡೇರಿ, ಭಾಸ್ಕರ್ ಪೊಯ್ಯೇ, ಉಪಸ್ಥಿತಿ ಇದ್ದರು.ಸಂದೇಶ್ ಪೆರ್ವೋಡಿ ಸ್ವಾಗತಿಸಿ ವಂದಿಸಿದರು.
ಎಸ್ ಸಿ ಮೋರ್ಚಾ ಮಂಡಲ ಸಮಿತಿ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ರಮೇಶ್ ಬಾಕ್ರ ಬೈಲ್,ಶೇಕರ ಎರ್ಮುಡೇಲ್, ರಾಮ ಚಿಗುರುಪಾದೇ. ಪ್ರ. ಕಾರ್ಯದರ್ಶಿ ಗಳಾಗಿ ಮಾದವ ನಿರೋಲಿಕೆ
ನಾರಾಯಣ ಚಿನಾಳ.ಕಾರ್ಯದರ್ಶಿ ಗಳಾಗಿ ಸಂಧ್ಯಾ ತುಮಿನಾಡ್ ಶ್ರೀಧರ ಕಡoಬರ್ ಹಾಗೂ 12ಸಮಿತಿ ಸದಸ್ಯರು ಗಳನ್ನು ನೇಮಕ ಗೊಳಿಸಲಾಯಿತು.