ಪುತ್ತೂರಿನಲ್ಲಿ ‘ಅಬ್ಬಕ್ಕ @500’ ರಾಷ್ಟ್ರೀಯ ವಿಚಾರ ಸಂಕಿರಣ: 21 ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ

ಪುತ್ತೂರು: ಅಖಿಲ ಭಾರತೀಯ ರಾಷ್ಟಿçÃಯ ಶೈಕ್ಷಿಕ್ ಮಹಾಸಂಘ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ) ಪುತ್ತೂರು ಇದರ ಇತಿಹಾಸ ವಿಭಾಗ, ಐಕ್ಯೂಎಸಿ ಸಹಯೋಗದೊಂದಿಗೆ ರಾಣಿ ಅಬ್ಬಕ್ಕಳ ಸಾಧನೆಗಳನ್ನು ರಾಷ್ಟ್ರ ವ್ಯಾಪ್ತಿಗೊಳಿಸುವ ನಿಟ್ಟಿನಲ್ಲಿ `ಅಬ್ಬಕ್ಕ @೫೦೦’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಫೆ.೧೬ರಂದು ವಿವೇಕಾನಂದ ಎಂಜಿನಿಯರಿAಗ್ ಕಾಲೇಜಿನ ಸಾವರ್ಕರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಅಧ್ಯಯನಗಳ ಕುರಿತಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ, ದೇಶ ಪ್ರೇಮ ಪೂರಿತ ವೈಚಾರಿಕತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಪುತ್ತೂರಿನ 6 ಮಂದಿ ಸಹಿತ 21 ಮಂದಿ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರ ನೀಡಲಾಗುವುದು ಎಂದರು.
ಬೆಳಗ್ಗೆ 1೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಮೂಡಬಿದ್ರೆ ಚೌಟರ ಅರಮನೆಯ ಕುಲದೀಪ್ ಎಂ. ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎ.ಬಿ.ಆರ್.ಎಸ್.ಎಂ. ನವದೆಹಲಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್, ದೆಹಲಿಯ ಎ.ಬಿ.ಆರ್.ಎಸ್.ಎಂ. ನ ಜಂಟಿ ಕಾರ್ಯದರ್ಶಿ ಡಾ. ಆಶೀಮ ಮಂಗ್ಲಾ, ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಬೆಂಗಳೂರು ಕೆ.ಆರ್.ಎಂ.ಎಸ್.ಎಸ್. ಅಧ್ಯಕ್ಷ ಪ್ರೊ. ಗುರುನಾಥ್ ಬಡಿಗೇರ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ.

ಅಬ್ಬಕ್ಕ ಪುರಸ್ಕಾರ
ಇದೆ ಸಂದರ್ಭದಲ್ಲಿ ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ನಡೆಯಲಿದ್ದು, ಮಹಿಳಾ ಸಬಲೀಕರಣದಲ್ಲಿ ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ದೈವಾರಾಧನೆಯಲ್ಲಿ ಪೆರುವಾಯಿಯ ಸುಂದರಿ ನಲಿಕೆ, ಸಮಾಜ ಸೇವೆ- ಸಂಘಟನೆಯಲ್ಲಿ ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ನ ಡಾ. ಆಶಾ ಜ್ಯೋತಿ ರೈ, ಬಾಲ ಸಂಸ್ಕಾರ ಶಿಕ್ಷಣದಲ್ಲಿ ಮಂಗಳೂರು ತುಳುವೆರೆ ಕಲ ಇದರ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಉದ್ಯಮಶೀಲತೆಯಲ್ಲಿ ದಾರಂದಕುಕ್ಕು ಮಂಗಳಾ ಎಂಟರ್‌ಪ್ರೈಸಸ್‌ನ ಮಹಾಲಕ್ಷ್ಮೀ, ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ತ್ರದಲ್ಲಿ ಮೂಡಬಿದ್ರೆ ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಆಂಬುಲೆನ್ಸ್ ಚಾಲಕಿ ಮಂಗಳೂರು ಕಾವೇರಿ ಅಂಬ್ಯುಲೆನ್ಸ್ ಸರ್ವೀಸ್‌ನ ಮಾಲಕಿ ಸಿ.ಎಸ್ ರಾಧಿಕಾ, ರುದ್ರಭೂಮಿ ಸೇವೆಯಲ್ಲಿ ಉಡುಪಿಯ ಬೀಡಿನಗುಡ್ಡೆ ವನಜಾ ಪೂಜಾರ್ತಿ, ನಾಟಿ ವೈದ್ಯ ಕ್ಷೇತ್ರದಲ್ಲಿ ವಿರಾಜಪೇಟೆಯ ಸೂಲಗಿತ್ತಿ ಮತ್ತು ನಾಟಿವೈದ್ಯೆ ಕೆ.ಬಿ.ಅಮ್ಮಣ್ಣಿ ಭಾರತೀಯ ಕಲೆಗಳ ಕ್ಷೇತ್ರದಲ್ಲಿ ನಾಟ್ಯಾರಾಧನಾ ಮತ್ತು ಯಕ್ಷರಾಧನಾ ಕಲಾಕೇಂದ್ರ ಮಂಗಳೂರು ಇದರ ನಿರ್ದೇಶಕಿ ವಿದುಷಿ ಸುಮಂಗಲ ರತ್ನಾಕರ್ ರಾವ್, ತುಳು ಸಾಹಿತ್ಯ ಸಂಘಟನೆಯಲ್ಲಿ ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಪ್ರವರ್ತಕಿ ಯಶೋದ ಕೇಶವ್, ಯಕ್ಷಗಾನ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಬೆಳುವಾಯಿ ಮೂಡಬಿದಿರೆಯ ಶುಭಾಶಯ ಜೈನ್, ಯಕ್ಷಗಾನದಲ್ಲಿ ಯಕ್ಷಗುರು ಮಂಗಳೂರು ಇದರ ಪೂರ್ಣಿಮಾ ಯತೀಶ್ ರೈ, ಪರಿಸರದಲ್ಲಿ ಮೂಡಬಿದಿರೆ ಜೈನ ಪ.ಪೂ ಕಾಲೇಜಿನ ಉಪನ್ಯಾಸಕಿ ಸಂಧ್ಯಾ, ತಾಳಮದ್ದಳೆ ಕ್ಷೇತ್ರದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ ಅರ್ಥಧಾರಿಯಾಗಿರುವ ಶುಭಾ ಅಡಿಗ, ಆಯುರ್ವೇದ ಕ್ಷೇತ್ರದಲ್ಲಿ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಆಡಳಿತ ಪಾಲುದಾರೆ ರೂಪಲೇಖಾ, ಸಮುದಾಯ ಅಭಿವೃದ್ಧಿಯಲ್ಲಿ ಬಂಟ್ವಾಳ ಅನಂತಾಡಿಯ ಶೈನ್ ಇಂಡಿಯಾ ಟ್ರಸ್ಟ್ನ ಸಂಸ್ಥಾಪಕಿ ಭವ್ಯರಾಣಿ ಪಿ.ಸಿ, ಭರತನಾಟ್ಯ ಕ್ಷೇತ್ರದಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯ ನಿರ್ದೇಶಕಿ ಶಾಲಿನಿ ಆತ್ಮಭೂಷಣ್, ಉದಯೋನ್ಮುಖ ಭರತನಾಟ್ಯ ಕಲಾವಿದೆ ಮಂಗಳೂರಿನ ಶ್ರಾವ್ಯ ಯು., ಪತ್ರಿಕೋದ್ಯಮ ವಿಭಾಗದಲ್ಲಿ ವಿಕ್ರಮ ಟಿವಿ ನಿರೂಪಕಿ ಶಹನಾ ಮುಮ್ತಾಜ್ ನೆಲ್ಯಡ್ಕ, ಯೋಗ ಮತ್ತು ಧ್ಯಾನ ಕ್ಷೇತ್ರದಲ್ಲಿ ಮಂಗಳೂರು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ಕೆ.ಎನ್.ದೀಪಿಕಾ ಅವರನ್ನು ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದು ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.

ಉಪನ್ಯಾಸಗಳು
ಬೆಳಗ್ಗೆ ಗಂಟೆ ೧೧.೪೫ ರಿಂದ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಕುರಿತು ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಉಪನ್ಯಾಸ ನೀಡಲಿದ್ದಾರೆ. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವಿಂದ್ರ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ಗಂಟೆ ೧೨.೩೦ಕ್ಕೆ ಭಾರತದ ಇತಿಹಾಸ – ರಾಣಿ ಅಬ್ಬಕ್ಕಳ ಕೊಡುಗೆ ಕುರಿತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಅವರು ಉಪನ್ಯಾಸ ನೀಡಲಿದ್ದಾರೆ. ಸುಳ್ಯ ನೆಹರು ಮೊಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಯಶೋದಾ ರಾಮಚಂದ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನದ ಬಳಿಕ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ವೀರ ರಾಣಿ ಅಬ್ಬಕ್ಕ-ಕಥಾ ಕೀರ್ತನೆ ನಡೆಯಲಿದೆ ಎಂದು ತಿಳಿಸಿದರು.

ಸಮಾರೋಪ
ಮಧ್ಯಾಹ್ನ ಗಂಟೆ ೨ ರಿಂದ ಸಮಾರೋಪ ಸಮಾರಂಭದಲ್ಲಿ ಎ.ಬಿ.ಆರ್.ಎಸ್.ಎಂ. ನವದೆಹಲಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡಬಿದಿರೆ ಜವನೆರ್ ಬೆದ್ರ ಇದರ ಸಂಸ್ಥಾಪಕ ಅಮರ್ ಕೋಟೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀಕೃಷ್ಣ ಗಣರಾಜ್ ಭಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ವಿವೇಕಾನಂದ ಪದವಿ ಕಾಲೇಜು ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಪ್ರಮೋದ್ ಎಂ.ಜಿ., ಕನ್ನಡ ವಿಭಾಗ ಮುಖ್ಯಸ್ಥ ಮನಮೋಹನ್ ಎಂ., ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ಪಿ.ಆರ್., ಮಂಗಳೂರು ವಿಭಾಗ ಮಹಾವಿದ್ಯಾಲಯದ ಶಿಕ್ಷಕರ ಸಂಘದ ಸಂಯೋಜಕಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!