ಮಂಜೇಶ್ವರ: ಮಂಜೇಶ್ವರ ಜನತೆಗೆ ಮತ್ತೊಮ್ಮೆ ಮನರಂಜನೆಯನ್ನು ನೀಡಲು ಎ ಎಚ್ ಎಸ್ ತಂಡದ ಏಳನೇ ಸೀಸನ್ ಮಂಜೇಶ್ವರ ಬೀಚ್ ಉತ್ಸವ ಸ್ಥಳೀಯ ನಿವಾಸಿಗಳಾದ ಶಾನವಾಸ್, ಶೆರೀಫ್ ಹಾಗೂ ಇರ್ಫಾನ್ ಎಂಬಿವರ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಕುಂಡು ಕೊಳಕೆ ಬೀಚ್ ನಲ್ಲಿ ಮನರಂಜನೆಗೆ ಸಿದ್ದವಾಗಿದೆ.
ಕಳೆದ 6 ಸೀಸನ್ ಗಳಲ್ಲೂ ನಷ್ಟದ ಹಾದಿಯಲ್ಲೇ ಸಾಗಿ ಕೈ ಸುಟ್ಟುಕೊಂಡಿರುವ ಈ ತಂಡ ನಾಡಿನ ಅಭಿವೃದ್ಧಿಗಾಗಿ ಈ ಸಲ ಕೂಡಾ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಉಚಿತ ಪ್ರವೇಶದೊಂದಿಗೆ ಉತ್ತಮ ಮನರಂಜನೆ ಹಾಗೂ ಆಗಮಿಸುವವರಿಗೆ ವಿಶಿಷ್ಟವಾದ ಅನುಭವಗಳನ್ನು ನೀಡಲು ಮಂಜೇಶ್ವರದ ಬೀಚ್ ನಲ್ಲಿ ವಿವಿಧ ರೀತಿಯ ಚಟುವಟಿಕೆಗಳಿಗೆ ಪ್ರಾಯೋಜಕರು ಸಜ್ಜಾಗಿದ್ದಾರೆ.
ಈ ಸಲದ ಬೀಚ್ ಉತ್ಸವದಲ್ಲಿ ಎಲ್ಲಾ ವರ್ಷದಂತೆ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಕೂಡಾ ಕಲ್ಪಿಸಿದೆ.ಬೀಚ್ ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಕ್ವಿಜ್ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದ್ದು ವಿಜೇತರಾದವರಿಗೆ ವಿವಿಧ ರೀತಿಯ ಬಹುಮಾನಗಳನ್ನು ಕೂಡಾ ನೀಡಲು ಹಲವು ಪ್ರಾಯೋಜಕರು ಸಜ್ಜಾಗಿದ್ದಾರೆ.
ಇದೀಗ ಬೀಚ್ ಉತ್ಸವದ ಮನರಂಜನೆ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ಹಿರಿಯರಿಗೂ ಹಲವು ರೀತಿಯ ಸಾಂಸ್ಕೃತಿಕ ನೃತ್ಯ, ಹಾಡುಗಳು ಹಾಗೂ ಅನೇಕ ಹರ್ಷಭರಿತ ಚಟುವಟಿಕೆಗಳಿಂದ ಇಲ್ಲಿಗೆ ಆಗಮಿಸುವ ವೀಕ್ಷಕರನ್ನು ಆಕರ್ಷಿಸಲಿದೆ.
ಈಗಾಗಲೇ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಮೆಚ್ಚುಗೆಯನ್ನು ಪಡೆದಿರುವ ಉದ್ಯಾವರ ಎ ಎಚ್ ಎಸ್ ತಂಡ ಮಂಜೇಶ್ವರ ಕುಂಡು ಕೊಳಕೆ ಬೀಚ್ ನಲ್ಲಿ ಆರಂಭಿಸಿರುವ ವೈವಿಧ್ಯಮಯವಾದ ಮನರಂಜನೆಯನ್ನೊಳಗೊಂಡ ಬೀಚ್ ಉತ್ಸವಕ್ಕೆ ಅದ್ದೂರಿಯ ಚಾಲನೆ ದೊರಕಿತು. ಸ್ಥಳೀಯ ವಾರ್ಡ್ ಸದಸ್ಯೆ ಮುಂತಾನ್ ಸಮೀರ ರಿಬ್ಬನ್ ಕತ್ತರಿಸಿ 2024 – 25ರ ಮಂಜೇಶ್ವರ ಬೀಚ್ ಉತ್ಸವವನ್ನು ಉದ್ಘಾಟಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು (byts1) : ಮಂಜೇಶ್ವರ ಬೀಚ್ ಅಭಿವೃದ್ಧಿಯಾಗುತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಲಭ್ಯವಾಗುವ ವಿವಿಧ ಮನರಂಜನೆಗಳು ಇದೀಗ ನಮ್ಮ ಮಂಜೇಶ್ವರದ ಬೀಚ್ ನಲ್ಲಿ ತಲೆ ಎತ್ತಿದೆ. ಈ ಉತ್ಸವವದ ಪ್ರಯೋಜನವನ್ನು ಎಲ್ಲರೂ ಪಡಕೊಂಡು ಪ್ರಾಯೋಜಕರನ್ನು ಪ್ರೋತ್ಸಾಹಿಸುವಂತೆ ವಿನಂತಿಸಿಕೊಂಡರು.
ಬಳಿಕ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜಕೀಯ ನೇತಾರ ಹಾಗೂ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಬಡಾಜೆಯವರು ಮಾತನಾಡಿ (bytes 2): ಲಾಭ ನಷ್ಟವನ್ನು ಲೆಕ್ಕಿಸಿದೆ ಕಳೆದ 6 ವರ್ಷಗಳಿಂದ ಮಂಜೇಶ್ವರದ ವಿವಿಧೆಡೆ ವಿವಿಧ ಫೆಸ್ಟ್ ಗಳನ್ನು ಆಯೋಜಿಸಿ ಜನಮನ ಗೆದ್ದಿರುವ ಉದ್ಯಾವರದ ಎ ಎಚ್ ಎಸ್ ತಂಡ ಈ ಸಲ ತನ್ನ 7 ನೇ ಸೀಸನ್ ಭಾರೀ ಭರ್ಜರಿಯಾಗಿ ಹಮ್ಮಿ ಕೊಂಡಿದೆ ಎಂದು ಹೇಳಿ ಶುಭವನ್ನು ಹಾರೈಸಿದರು.
ಬಳಿಕ ಬೀಚ್ ಫೆಸ್ಟ್ ಗೆ ಆಗಮಿಸಿದ ಇನ್ನೋರ್ವ ಅತಿಥಿ ಹರೀಶ್ ಚಂದ್ರ ಮಂಜೇಶ್ವರ ರವರ ರವರು ಮಾತನಾಡಿ ( Bytes 3): ಈ ಬೀಚ್ ಉತ್ಸವವನ್ನು ಆಯೋಜಿಸಿರುವ ಈ ಪ್ರಾಯೋಜಕರು ಕಳೆದ ಹಲವು ಸಲ ಮಳೆರಾಯನ ಅರ್ಭಟದಿಂದ ಕೈ ಸುಟ್ಟು ಕೊಂಡಿದ್ದಾರೆ. ಆದರೂ ಛಲವನ್ನು ಬಿಡದೆ ಈ ಸಲ ಕೂಡಾ ನಮ್ಮೆಲ್ಲರಿಗೂ ಮನರಂಜನೆ ನೀಡಲು ಮುಂದಾಗಿದ್ದಾರೆ. ಅವರಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಿ ಸಹಕರಿಸಬೇಕೆಂದು ಕೇಳಿಕೊಂಡು ಬೀಚ್ ಉತ್ಸವಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ರಾಜಕೀಯ ನೇತಾರಾದ ಅಶ್ರಫ್ ಕುಂಜತ್ತೂರು, ದಯಾಕರ ಮಾಡ, ಪಂಚಾಯತು ಸದಸ್ಯೆ ರೇಖಾ, ಉದ್ಯಮಿ ಅಲಿಕುಟ್ಟಿ, ಅನ್ವರ್, ಆಸಿಫ್, ಹಾರಿಸ್, ಪ್ರಾಯೋಜಕರಾದ ಶಾನವಾಸ್ ಆಹ್ಮದ್, ಶೆರೀಫ್ ನ್ಯಾಷನಲ್ ಹಾಗೂ ಇರ್ಫಾನ್ ಉಪಸ್ಥಿತರಿದ್ದರು.ಅದೇ ರೀತಿ ಕೊಲ್ಲಿ ರಾಷ್ಟ್ರದಲ್ಲಿರುವ ಎ ಎಚ್ ಎಸ್ ತಂಡದ ಸದಸ್ಯರಾದ ಮಹಮ್ಮದ್ ಅಫೀಜ್ ಹಾಗೂ ಹನೀಫ್ ಬೀಚ್ ಉತ್ಪವಕ್ಕೆ ಶುಭವನ್ನು ಹಾರೈಸಿದ್ದಾರೆ.
ಡಿಸೆಂಬರ್ 7 ರ ತನಕ ನಡೆಯಲಿರುವ ಬೀಚ್ ಫೆಸ್ಟಿವಲ್ ಮಂಜೇಶ್ವರ ಹಾಗೂ ಆಸುಪಾಸಿನ ಜನತೆಗೆ ಉತ್ಸವದ ಸಂಭ್ರಮವಾಗಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಆರಂಭದ ದಿನದಲ್ಲೇ ಬೀಚ್ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಊರವರ ಪ್ರೋತ್ಸಾಹಕ್ಕೆ ಬೀಚ್ ಉತ್ಸವದ ಪ್ರಾಯೋಜಕರ ತಂಡ ಅಭಿನಂದನೆ ಸಲ್ಲಿಸಿದೆ.
ಬೀಚ್ ಉತ್ಸವದಲ್ಲಿ ಅಳವಡಿಸಲಾಗಿರುವ ಜಾಂಟ್ ವೀಲ್ ಗೆ ಭಾರೀ ಜನ ಆಕರ್ಶಿತರಾಗುತಿದ್ದಾರೆ. ಕೊಲಂಬಸ್, ಬ್ರೇಕ್ ಡ್ಯಾನ್ಸ್ , ಡ್ರಾಗನ್ ಟ್ರೈನ್, ಮಕ್ಕಳ ಹೆಲಿಕಾಪ್ಟರ್, ಸ್ಕಾರ್ಪಿಯೋ, ಜಂಪಿಂಗ್, ಬೋನ್ಸೇ , ಚಿಕ್ಕ ಮಕ್ಕಳ ಟ್ರೈನ್, ಬೋಟಿಂಗ್ ಸೇರಿದಂತೆ ಕಾಸರಗೋಡು ಮಂಗಳೂರು ನಗರಗಳಲ್ಲಿ ಪ್ರದರ್ಶನ ಕೊಂಡದ್ದಕ್ಕಿಂತ ಭಿನ್ನವಾದ ರೀತಿಯಲ್ಲಿ ವಿವಿಧ ಮನರಂಜನೆಗಳು ಬೀಚ್ ಉತ್ಸವಕ್ಕೆ ಆಗಮಿಸುವ ಜನತೆಯನ್ನು ಕೈ ಮಾಡಿ ಕರೆಯುತ್ತಿದೆ.
ಉತ್ಸವದಲ್ಲಿ ವಿವಿಧ ರೀತಿಯ ಆಹಾರಗಳನ್ನು ಸ್ವಾದಿಸುವ ಅವಕಾಶವೂ ಇದೆ. ಬೀಚ್ ಸುತ್ತಲೂ ಬರ್ಗರ್, ಪಾನಿಪುರಿ, ವಿವಿಧ ಸ್ವಾಧಿಷ್ಟದ ಐಸ್ ಕ್ರೀಂ, ಚಾಟ್ ಇತ್ಯಾದಿ ಧ್ವನಿ ಲಹರಿಯ ಜೊತೆಗೆ ಆಹಾರ ಸೇವನೆಗಿಂತ ಹೆಚ್ಚಿನ ಅನುಭವ ನೀಡುತ್ತವೆ. ಜೊತೆಗೆ, ಗೇಮ್ಸ್ ಸ್ಟಾಲ್‌ಗಳು ಯಾವುದೇ ವಯಸ್ಸಿನವರಿಗೆ ರಂಜನಾತ್ಮಕ ಮತ್ತು ಮೋಜುಭರಿತ ಆನಂದವನ್ನು ನೀಡುತ್ತಿದೆ.
ವೀಕ್ಷಕರಿಗೆ ಇನ್ನು ಬೀಚ್ ಉತ್ಸವ ನೋಡಲು ದೂರದ ಊರಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಉತ್ಸವವನ್ನು ಉತ್ಸಾಹ ಭರಿತರಾಗಿ ವೀಕ್ಷಿಸಿ ಆನಂದಿಸಲು ಗ್ರಾಮೀಣ ಪ್ರದೇಶದಲ್ಲಿಯೇ ಬೀಚ್ ಉತ್ಸವ ಸಜ್ಜಾಗಿದೆ.