ಮಂಜೇಶ್ವರ: ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಬಾಲಕಿಯ ಮೋರ್ಫಿಂಗ್ ಮಾಡಲಾದ ಬೆತ್ತಲೆ ಚಿತ್ರವನ್ನು ಹಂಚಿದ ಆರೋಪದಂತೆ ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸ್ ಇನ್ಸೆಕ್ಟರ್ ಪಿ. ಕೆ. ಜಿಜೇಷ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಮೂಲತಃ ಉಜಿರೆ ನಿವಾಸಿಯಾದ ಆರೋಪಿ, ಮುಹಮ್ಮದ್ ಮಹೂಪ್ ಬಂಧಿತ ಆರೋಪಿ. ಈತನನ್ನು ಕರ್ನಾಟಕದ ಬೆಳ್ತಂಗಡಿಯಿಂದ ಬಂಧಿಸಲಾಗಿದೆ ಆರೋಪಿಯು ಸಾಮಾಜಿಕ ಜಾಲ ತಾಣವಾದ ಸ್ನ್ಯಾಪ್ ಚಾಟ್ ನಲ್ಲಿ ಬಾಲಕಿಯ ಬೆತ್ತಲೆ ಚಿತ್ರವನ್ನು ಹಂಚಿದೆಯೆಂದು ಹೇಳಲಾಗಿದೆ. ಸೈಬರ್ ಕ್ರೈಂ ತಂಡವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇಂತಹ ದುಷ್ಕೃತ್ಯಗಳನ್ನು ತಡೆಯಲು ಹೆಚ್ಚಿನ ಚುರುಕಿನ ಕ್ರಮಗಳನ್ನು ಕೈಗೊಳ್ಳಲು ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ತೀವ್ರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.