ರಾಮಗುಡ್ಡೆಯ ವಿಷ್ಣು ಚಾಮುಂಡೇಶ್ವರಿ ದೇವಾಲಯದಲ್ಲಿ ಒತ್ತೆಕೋಲ ಸೇವೆ

ಕಾಸರಗೋಡು: ದೈವಾರಾಧನೆಯು ತುಳುನಾಡು, ಉತ್ತರ ಮಲಬಾರ್ ಭಾಗದಲ್ಲಿ ಕಂಡು ಬರುವ ಅಪರೂಪದ ಅಚರಣೆಯಾಗಿದೆ . ದೈವರಾಧನೆಗಳು ವಿಶೇಷ ಸ್ಥಾನವನ್ನು ಅಲಂಕರಿಸಿದೆ . ಎಲ್ಲಾ ದೈವಾರಾಧನೆಗಿಂತಲೂ ವಿಶಿಷ್ಟವಾಗಿ ಕಂಡು ಬರುವ ದೈವಾರಾಧನೆಯೆಂದರೆ ಅದು ವಿಷ್ಣು ಮೂರ್ತಿಯ ಒತ್ತೆಕೋಲ ಸೇವೆ. ಉತ್ತರ ಕೇರಳ ಮತ್ತು ತುಳುನಾಡಿನ ಭಾಗದಲ್ಲಿ ಭೂತಾರಾಧನೆಗಳು ಹೆಚ್ಚೇ ನಡೆಯುತ್ತದೆ . ಆದ್ರೆ ಒತ್ತೆಕೋಲ ಸೇವೆಯು ಎಲ್ಲೆಡೆ ಕಂಡು ಬರುವುದು ತುಂಬಾನೇ ವಿರಳ.ತುಳುನಾಡಿನ ಕೆಲವೇ ಕಡೆಗಳಲ್ಲಿ ಈ ಆಚರಣೆಯನ್ನು ನಡೆಸುವ ಕ್ರಮವಿದೆ. ಕೇರಳ ಗಡಿ ಹಂಚಿಕೊಂಡಿರುವ ಪುತ್ತೂರು , ಸುಳ್ಯ , ಇತರೇ ಭಾಗಗಳಲ್ಲಿತ ಒತ್ತೆಕೋಲದ ಪ್ರಭಾವ ಹೆಚ್ಚಿರುತ್ತದೆ.

ಒತ್ತೆಕೋಲವು ತೌಳವ ನಾಡಿಗಿಂತ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಕಾಣಬಹುದು. ಈ ಭಾಗದಲ್ಲಿ ಈ ಸಂಪ್ರದಾಯವನ್ನು ಆರಾಧಿಸಿಕೊಂಡು ಬರುವ ಭಕ್ತರ ಸಂಖ್ಯೆ ಹೆಚ್ಚಿದೆ .ಈ ದೈವವು ತನ್ನದೇ ಆದ ಹಿನ್ನಲೆಯನ್ನು ಹೊಂದಿದ್ದು ಇತಿಹಾಸದ ಬೇರುಗಳೊಂದಿಗೆ ಬೆಸೆಯುತ್ತದೆ .

ಒತ್ತೆಕೋಲದ ವಿಶೇಷತೆಯಿರುವುದೇ ಅದರ ಆಚರಣೆಯಲ್ಲಿ. ಅನೇಕ ಕ್ಲಿಷ್ಟಕರವಾದ ಆಚರಣೆಗಳನ್ನು ಇದು ಒಳಗೊಂಡಿದೆ. ಮಲಯ ಸಮುದಾಯ ವರ್ಗಕ್ಕೆ ಒಳಪಟ್ಟವರು ವಿಷ್ಣು ಮೂರ್ತಿ ದೈವದ ಕೋಲಧಾರಿಗಳಾಗಿರುತ್ತಾರೆ.. ವಿಷ್ಣು ಮೂರ್ತಿಯ ದೈವದ ಜೊತೆಗೆ ಬೆಳ್ಚಡರೆಂಬ ಜನಾಂಗದವರು ಇದರ ಸೇವಕರಾಗಿ ಇರುತ್ತಾರೆ .ಕೆಂಡ ಸೇವೆಯ ಅರಂಭದಲ್ಲಿ ಇವರು ಮೊದಲಿಗೆ ಅಗ್ನಿ ಪ್ರವೇಶವನ್ನು ಮಾಡುತ್ತಾರೆ . ಮಲಯಾಳಂ ಭಾಷೆಯಲ್ಲಿ ಮಾತ್ರ ಈ ದೈವ ನುಡಿಯನ್ನು ಹೇಳುತ್ತದೆ. ಒತ್ತೆಕೋಲದ ಕಟ್ಟಿಗೆಗೆ ಹೆಚ್ಚಾಗಿ ಹುಣಸೇ ಮರವನ್ನು ಬಳಸುತ್ತಾರೆ.

ಕೆಂಡ ಸೇವೆ ನಡೆಯುವುದು ಬೆಳಗಿನ ಜಾವದಲ್ಲಿ. ಆ ರಾತ್ರಿ ಕುಳಿಚ್ಚಾಟ ಎಂಬ ವಿಶಿಷ್ಟ ಆಚರಣೆ ನಡೆಯುತ್ತದೆ. ಕುಳಿಚ್ಚಾಟಕ್ಕೂ ಮುನ್ನ ಬೃಹತ್ ಕಟ್ಟಿಗೆ ರಾಶಿ ಅಥವಾ ಮೇಲೇರಿಗೆ ಅಗ್ನಿ ಸ್ಪರ್ಶವನ್ನು ಮಾಡಲಾಗುತ್ತದೆ.

ಮೊದಲಿಗೆ ಪಾತ್ರಿಗಳು ಅಥವಾ ಬೆಲ್ಚಪಾಡರು ಅಗ್ನಿ ಪ್ರವೇಶವನ್ನು ಮಾಡುತ್ತಾರೆ .ಇದ್ದಾದ ಬಳಿಕ ವಿಷ್ಣುಮೂರ್ತಿ ಕೊಲಧಾರಿ ಓಡುತ್ತಾ ಬಂದು ಮುಮ್ಮುಖವಾಗಿ ಕೆಂಡದದ ರಾಶಿಗೆ ಬೀಳುತ್ತಾರೆ . ಹೀಗೆಯೇ 3 ರಿಂದ 5 ಸಾರಿ ಆ ಕೆಂಡದ ಸುತ್ತ ಸುತುತ್ತಾ ಅದರ ಮೇಲೆ ಬೀಳಲಾಗುತ್ತದೆ . ಇದು ನೋಡುಗರ ಭಕ್ತರ ಸಮೂಹ ಮೈಯಲ್ಲಿ ಪುಳಕವುಂಟು ಮಾಡುತ್ತದೆ. ಇದುವೇ ಕೆಂಡ ಸೇವೆ. ಇದು ಒತ್ತೆ ಕೋಲದ ಪ್ರಮುಖ ಆಚರಣೆ. ನರಸಿಂಹನನ್ನು ಕೊಂದ ಮೇಲೆ ಆದ ಮೈಲಿಗೆಯನ್ನು ತೊಳೆದುಕೊಳ್ಳುವುದಕ್ಕಾಗಿ ವಿಷ್ಣುಮೂರ್ತಿ ಈ ಅಗ್ನಿ ಸ್ನಾನವನ್ನು ಮಾಡುವುದಾಗಿ ನಂಬಿಕೆ. ಕೆಂಡ ಸೇವೆ ಮುಗಿದ ಮೇಲೆ ದೈವ ನುಡಿ ಹೇಳಿ ಅಭಯ ನೀಡಿ ದೈವದ ಪಾತ್ರಧಾರಿ ಪ್ರಸಾದವನ್ನು ಹಂಚಲಾಗುತ್ತದೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!