ಓಣಂ

ಓಣಂ ಹಬ್ಬವನ್ನು ಮಲಯಾಳಿಗಳು ಆಚರಿಸುವಂತಹ ವಿಶಿಷ್ಟ ಬಗೆಯ ಹಬ್ಬವಾಗಿದೆ . ಕರಾವಳಿ ಜಿಲ್ಲೆಗಳಲ್ಲಿಯೂ ಈ ಹಬ್ಬದ ಆಚರಣೆಯನ್ನು ತುಂಬಾನೇ ಸಂಭ್ರಮದಿಂದ ಆಚರಿಸುತ್ತಾರೆ . ಈ ಹಬ್ಬವು ಮಹಾಬಲಿ ಚಕ್ರವರ್ತಿ ಅಥವಾ ಮಾವೇಲಿ ಎಂದು ಕರೆಯುವ ಮಹಾರಾಜನೊಂದಿಗೆ ನಂಟನ್ನು ಆತನ ನೆನೆಪಿಗಾಗಿ ಆಚರಣೆಯನ್ನು ಮಾಡುವ ದೇವರ ನಾಡಿನ ಹಬ್ಬವಾಗಿದೆ .

ಈ ಹಬ್ಬ ತನ್ನದೇ ಆದ ಹಿನ್ನಲೆಯನ್ನು ಹೊಂದಿದೆ , ತಲೆ ತಲೆ ಮಾರುಗಳ ಹಿಂದೆ ಮಲಯಾಳಂ ನಾಡನ್ನು ಮಹಾಬಲಿ ಎಂಬ ಅಸುರರಾಜನು ಆಳುತ್ತಿದ್ದನು .ಆತ ಅಸುರನಾದರೂ ಅತ್ಯಂತ ನ್ಯಾಯಪ್ರಿಯ, ದಾನಶೂರ, ಪರೋಪಕಾರ ಗುಣಗಳಿಂದ ಸಂಪನ್ನನಾಗಿದ್ದನು . . ಆತ ಆಳ್ವಿಕೆಯನ್ನು ಮಾಡುವ ಸಾಮ್ರಾಜ್ಯದ ಉದ್ದಗಲಕ್ಕೂ ಸುಖ ಶಾಂತಿ ನೆಮ್ಮದಿ ಮನೆ ಮಾಡಿತ್ತು , ಪ್ರಜೆಗಳಿಗೆ ಯಾರಿಗೂ ದುಃಖ ಆಗಲು ಬಿಡುತ್ತಿರಲ್ಲಿಲ್ಲ . ಬಡತನ , ಅನ್ಯಾಯದಂತಹ ಸಾಮಾಜಿಕ ಪಿಡುಕು ಅಲ್ಲಿ ಇರಲಿಲ್ಲ .

ನಾಡಿನ ಪ್ರಜೆಗಳ ಎಲ್ಲರನ್ನು ಸಮಾನವಾಗಿ ಕಾಣುವ ಮನಸ್ಥಿತಿ ರಾಜನಲ್ಲಿತ್ತು . ಹೀಗಿರುವಾಗ ಒಂದು ದಿನ ಮಹಾಬಲಿ ಧರ್ಮನಿಷ್ಠತೆ , ಖ್ಯಾತಿ ಮತ್ತು ಪ್ರಭಾವವು ದಿನದಿಂದ ದಿನಕ್ಕೆ ತ್ರಿಲೋಕದಲ್ಲೂ ಪಸರಿಸಿತ್ತು . ಇದರಿಂದ ದೇವತೆಗಳಿಗೆ ಅಸೂಯೆ ಬರತೊಡಗುತ್ತೆ . ಎಲ್ಲಿ ತಮಕ್ಕಿಂತ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತಾನೇಯೋ ಎನ್ನುವ ಭಯದಿಂದ ದೇವತೆಗಳು ಮಹಾನ್ ವಿಷ್ಣುವಿನ ಪ್ರಾರ್ಥನೆಯನ್ನು ಮಾಡುತ್ತಾರೆ . ಮಹಾಬಲಿಯ ಪ್ರತಿಷ್ಠೆಯನ್ನು ಕುಗ್ಗಿಸುವಂತೆ ಮನಸಾರೆ ಬೇಡಿಕೊಳ್ಳುತ್ತಾರೆ . ದೇವತೆಗಳ ಪ್ರಾರ್ಥನೆಗೆ ಪ್ರತ್ಯಕ್ಷರಾದ ಭಗವಾನ್ ವಿಷ್ಣು , ದೇವತೆಗಳ ಇಚ್ಛೆಯಂತೆ ಬ್ರಾಹ್ಮಣ ಬಾಲಕ ವಾಮನನಾಗಿ ಧರೆಯಲ್ಲಿ ಅವತರಿಸುತ್ತಾನೆ .

ಆ ಸಮಯದಲ್ಲಿ ಮಹಾಬಲಿಯ ನೇತ್ರಿತ್ವದಲ್ಲಿ ಯಜ್ಞ ಯಗಾದಿಗಳು ನಡೆಯುತ್ತಿರುತ್ತದೆ . ಇದುವೇ ಸುಮಯವೆಂದು ಅರಿತ ವಾಮನ ದೇವನು , ಬಲಿಯ ಬಳಿಗೆ ತೆರಳಿ ದಾನ ಕೇಳಲು ಮುಂದಾದನು . ಯಾಗ ಸಮಯದಲ್ಲಿ ಬಲಿ ಹಿಂದು ಮುಂದು ನೋಡದೇ ಅಸ್ತು ಎನ್ನುತ್ತಾನೆ . ಬಾಲಕನು ಬಲಿಯಲ್ಲಿ “ಮೂರೇ ಹೆಜ್ಜೆ ನಡೆಯಲು ಜಾಗ ಕೊಡಿ” ಎಂದನು. ದಾನಶೂರನಾದ ಮಹಾಬಲಿಯು ಅದನ್ನು ಒಪ್ಪಿಕೊಂಡನು.ವಾಮನನು ತಕ್ಷಣ ವಿಶ್ವರೂಪಿ ವಿಷ್ಣುವಾಗಿ ಬದಲಾದನು. ತಿವಿಕ್ರ ಶೂರನಾಗಿ ಬೆಳೆದನು . ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು ಆವರಿಸಿದನು.ಎರಡನೇ ಹೆಜ್ಜೆಯಲ್ಲಿ ಆಕಾಶವನ್ನು ಆವರಿಸಿದನು.ಮೂರನೇ ಹೆಜ್ಜೆ ಇಡಲು ಸ್ಥಳವಿಲ್ಲದ ಕಾರಣ, ಮಹಾಬಲಿ ತನ್ನ ತಲೆಯ ಮೇಲೆ ಇಡುವಂತೆ ಕೇಳಿಕೊಂಡನ್ನು . ವಿಷ್ಣು ದೇವನು ಮಹಾಬಲಿಯ ದಾನಕ್ಕೆ ಮೆಚ್ಚಿ ಆತನಿಗೆ ಒಂದು ವರವೊಂದನ್ನು ನೀಡಿದನು . ಆ ವರದ ಪ್ರಕಾರ , ಪ್ರತಿ ವರ್ಷವೂ ಅವನ ಪ್ರಿಯ ಪ್ರಜೆಗಳನ್ನು ಭೇಟಿ ನೀಡಲು ಭೂಮಿಗೆ ಬರುವ ಅವಕಾಶ ನೀಡಿದನು. ಅದನ್ನು ಓಣಂ ಹಬ್ಬವೆಂದು ಆಚರಿಸಲಾಗುತ್ತದೆ . ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿಯಾಗುವ ಸಮಯ ಇದಾಗಿದೆ . ಪ್ರಜೆಗಳು ಅದನ್ನು ಸಮೃದ್ಧಿ, ಸಂತೋಷ, ಸಮಾನತೆಯ ಹಬ್ಬವಾಗಿ ಆಚರಿಸುತ್ತಾರೆ.

ಓಣಂ ಹಬ್ಬವನ್ನು ವಿವಿಧ ಆಚರಣೆಗಳೊಂದಿಗೆ ಆಚರಿಸುತ್ತಾರೆ .ಅವುಗಳೆಂದರೆ ಮನೆಯ ಮುಂದೆ ಹಾಕುವ ಪೂಕ್ಕಳಂ , ಸಂಪ್ರದಾಯಕ ಓಣಂ ಔತಣ ಕೂಟ , ನದಿಗಳಲ್ಲಿ ದೋಣಿ ಆಟ , ಪುಲಿ ಕಳಿ , ಕೈಕೊಟ್ಟುಕಳಿ ಮುಂತಾದ ಸಾಂಪ್ರದಾಯಕ ಆಚರಣೆಯು ಈ ಹಬ್ಬದ ಮೆರುಗನ್ನು ಹೆಚ್ಚಿಸುದರ ಜೊತೆ ಜೊತೆಗೆ ಮುಂದಿನ ತಲೆಮಾರಿಗೆ ಆಚರಣೆಯ ವೈಭವವನ್ನು ಸಾರುತ್ತದೆ .

ಓಣಂ ಹಬ್ಬ ಬಾಲ್ಯದಲ್ಲಿ ಬರಲೆಂದು ಕಾಯ್ತಾ ಇದ್ದೆ ಯಾಕೆಂದರೆ ಶಾಲಾ ದಿನಗಳಲ್ಲಿ ೧೦ ದಿನಗಳ ರಜೆಯು ಸಿಗ್ತಾ ಇತ್ತು .ಗೆಳೆಯರೊಂದಿಗೆ ಆಹಾರ ಔತಣವನ್ನು ಸವಿಯುತ್ತಿದೆ , ಈಗ ಎಲ್ಲಾವೂ ನೆನೆಪಾಗಿದೆ .

✍🏻ಗಿರೀಶ್ ಪಿ ಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!