
ಮಂಜೇಶ್ವರ: ಜೋಡುಕಲ್ಲು ತಪೋಭೂಮಿಯ ಸಂರಕ್ಷಣೆ ಕೇವಲ ಕಾಸರಗೋಡಿನ ಹಿಂದೂಗಳ ಜವಾಬ್ದಾರಿಯಲ್ಲ. ಕಾಸರಗೋಡಿನಿಂದ ಬೈಂದೂರುವರೆಗಿನ ಕರಾವಳಿ ಭಾಗದ ಸಮಸ್ತ ಹಿಂದೂಗಳ ಬೆಂಬಲವೂ ಇದಕ್ಕಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಜೋಡುಕಲ್ಲು ತಪೋವನಕ್ಕೆ ಭೇಟಿ ನೀಡಿದ ಅವರು, ತಪೋಭೂಮಿಯ ಸಂರಕ್ಷಣೆಗೆ ತಮ್ಮ ಬೆಂಬಲವನ್ನು ಬಹಿರಂಗವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.


ಸಂರಕ್ಷಣಾ ಸಮಿತಿ ಅಧ್ಯಕ್ಷ ರವೀಶ್ ತಂತ್ರಿ, ಮುಖಂಡರಾದ ಸತಿಶ್ಚಂದ್ರ ಭಂಡಾರಿ, ವಿಜಯ್ ಕುಮಾರ್ ರೈ, ಆದರ್ಶ ಬಿ ಎಂ, ಲೋಕೇಶ್ ನೋಂದ, ಏ ಕೆ ಕಯ್ಯರ್, ಮೊದಲದವರು ಉಪಸ್ಥಿತರಿದ್ದರು


