ತೀಯಾ ಸಮುದಾಯದ ಅಭಿವೃದ್ಧಿಗಾಗಿ ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು : ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ

ಮಂಗಳೂರು: ತೀಯಾ ಸಮುದಾಯದ ಅಭಿವೃದ್ಧಿಗಾಗಿ ತೀಯಾ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚನೆ ಮಾಡಬೇಕು ಎಂಬುದು ಸೇರಿದಂತೆ ತೀಯಾ ಸಮುದಾಯದ ವಿವಿಧ ಬೇಡಿಕೆಗಳನ್ನು ಡಿ.3ರಂದು ಮಂಗಳೂರು ವಿವಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಗೆ ಸಲ್ಲಿಸಲಾಗುವುದು ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ ತಿಳಿಸಿದರು.

ಅವರು ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ವರ್ಕಳದ ಶಿವಗಿರಿ ಮಠದ ನೇತೃತ್ವದಲ್ಲಿ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮಾ ಗಾಂಧಿಜಿ ಮತ್ತು ಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆ ಡಿ. 3ರಂದು ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ತೀಯಾ ಸಮುದಾಯದ ಬೇಡಿಕೆಯ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗುವುದು ಎಂದು ಕುದ್ರೋಳಿ ಶ್ರೀ ಭಗವತೀಕ್ಷೇತ್ರ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ, ಸಸಿಹಿತ್ತು ಶ್ರೀ ಭಗವತೀ ಕ್ಷೇತ್ರ ಬೋಲಾಡ್ ಶ್ರೀ ಭಗವತೀ ಕ್ಷೇತ್ರಕ್ಕೆ ಒಳಪಟ್ಟ ತೀಯಾ ಸಮಾಜದ ಪ್ರಮುಖರ ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ‘ಯತಿಪೂಜೆ’ ಮತ್ತು ಸರ್ವಮತ ಸಮ್ಮೇಳನ ಆಯೋಜನೆಗೊಂಡಿದೆ. ವಿವಿಧ ಮಠಗಳಿಂದ ಆಗಮಿಸುವ ಐವತ್ತು ಮಂದಿ ಸನ್ಯಾಸಿಗಳಿಗೆ ಗೌರವ ಸಲ್ಲಿಸಲಾಗುವುದು. ಕಾರ್ಯಕ್ರಮದಲ್ಲಿ ತೀಯಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಬ್ರಹಶ್ರೀ ನಾರಾಯಣ ಗುರುಗಳು ತೀಯಾ ಸಮಾಜದಲ್ಲಿ ಜನಿಸಿದ್ದಾರೆ. ಗುರುಗಳು ನಮ್ಮ ರಾಜ್ಯಕ್ಕೆ ಪ್ರಥಮ ಬಾರಿ 1908ರಲ್ಲಿ ಭೇಟಿ ನೀಡಿದ ಸ್ಥಳವಾದ ಶ್ರೀ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರಕ್ಕೆ ಬಹಳಷ್ಟು ಇತಿಹಾಸವಿದೆ. ನಾರಾಯಣ ಗುರುಗಳಿಗೂ ನಮ್ಮ ಸಮಾಜಕ್ಕೂ ಅವಿನಾಭಾವ ಸಂಬಂಧವಿದ್ದ ಕಾರಣ ಗುರುಗಳು ಅವರ ಕಾಲ ಘಟ್ಟದಲ್ಲಿ ಮಾಡಿರುವ ಕೆಲವೊಂದು ಕಾರ್ಯಕ್ರಮಗಳನ್ನು ಮತ್ತೆ ನೆನಪಿಸಿಕೊಂಡು ಕಾರ್ಯಕ್ರಮ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಮುಖರ ಅಪೇಕ್ಷೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ಭಗವತಿ ಕ್ಷೇತ್ರದ ಸುರೇಶ್ ಭಟ್ನಗರ, ಕುದ್ರೋಳಿ ಭಗವತಿ ಕ್ಷೇತ್ರದ ವಿಶ್ವನಾಥ ಮಂಕಿಸ್ಟಾಂಡ್. ಪ್ರಮುಖರಾದ ದೇವದಾಸ್ ಕೊಲ್ಯ ಪ್ರೇಮಚಂದ್ರ, ಶಶಿಕಲಾ, ಆಶಾ ಚಂದ್ರಮೋಹನ್, ಸುಷ್ಕಾದೀಪಕ್, ಪುರುಷ ಸಾಲಿಯಾನ್, ಸುಧೀರ್ ಜೆಪ್ಪು, ಉಮೇಶ್ ಬಿಕರ್ನಕಟ್ಟೆ ಪ್ರಭಾಕರ ಯೆಯ್ಯಾಡಿ, ರವಿ ಕೊಡಿಯಾಲ್‌ಬೈಲ್, ರಾಘವ ಆರ್.ಉಚ್ಚಿಲ್, ರಾಜ್ ಗೋಪಾಲ್. ಉಮೇಶ್ ಬೆಂಜನಪದವು, ದಿನೇಶ್ ಕುಂಪಲ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!