ಮಂಜೇಶ್ವರ : ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಧನುರ್ಮಾಸ 19 ಸಲುವ ಪೌಷ ಮಾಸ ಪೌರ್ಣಮಿ ತಿಥಿ ದಿನಾಂಕ 03 -01 -2026 ನೇ ಶನಿವಾರದಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡಿಯೂರು ಮಠ ಉಪ್ಪಳದಲ್ಲಿ ಪರಮ ಪೂಜೆ ಶ್ರೀ ಶ್ರೀ ಯೋಗಾನಂದ ಪರಮ ಪೂಜ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮ ಶ್ರೀ ವಿನೀತ್ ಭಟ್ ತಿರುವನಂತಪುರರವರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಕ್ರ ನವಾವರಣ ಪೂಜೆ ಜರುಗಲಿರುವುದು.
ಅಂದು ಬೆಳಗ್ಗೆ ಗಣಪತಿ ಹವನ, ಶ್ರೀ ಚಕ್ರ ಪೂಜೆ, ವೀಣಾವಾದನೀ ಬಳ್ಳಪದವು ಯೋಗೀಶ್ ಶರ್ಮ ಮತ್ತು ಬಳಗದವರಿಂದ ನವಾವರಣ ಕೀರ್ತನಲಾಪನೆ ,ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಾಮೂಹಿಕ ಶ್ರೀ ಲಲಿತ ಸಹಸ್ರನಾಮ ಪಾರಾಯಣ , ಎಡನೀರುಮಠದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಅಷ್ಟಾವಧಾನ ಸೇವೆ ನಡೆಯಲಿದೆ. ರಾತ್ರಿ 8 .೦೦ ಕ್ಕೆ ಸಧ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ನಡೆಯಲಿದೆ.