ಪಾಣೆಮಂಗಳೂರು ಪೇಟೆಯಿಂದ ಆಲಡ್ಕವಾಗಿ ಮೆಲ್ಕಾರ್ ವರೆಗಿನ‌ ರಸ್ತೆಗೆ ತೇಪೆ ಭಾಗ್ಯ .. !

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆಯಿಂದ ಆಲಡ್ಕವಾಗಿ ಮೆಲ್ಕಾರ್ ವರೆಗಿನ‌ ರಸ್ತೆಯ ಗುಂಡಿಯನ್ನು ಮುಚ್ಚಿ ತೇಪೆ ಕಾರ್ಯ ಆರಂಭಗೊಂಡಿದೆ. ಮೆಲ್ಕಾರ್ ನಿಂದ ಪಾಣೆಮಂಗಳೂರುವರೆಗೆ ರಸ್ತೆಯಲ್ಲಿ ಹೊಂಡಗುಂಡಿಗಳಿಂದ ತುಂಬಿದ್ದು, ಸಂಚಾರ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ,ಹಾಗಾಗಿ ಈ ರಸ್ತೆಗೆ ಡಾಮರೀಕರಣ ಮಾಡುವಂತೆ ಇಲ್ಲಿನ ಪುರಸಭಾ ಸದಸ್ಯರಾಗಿದ್ದ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರು ಮನವಿ ಮಾಡಿದ್ದರು.

ಡಾಮರು ಕಾಣದೆ ಹತ್ತಾರು ವರ್ಷಗಳನ್ನು ಕಂಡಿರುವ ಈ ರಸ್ತೆಗೆ ಪೂರ್ತಿ ಮರುಡಾಮರೀಕರಣ ಹಾಗೂ ಎರಡು ಬದಿಯ ಚರಂಡಿಯ ಹೊಳೆತ್ತುವಂತೆ ಮತ್ತು ದುರಸ್ತಿ ಮಾಡುವಂತೆ ಪಾಣೆಮಂಗಳೂರು 24 ವಾರ್ಡ್ ನ ಪರವಾಗಿ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ ಅವರು ಪಿ.ಡಬ್ಲೂ.ಡಿ.ಇಲಾಖೆಗೆ ಮನವಿ ನೀಡಿದ್ದರು.ಮನವಿಗೆ ಸ್ವೀಕರಿಸಿದ ಎ.ಡಬ್ಲ್ಯೂ ಇಂಜಿನಿಯರ್ ಜಯಪ್ರಕಾಶ್ ಹಾಗೂ ಇಂಜಿನಿಯರ್ ಅರುಣ್ ಪ್ರಕಾಶ್ ಜಂಟಿಯಾಗಿ ಪೇಟೆಯ ರಸ್ತೆಯ ಪರಿಶೀಲನೆ ನಡೆಸಿ ಬಳಿಕ ಪಾಣೆಮಂಗಳೂರು ಆಲಡ್ಕ ಮೆಲ್ಕಾರ್ ರಸ್ತೆಗೆ ಮರುಡಾಮರೀಕರಣ ಹಾಗೂ ಚರಂಡಿಯ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದರು.


ಪಾಣೆಮಂಗಳೂರು – ಮೆಲ್ಕಾರ್ ವರೆಗೆ ಸುಮಾರು 1.5 ಕಿಮೀ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಉದ್ದೇಶದಿಂದ ರಸ್ತೆಯ ಗುಂಡಿ ಮುಚ್ಚುವ ಬದಲಿಗೆ ಪೂರ್ತಿ ಡಾಮರೀಕರಣಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸದ್ಯ ಮನವಿಗೆ ಸ್ಪಂದಿಸಿದ ಇಲಾಖೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ತೇಪೆ ಹಾಕುವ ಕಾರ್ಯಾ ಅರಂಬಿಸಿದ್ದಾರೆ.ಪುರಸಭಾ ಮಾಜಿ ಸದಸ್ಯ ಅಬುಬಕ್ಕರ ಸಿದ್ದೀಕ್ ಗುಡ್ಡೆಯಂಗಡಿ ಅವರು ತೇಪೆ ಕಾರ್ಯ ಮಾಡುವ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!