ಕಾಸರಗೋಡು ಜಿಲ್ಲೆಯ ಪ್ರಮುಖ ನಗರಗಳಲ್ಲಿ ಒಂದಾದ ಕಾಞಂಗಾಡ್ ಭಾಗದಲ್ಲಿ ಓಣಂ ಹಬ್ಬದ ಅಂಗವಾಗಿ ಹೂವಿನ ಮಾರಾಟ ಜಬರ್ದಸ್ತ್ ಆಗಿತ್ತು. ನಗರದ ಬಸ್ ನಿಲ್ದಾಣ ದಲ್ಲಿ ಹೂವು ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿನ ಹೂವು ವ್ಯಾಪಾರಿಗಳು ಇಲ್ಲಿಗೆ ಬಂದು ವ್ಯಾಪಾರ ಮಾಡಿದ್ದರು. ವಿಸ್ತಾರವಾದ ಪ್ರದೇಶದಲ್ಲಿ ಹೂವನ್ನು ಮಾರಾಟಕ್ಕೆಂದು ಹರಡಿತ್ತು. ಇದು ನೋಡುಗರ ಕಣ್ಣನ್ನು ಸೆಳೆಯುತ್ತಿತ್ತು.
ಪುಷ್ಪ ಕಾಶಿಯೇ ಈ ಭಾಗದಲ್ಲಿ ಮೇಳೈಸ್ತ ಇರುವುದು ಕಂಡು ಬಂದಿದೆ. ಕೇರಳ ದಾದಂತ್ಯ ಇಂದು ಓಣಂ ಹಬ್ಬವನ್ನು ಮಹಾಬಲಿಯ ಸ್ಮರಣಾರ್ಥಕವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮನೆ ಮುಂದೆ ಹೂವಿನ ರಂಗೋಲಿಯನ್ನು ಹಾಕಿ ಮಹಾಬಲಿಯನ್ನು ಸ್ವಾಗತಿಸುತ್ತಾರೆ. ಹೀಗಾಗಿ ಹೂವಿನ ರಂಗೋಲಿಯನ್ನು ಹಾಕುವುರಿಂದ ಹೂವಿಗೆ ಉತ್ತಮ ಬೇಡಿಕೆ ಇತ್ತು. ದಿನ ಪೂರ್ತಿ ಒಂದೆರಡು ಬಾರಿ ಲಘು ಮಳೆ ಬಿಟ್ಟರೆ ಉಳಿದ ಸಮಯದಲ್ಲಿ ಬಿಸಿಲಿನ ವಾತಾವರಣ ಇದ್ದುದ್ದರಿಂದ ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು.