ಕುಲಾಲ ವೇದಿಕೆ ವತಿಯಿಂದ ಕುಲಾಲ ಟ್ರೋಫಿ-2025

ಮಂಜೇಶ್ವರ ಕುಲಾಲ ವೇದಿಕೆಯ ಆಶ್ರಯದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸ್ವಜಾತಿ ಬಂಧುಗಳ ವಿವಿಧ ತಂಡಗಳನ್ನೊಳಗೊಂಡ ‘ಕುಲಾಲ ಟ್ರೋಫಿ-2025’ ಕ್ರಿಕೆಟ್ ಪಂದ್ಯಾಟ ಇಲ್ಲಿನ ಪಂಚಾಯತ್ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಲಾಲ ವೇದಿಕೆ ಮಂಜೇಶ್ವರ ಇದರ ಹಿರಿಯ ಮಾರ್ಗದರ್ಶಕರಾದ ಚಂದ್ರಶೇಖರ ಮೀಯಪದವು ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ವಿ. ಕುಲಾಲ್ ಔಪಚಾರಿಕವಾಗಿ ಉದ್ಘಾಟಿಸಿದರು.

ಮಂಜೇಶ್ವರ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಚೇರ್ಮನ್ ಆಗಿರುವ ಯಾದವ್ ಬಡಾಜೆ, ದಾಸ್ ಪ್ರಮೋಷನ್ಸ್ ಎಂಡ್ ಹೋಂನರ್ಸಿಂಗ್ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಲಯನ್ ಅನಿಲದಾಸ್,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಳು ಸಾಹಿತಿ ಕುಶಾಲಾಕ್ಷಿ ವಿ. ಕಣ್ವತೀರ್ಥ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮಣ್ ಕುಚ್ಚಿ ಕಾಡ್, ಕುಲಾಲ ವೇದಿಕೆಯ ಮಾರ್ಗದರ್ಶಕ ಮಂಡಳಿ ಸದಸ್ಯರಾದ ರಾಮ್ ದಾಸ್ ಕಡಂಬಾರ್, ರಾಮಚಂದ್ರ ಮಾಸ್ತರ್ ಕಮಾರ್ತೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಿವ್ಯಾಂಗ ಚೇತನ ವಿಭಾಗದ ದೇಹದಾರ್ಡ್ಯ ಪಟುವಾಗಿ ಅಪ್ರತಿಮ ಸಾಧನೆಗೈದಿರುವ ಸತೀಶ್ ಕುಲಾಲ್ ಕಣ್ವತೀರ್ಥ ಹಾಗೂ ಕೇರಳ ಶಾಲಾ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧೀಕರಿಸಿಕೊಂಡು ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನದೊಂದಿಗೆ ಸ್ಮರಣೀಯ ಸಾಧನೆಗೈದಿರುವ ಕುಮಾರಿ ಸೃಷ್ಟಿ ಜಿ. ಎಸ್. ಮಜಲು ಕುಂಜತ್ತೂರು ಅವರನ್ನು ಅತಿಥಿ-ಅಭ್ಯಾಗತರ ಸಮಕ್ಷಮದಲ್ಲಿ ಅಭಿನಂದಿಸಲಾಯಿತು. ಕುಲಾಲ ವೇದಿಕೆಯ ಹಿರಿಯ ಸದಸ್ಯ, ಎಸ್ಎಟಿಎಲ್ ಪಿ ಶಾಲಾ ಮುಖ್ಯೋಪಾಧ್ಯಾಯ ತೇಜಸ್ ಕಿರಣ್ ವಂದಿಸಿದರು.ಶಿಕ್ಷಕ ಈಶ್ವರ್ ಕಿದೂರು ಕಾರ್ಯಕ್ರಮ ನಿರ್ವಹಿಸಿದರು.

ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಒಟ್ಟು 12 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.ಅಪರಾಹ್ನ ಜರಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಡ್ಕ, ಕುಂಜತ್ತೂರು ಬಂಗೇರ ಮೂಲ ಸ್ಥಾನದ ಅಧ್ಯಕ್ಷರಾದ ಅಡ್ವಕೇಟ್ ರಾಮ ಪ್ರಸಾದ್ ಮಂಗಳೂರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಕುಚ್ಚಿಕಾಡ್, ಕುಲಾಲ ವೇದಿಕೆ ಮಾರ್ಗದರ್ಶಕ ಮಂಡಳಿ ಸದಸ್ಯರಾದ ರಾಮದಾಸ್ ಕಡಂಬಾರ್, ರಾಮಚಂದ್ರ ಮಾಸ್ತರ್ ಕಮಾರ್ತೆ, ಈಶ್ವರ್ ಕಿದೂರು,ಶಿವಾನಂದ ಹೊಸಬೆಟ್ಟು, ಕುಲಾಲ ವೇದಿಕೆ ಸಂಚಾಲಕರಾದ ಕಿಶನ್ ಕಣ್ವತೀರ್ಥ ಮತ್ತಿತರರು ಉಪಸ್ಥಿತರಿದ್ದರು. ಹರ್ಷ ಕಣ್ವತೀರ್ಥ ಕಾರ್ಯಕ್ರಮ ನಿರೂಪಿಸಿದರು.

ಕುಲಾಲ್ ಫ್ರೆಂಡ್ಸ್ ಕುಳಾಯಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ನಗದು ಮೊತ್ತ ರೂ.15,000 ಮತ್ತು ಕುಲಾಲ ಟ್ರೋಫಿ -2025 ನ್ನು ಗೆದ್ದುಕೊಂಡಿತು. ಕುಲಾಲ ವೇದಿಕೆ ಮಂಜೇಶ್ವರ ದ್ವಿತೀಯ, ಜೈ ಹನುಮಾನ್ ಫ್ರೆಂಡ್ಸ್ ಚಿಗುರುಪಾದೆ ತೃತೀಯ ಹಾಗೂ M F C ನರಿಂಗಾನ ಚತುರ್ಥ ಸ್ಥಾನವನ್ನು ಗಳಿಸಿಕೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!