ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕಟ್ಟಡಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಸರಕಾರದಿಂದ ಅನುಮತಿ ಪಡೆಯಲು ಹಿಂದೇಟು ಹಾಕುವುದು ಏಕೆ ಎಂದು ಕೆಪಿಸಿಸಿ ರಾಜ್ಯ ವಕ್ತಾರರಾದ ಎಂ.ಜಿ ಹೆಗ್ಡೆ ಪ್ರಶ್ನೆ ಮಾಡಿದರು.
ಅವರು ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಿಟಿಷ್ ಆಡಳಿತದ್ದಾಗ 1940 ರಲ್ಲಿ ಯಾವುದೇ ಸಂಘಟನೆಗಳು, ಪ್ಯಾರಾ ಮಿಲಿಟರಿ ಸಮವಸ್ತ್ರ ಬಳಕೆ, ಮಿಲಿಟರಿ ಕವಾಯಿತು. ಮಾಡುವುದನ್ನು ನಿರ್ಬಂಧ ಮಾಡಿ, ಆ ರೀತಿ ಚಟುವಟಿಕೆ ಮಾಡಲು ಲೈಸನ್ಸ್ ಪಡೆಯ ಬೇಕು ಎಂದು ಆದೇಶ ಮಾಡಿತ್ತು . No 28/3/43 ಜೊತೆಗೆ ಸರ್ಕಾರಿ ನೌಕರರು ಆರ್ ಎಸ್ ಎಸ್ ನಲ್ಲಿ ಭಾಗವಹಿಸದಂತೆ ಆದೇಶ ಕೂಡ ನೀಡಿತ್ತು . ಇದನ್ನು ಅಂದಿನ ಆರ್ ಎಸ್ ಎಸ್ ಸರ ಸಂಘಚಾಲಕ ಎಂ ಎಸ್ ಗೋಳ್ವಾಲಕರ್ ಆರ್ ಎಸ್ ಎಸ್ ಬ್ರಿಟಿಷ್ ಸರಕಾರದ ಈ ಆದೇಶವನ್ನು ಚಾಚು ತಪ್ಪದೆ ಪಾಲಿಸುವುದಾಗಿ ಬರೆದು ಕೊಟ್ಟಿದ್ದರು .
ಈ ಆದೇಶವನ್ನು ಆರ್ ಎಸ್ ಎಸ್ ಪಾಲಿಸುತ್ತಿರುವ ಕುರಿತು ಅಂದಿನ ಬಾಂಬೆ ಸರ್ಕಾರದ ಹೋಮ್ ಡಿಪಾರ್ಟೆಂಟ್ ನ, ಸಿ ಐ ಡಿ ವಿಭಾಗ, 1942 ರಲ್ಲಿ, ಆರ್ ಎಸ್ ಎಸ್ ಶಾಖೆಗಳಿಗೆ ಭೇಟಿ ನೀಡಿ ರಹಸ್ಯ ವರದಿ ನೀಡುತ್ತದೆ. ಈ ವರದಿಯಲ್ಲಿ ಆರ್ ಎಸ್ ಎಸ್ ಪ್ರಭಲವಾಗಿದ್ದ ಬಾಂಬೆ ಪ್ರಾಂತದ 19 ಜಿಲ್ಲೆಯಲ್ಲಿನ ಕಾರ್ಯ ಚಟುವಟಿಕೆ ನಡೆಸುವುದಾಗಿ ತಿಳಿದು ಬರುತ್ತದೆ . ಇತ್ತ ಕ್ವಿಟ್ ಇಂಡಿಯಾ ಚಳುವಳಿ, ಅತ್ತ ಸುಭಾಷ್ ಚಂದ್ರ ಭೋಸ್ ಹೋರಾಟ, ಭಾರತ ವಿಭಜನೆ ಚಿಂತನೆ ಹೀಗೆ ಹೋರಾಟ ಉಚ್ಛಾಯ ಸ್ಥಿತಿ ತಲುಪಿದ್ದಾಗ ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೇ ಕಬ್ಬಡಿ ಆಡುತ್ತಾ ಇತ್ತು , ತಮ್ಮ ಪಾಡಿಗೆ ತಾವು ಶಾಖೆ, ಕಾರ್ಯಕ್ರಮ ಮಾಡುತ್ತಿದ್ದರು ಇದು ಅವರ ದೇಶ ಪ್ರೇಮವಾಗಿತ್ತೇ ಎಂದು ಪ್ರಶ್ನೆ ಮಾಡಿದರು .
ಅಂದು ಪರದೇಶಿಗಳ ವಿರುದ್ಧ ಹೋರಾಡುವ ಕಿಚ್ಚು ಇಲ್ಲದ ಆರ್ ಎಸ್ ಎಸ್ ಸಂಘಟನೆಯು ತನ್ನ ಉಡುಪನ್ನು ಬ್ರಿಟಿಷರ ಕಾಲ ಬುಡಕ್ಕೆ ಇಟ್ಟಿತ್ತು. ಹೋರಾಟಕ್ಕೆ ಸಂಘ ಭಾಗಯಾಗದೇ ದೂರ ಉಳಿದಿತ್ತು . ಇಂತಹ ಸಂಘಟನೆ ಕಾಂಗ್ರೇಸ್ ಪಕ್ಷಕ್ಕೆ ಬುದ್ಧಿವಾದವನ್ನು ಹೇಳಲು ಬರುತ್ತಿದೆ . ಕಾಂಗ್ರೇಸ್ ಪಕ್ಷ ಆರ್ ಎಸ್ ಎಸ್ ನನ್ನು ಸೈದಾಂತಿಕವಾಗಿ ವಿರೋಧಿಸುತ್ತದೆ ಎಂದರು .
ಸಾರ್ವಜನಿಕ ಸ್ಥಳಗಳು ಸರಕಾರದ ಅಧೀನಕ್ಕೆ ಬರುತ್ತದೆ. ಆ ಸ್ಥಳಗಳಲ್ಲಿ ಏನೇ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಬೇಕೆಂದು ಕಾಯ್ದೆ ಗಳೇ ಸ್ಪಷ್ಟನೆಯನ್ನು ನೀಡುತ್ತೆ. ಆ ರೀತಿಯ ಕಾಯ್ದೆಗಳನ್ನು ಯಾಕೆ ಈ ಸಂಘಟನೆಗಳು ಅನುಸರಿಸುತ್ತಾ ಇಲ್ಲ ಯಾಕೆ . ರಾಷ್ಟ್ರೀಯ ಸೇವಾ ಸಂಘಟನೆಗಳು ಕೆನಡಾ , ಯು .ಕೆ , ಕೆನಡಾ , ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ನೋಂದಣಿಯನ್ನು ಮಾಡಿದೆ . ಆದರೆ ಭಾರತದಲ್ಲಿ ಯಾಕೆ ನೋಂದಣಿ ಮಾಡಿಲ್ಲ ?. ಗುರು ದಕ್ಷಿಣೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಗಳ ಸಂಗ್ರಹ ಆಗುತ್ತದೆ ಆದರೆ ಎಷ್ಟು ಹಣ ಸಂಗ್ರಹ ಆಗಿದೆ ಎಂದು ಹೇಳಬೇಕೆಂದು ಆಗ್ರಹಿಸಿದರು .ಪತ್ರಿಕಾಗೋಷ್ಠಿಯಲ್ಲಿ ಮಂಜುಳಾ ನಾಯ್ಡ್, ಉದಯ ಆಚಾರ್, ಸತೀಶ್ ಶೆಡ್ಡಿ ರವಿ ಪೂಜಾರಿ, ಮಿಥುನ್ ಮುಂತಾದವರು ಉಪಸ್ಥಿತತರಿದ್ದರು .