ಬೆಳಗ್ಗೆ ಬೇಗ ಎದ್ದು,
ಅಭ್ಯಂಜನ ಸ್ನಾನ ಮಾಡಿ,
ನಿತ್ಯಕರ್ಮಗಳ ಮುಗಿಸಿ,
ಹೊಸ ಸಂಭ್ರಮವ ತುಂಬಿ…
ತಳಿರು ತೋರಣಗಳಿಂದ
ಮನೆಯನ್ನು ಶೃಂಗರಿಸಿ,
ಮನೆಯಂಗಳದ ತುಂಬೆಲ್ಲ
ರಂಗೋಲಿಯ ರಂಗು ತುಂಬಿಸಿ…


ಬಣ್ಣಬಣ್ಣದ ಕಾಗದಗಳಿಂದ
ಗೂಡುದೀಪಗಳನ್ನು ರಚಿಸಿ,
ಮನೆಯ ಹೊರಗೆ ತೂಗಿಸಿದಾಗ
ಸಂಭ್ರಮವೇ ಮೂಡಿಸಿ…
ಕತ್ತಲು ಕವಿಯುತ್ತಿದ್ದಂತೆ
ಹಣತೆಗಳ ಸಾಲು ಬೆಳಗಿ,
ಪ್ರಜ್ವಲಿಸುವ ಆ ಬೆಳಕಿನಲ್ಲಿ
ಕತ್ತಲೆಯನ್ನೆಲ್ಲ ದೂರ ಸರಿಸಿ
ಪ್ರೀತಿ, ಸೌಹಾರ್ದತೆಯ ಸಂಕೇತ,
ಸಮಾರಸ್ಯವನ್ನು ಬೆಸೆಯುವ ಹಬ್ಬ,
ಕತ್ತಲೆಯಿಂದ ಬೆಳಕಿನೆಡೆಗೆ
ಸಾಗುವ ಸಂದೇಶದ ಹಬ್ಬ…

ಮನೆಯವರೊಂದಿಗೆ ಸೇರಿ
ಸಡಗರದಿಂದ ಸಂಭ್ರಮಿಸಿ,
ಪಟಾಕಿಗಳ ಸದ್ದಿನ ನಡುವೆ
ಸಂತಸದ ಕ್ಷಣಗಳಿಂದ ತುಂಬಿಸಿ…
ಹೀಗೆ ಬೆಳಕು, ಪ್ರೀತಿ, ಸಂಭ್ರಮದೊಂದಿಗೆ
ದೀಪಾವಳಿಯ ಹಬ್ಬದ ಸಡಗರ,
ಮೂರು ದಿನಗಳ ತನಕ
ಮುಂದುವರಿಯುವ ಸಂಭ್ರಮದ ಪಯಣ…!

✍🏻✍🏻✍🏻 ಬರವಣಿಗೆ:-ರಶ್ಮಿತಾ ಆಚಾರ್ಯ ಹೊಸಂಗಡಿ
