ಡಿ 6 ರಂದು ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ…. !

ಮಂಗಳೂರು: ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ ಡಿ 6 ರಂದು ನಗರದ ಬಿಜೈ ಚರ್ಚ್ ಹಾಲ್ನಲ್ಲಿ ಸಂಜೆ 3.30 ರ ನಂತರ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷರಾದ ವಿದ್ಯಾ ಕಾಮತ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಸಭೆಯಲ್ಲಿ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರು ಅಧ್ಯಕ್ಷತೆ ಯನ್ನು ವಹಿಸಿಕೊಳ್ಳಲಿದ್ದು, ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮತ್ತು ಮುಖ್ಯ ಅತಿಥಿಗಳಾಗಿ ಪೂರ್ವ ರಾಜ್ಯಪಾಲರು ಮತ್ತು ಗ್ಯಾಲೆಂಟರಿ ಶೌರ್ಯ ಪದಕ ಪುರಸ್ಕೃತ ಡಾ! ಪಿ ಆರ್ ಎಸ್ ಚೇತನ್ ಮತ್ತು ಮುಖ್ಯ ಅತಿಥಿ ಯಾಗಿ ಚಿತ್ರನಟರಾದ ಕಾಸರಗೋಡು ಚಿನ್ನ ಭಾಗವಹಿಸಲಿದ್ದಾರೆ ಎಂದರು.

ಪ್ರಾಂತ್ಯ 4 ರಲ್ಲಿ ಎರಡು ವಲಯಗಳಿದ್ದು ವಲಯ ಒಂದರ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಮತ್ತು ವಲಯ ಎರಡರ ಅಧ್ಯಕ್ಷರಾಗಿ ಆಶಾ ಚಂದ್ರಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಾಂತೀಯ 4 ರ ಒಂಭತ್ತು ಲಯನ್ಸ್ ಕ್ಲಬ್ ಗಳಿಂದ ಸೇವಾ ಕಾರ್ಯಾಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸಮಿತಿ ಅಧ್ಯಕ್ಷರಾಗಿ ಗೀತಾ ರಾವ್, ಕಾರ್ಯದರ್ಶಿಯಾಗಿ ಗಣೇಶ್ ಶೆಟ್ಟಿ ಮತ್ತು ಖಜಾಂಜಿಯಾಗಿ ಉಮಾ ಹೆಗ್ಡೆ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದರು .

ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಗೀತಾ ರಾವ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಖಜಾಂಜಿ ಉಮಾ ಹೆಗ್ಡೆ,ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ್ ಶೆಟ್ಟಿಗಾರ್ ಸಹಿತ ಮುಂತಾದವರು ಉಪಸ್ಥಿತ್ತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!