ಶ್ರೀ ಅಯ್ಯಂಗಾಳಿ (1863 – 1941 )

ಕೇರಳದ ನವೋತ್ಥಾನ ನಾಯಕರಲ್ಲಿ ಒಬ್ಬರಾದ , ಅಗ್ರಗಣ್ಯ ಧೀಮಂತ ನಾಯಕರು ಆಗಿರುವ ದಲಿತರ ಸಾಮಾಜಿಕ ರಾಜಕೀಯ ಶಿಕ್ಷಣಕ್ಕಾಗಿ ಹಗಲಿರುಳು ದುಡಿದ ಕೇರಳದ ಅಂಬೇಡ್ಕರ್ ಎಂದು ವಿಶೇಷಣವನ್ನು ಪಡೆದಿರುವ ಕೇರಳದ ಮಹಾನ್ ಪುತ್ರನಾಗಿರುವ ಶ್ರೀ ಅಯ್ಯಂಕಾಲಿ ಅವರ ಜನ್ಮದಿನವನ್ನು ಅಗಸ್ಟ್ 28ರಂದು ಎಲ್ಲಾ ವರ್ಷ ಅಯಂಕಾಲಿ ದಿನವನ್ನಾಗಿ ಆಚರಿಸಲಾಗುವುದು.

ಶ್ರೀ ಅಯ್ಯಂಗಾಳಿಯವರು ತಿರುವನಂತಪುರದ ವೆಂಗನೂರು ಎಂಬಲ್ಲಿ ಶ್ರೀ ಅಯ್ಯನ್ ಮತ್ತು ಶ್ರೀಮತಿ ಮಾಲ ದಂಪತಿಗಳಿಗೆ 1863 ಅಗಸ್ಟ್ 28ರಂದು ಜನಿಸಿದರು. ಕೇರಳದ ದಲಿತ ಸಮುದಾಯದ ಸಾಮಾಜಿಕ ರಾಜಕೀಯ ಶೈಕ್ಷಣಿಕ ಹೋರಾಟಗಳನ್ನು ಸಂಘಟಿಸಲು 1907 ರಲ್ಲಿ ಸಾಧು ಜನ ಪರಿಪಾಲನ ಸಂಘ ಎಂಬ ಸಂಘಟನೆಯನ್ನು ಸ್ಥಾಪಿಸಿದರು.ಈ ಸಂಘಟನೆ ಮುಂದಕ್ಕೆ 1938 ರಲ್ಲಿ ಪುಲಯ ಮಹಾಸಭಾ ಎಂದು ಮರುನಾಮಕರಣಗೊಂಡಿತು.

ಶ್ರೀ ಅಯ್ಯಂಕಾಳಿಯವರು ಶ್ರೀಮೂಲ ಪ್ರಜಾ ಸಭೆಯ ಮೊದಲ ಹರಿಜನ ಸದಸ್ಯರಾಗಿದ್ದರು.ಹಾಗೂ ಸತತವಾಗಿ 28 ವರ್ಷಗಳ ಕಾಲ ಶ್ರೀ ಮೂಲ ಪ್ರಜಾ ಸಭೆಯ ಸದಸ್ಯತ್ವವನ್ನು ಪಡೆದ ಕೇರಳದ ಮೊದಲ ನವೋತ್ಥಾನ ನಾಯಕನಾಗಿರುವರು.ಹಾಗೂ ಭಾರತದ ಮೊಟ್ಟ ಮೊದಲ ಕಾರ್ಮಿಕ ನಾಯಕರು ಎಂದುಕರೆಯಲ್ಪಡುವ ಮಹಾನ್ ವ್ಯಕ್ತಿಯಾಗಿದ್ದಾರೆ ಶ್ರೀ ಮಹಾತ್ಮ ಅಯ್ಯಂಗಾಳಿ.

ಶ್ರೀ ಅಯ್ಯಂಗಾಳಿ ಅವರ ಹೋರಾಟಗಳು ವಿಲ್ಲು ವಂಡಿ ಸಮರ: ಸಾರ್ವಜನಿಕ ಸ್ಥಳಗಳಲ್ಲಿ ಕೆಲಜಾತಿ ಅವರಿಗೆ ಸಂಚರಿಸುವ ಹಕ್ಕಿಗಾಗಿ ಅವರು 1893 ರಲ್ಲಿ ವಿಲ್ಲು ವಂಡಿ ಸಮರದ ನಡೆಸಿದರು.

ಕೇವಲ ಸವರ್ಣ ವಿಭಾಗದ ಜನರಿಗೆ ಮಾತ್ರ ಸಂಚರಿಸಲು ಅವಕಾಶವಿರುವ ಬೀದಿಗಳಲ್ಲಿ ಎತ್ತಿನ ಗಾಡಿನ ಉಪಯೋಗಿಸಿ ತಲೆಗೆ ಮುಂಡಾಸನ್ನು ಕಟ್ಟಿ ನಮಗೂ ಕೂಡ ಸಂಚರಿಸುವ ಸ್ವಾತಂತ್ರ್ಯ ಇದೆ ಎಂದು ಘೋಷಣೆಗಳು ಕೂಗುತ್ತಾ ನಡೆಸಿದ ಸಮರವಾಗಿದೆ ವಿಲ್ಲು ವಂಡಿ ಸಮರ.

ಕಲ್ಲು ಮಾಲ ಹೋರಾಟ : 1915 ರಲ್ಲಿ ದಲಿತ ಸ್ತ್ರೀಯರಿಗೆ ಆಭರಣಗಳನ್ನು ಧರಿಸಲು ಅವಕಾಶ ಇಲ್ಲದ ಸಂದರ್ಭದಲ್ಲಿ ದಲಿತ ಸ್ತ್ರೀಯರಿಗೂ ಕೂಡ ಆಭರಣಗಳನ್ನು ಧರಿಸಲು ಹಕ್ಕಿದೆ ಎಂದು ಕಲ್ಲು ಮಾಲಾ ಹೋರಾಟವನ್ನು ಸಂಘಟಿಸಿದರು.ಸ್ತ್ರೀಯರು ಕಲ್ಲಿನಿಂದ ಕೂಡಿದ ಮಾಲೆಗಳನ್ನು ಧರಿಸಿ ತಮ್ಮ ಪ್ರತಿಭಟನೆ ನಡೆಸಿದರು.ಈ ಹೋರಾಟಕ್ಕೆ ಶ್ರೀ ಅಯ್ಯಂಕಾಲಿಯವರು ನೇತೃತ್ವವನ್ನು ನೀಡಿದರು.

ಶಿಕ್ಷಣಕ್ಕಾಗಿ ಹೋರಾಟ: ಶ್ರೀ ಅಯ್ಯಂಕಾಳಿಯವರು ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯುವ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.ದಲಿತ ವಿದ್ಯಾರ್ಥಿಗಳಿಗೆ ಸವರ್ಣಿಯರು ಶಿಕ್ಷಣವನ್ನು ನಿಷೇಧಿಸುವ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ವಿದ್ಯಾ ಸಂಸ್ಥೆಗಳಿಗೆ ಸೇರಿಸದಿದ್ದರೆ ನಾವು ಯಾರು ಕೂಡ ಕೃಷಿ ಭೂಮಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ದೃಢ ನಿರ್ಧಾರದಿಂದ ಪ್ರತಿಜ್ಞೆಗೆದರು.ಇದರಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಕೃಷಿ ಭೂಮಿ ಪಾಲು ಬಿದ್ದಿತ್ತು.ಈ ಹೋರಾಟದಿಂದಾಗಿ ದಲಿತ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕು ದೊರಕುವಂತಾಯಿತು.ಈ ಹೋರಾಟವನ್ನು ಕೇರಳದ ಅತಿ ದೊಡ್ಡ ಕಾರ್ಮಿಕ ಹೋರಾಟ ಎಂದು ಬಣ್ಣಿಸಲಾಗುತ್ತದೆ.

ಈ ರೀತಿಯಲ್ಲಿ ಕೇರಳದ ಅಗ್ರಗಣ್ಯ ನವೋತ್ಥಾನ ನಾಯಕರಾಗಿರುವ ಶ್ರೀ ಅಯ್ಯಂಗಾಳಿ ಅವರ ಕಾರ್ಯ ಚಟುವಟಿಗಳಿಗೆ ಮೆಚ್ಚಿ ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಆದಂತಹ ಶ್ರೀಮತಿ ಇಂದಿರ ಗಾಂಧಿಯವರು ಭಾರತದ ಶ್ರೇಷ್ಠ ಪುತ್ರ ಎಂದು ಬಣ್ಣಿಸಿರುತ್ತಾರೆ.ಅದೇ ರೀತಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಶ್ರೀ ಅಯ್ಯಂಗಾಳಿಯವರನ್ನು ಪುಲಯರ ರಾಜ ( ಪುಲಯ ಸಮುದಾಯದ ) ಇಂದು ಬಣ್ಣಿಸಿರುತ್ತಾರೆ. ಕೇರಳದ ಹಾಗೂ ಇಡೀ ಭಾರತ ದೇಶದ ಜನಮನಸ್ಸನ್ನು ಗೆದ್ದ ರಾಜಕೀಯ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಕ್ಕೆದುಡಿದ ಈ ಮಹಾನ್ ನಾಯಕ 1941 ಜೂನ್ ತಿಂಗಳ 18ರಂದು ಮರಣ ಹೊಂದಿದರು.ಅವರ ಹೋರಾಟಗಳು ಹಾಗೂ ಆದರ್ಶಗಳು ಇಂದಿನ ಜನಸಮೂಹಕ್ಕೆ ಮುನ್ನುಡಿಯಂತಿದೆ. ಆಗಸ್ಟ್ 28 ರಂದು ಶ್ರೀ ಮಹಾತ್ಮ ಅಯ್ಯಂಗಾಳಿಯ ಜನ್ಮ ದಿನಾಚರಣೆಯನ್ನು ಅಯ್ಯಂಗಾಳಿ ದಿನ ಎಂಬುದಾಗಿ ಕೇರಳದ ಜನತೆ ಸ್ಮರಿಸಬೇಕಾದ ದಿನವಾಗಿದೆ.

✒️ ರಾಜೇಶ್ ಕೊಡ್ಲಮೊಗರು

SHARE
Loading spinner

Leave a Reply

Your email address will not be published. Required fields are marked *

error: Content is protected !!