2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರು ಆಯ್ಕೆ …. !

ಮಂಗಳೂರು: ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರ ಸಂಸ್ಥೆಯು 2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರನ್ನು ಆಯ್ಕೆ ಮಾಡಿದೆ. ಇದರ ಭಾಗವಾಗಿ ಪ್ರಶಸ್ತಿ ಸಮಾರಂಭವು ಡಿಸೆಂಬರ್ ೭ ರಂದು ಸಂಜೆ 4.00 ರಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂಡಬಿದಿರೆಯ ಜನತೆಯಿಂದ ಪ್ರೀತಿಯಿಂದ “ಕುಮಾರಣ್ಣ” ಎಂದು ಕರೆಯಲ್ಪಡುವ ಶ್ರೀ ಯುತರಿಗೆ ಬಾಬು ಕುಡ್ತಡ್ಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು . ತನ್ನ ಸರ್ವಸ್ವವನ್ನು ಯಕ್ಷಗಾನಕ್ಕೆ ಮುಡಿಪಾಗಿಸಿರುವ ಇವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿಯು ಶಾಶ್ವತ ಫಲಕ, ಸ್ಮರಣಿಕೆ, ಪದಕ, ಫಲಕಾಣಿಕೆಗಳೊಂದಿಗೆ 10000/-ನಗದು ಪುರಸ್ಕಾರವನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಗುವುದು. ಅಂದು ಶಾಂಭವಿ ವಿಜಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು ಶುಂಭನಾಗಿ ಜಬ್ಬಾರ್ ಸಮೋ, ರಕ್ತಬೀಜನಾಗಿ ಸರ್ಪಂಗಳ , ದೇವಿಯಾಗಿ ಪ್ರಶಾಂತ್ ಹೊಳ್ಳ ಅರ್ಥ ಹೇಳಲಿದ್ದಾರೆ ಎಂದರು.

. ಪತ್ರಿಕಾ ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಲ.ಬಿ. ಪ್ರಕಾಶ್ ಪೈ., ಅದ್ಯಕ್ಷೆ ಲಲಿತಾ ಗೌಡ, ಪ್ರಧಾನ ಕಾರ್ಯದರ್ಶಿ ಆನಂದರಾವ್, ಖಚಾಂಚಿ ಅಶೋಕ್ ಜಾಧವ್, ಸೇವಾ ಕಾರ್ಯದರ್ಶಿ ಸುಮಲತಾ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲ್ಲಾ ಹಾಗೂ ಮನೋಜ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!