“ಭಾವೈಕ್ಯತೆಯ ಕೊಂಡಿಯ0ತಿರುವ ಉದ್ಯಾವರ ಜಾತ್ರೆಗೆ ಇಂದು ಕೊಡಿ”

ಕಾಸರಗೋಡು ಜಿಲ್ಲೆಯ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಿಂದೂ ಮುಸ್ಲಿಂ ಭಾವೈಕತೆಗೆ ದೇಶದಲ್ಲೇ ಗಮನ ಸೆಳೆದ ಶೃದ್ಧಾ ಕೇಂದ್ರವಾಗಿದೆ. ಇಲ್ಲಿನ ಮಹಿಮೆಯ ರೋಚಕ ಕಥೆಗಳು ಭಾವುಕರನ್ನು ತಲೆತೂಗಿಸುವಷ್ಟು ಆಕರ್ಷಿತವಾಗಿದೆ.
ದುಷ್ಟರನ್ನು ಸಂಹರಿಸಲು ಮತ್ತು ಶಿಷ್ಠರನ್ನು ರಕ್ಷಿಸಲು ಶ್ರೀಮನ್ ನಾರಾಯಣ ದೇವರು ದೇವಲೋಕದಿಂದ ಅಣ್ಣ ಮತ್ತು ತಮ್ಮ ದೈವರನ್ನು ಕೊರಳು ತುಂಬ ಮಲ್ಲಿಗೆಯನ್ನು ಸೊಂಟ ತುಂಬಾ ಕೇದಗೆ ಹೂವಿನಲ್ಲೂ ಏಳೇಳು ಕಡಲ ಮಧ್ಯೆ ಇರುವ ಹಾಲಿನ ಕಡಲಿನಲ್ಲಿ ಸೃಷ್ಟಿಸಿ ಮಾಯದ ಹಡಗಿನಲ್ಲಿ ವೇಣೂರಿಗೆ ಬಂದು ಅಲ್ಲಿನ ಭಾರತೀಮಾರ್ ಎಂಬಲ್ಲಿ ವಿಶ್ರಾಂತಿಗಾಗಿ ತೀರ್ಮಾನಿಸಿ ರತ್ನ ಕಂಬಲಿಯನ್ನು ಹಾಸಿ ಅಣ್ಣ ಕುಳಿತಿರಲು ಅವರ ತೊಡೆಯ ಮೇಲೆ ತಮ್ಮ ಮಲಗಿದ.ತಮ್ಮನ ರಕ್ಷಣೆಗೆ ೭೦೦೦ ಭೂತಗಳನ್ನು ಸಾವಿರ ಘಂಡಗಣಗಳನ್ನು ಕಾವಲಿಗೆ ನಿಲ್ಲಿಸುತ್ತಾರೆ. ಅಣ್ಣ ದೈವರು ವನನಾಗವನ್ನು ಕೈಯಲ್ಲಿ ಹಿಡಿದು ಹೊರಟು ತೆಂಕುದಿಕ್ಕಿನಿAದ ಹಡಗಿನಲ್ಲಿ ಬರುವಾಗ ಅಡ್‌ಕಾಜನನ ಎಂಬ ಸ್ಥಳವನ್ನು ನೋಡಿ ಸಂತೋಷಗೊAಡು ಅಲ್ಲಿ ಸಿರೆಪದವು ಎಂಬ ಸ್ಥಳದಲ್ಲಿ ನೆಲೆಯಾಗಬಹುದೆಂದು ಭಾವಿಸುತ್ತಾರೆ. ಈ ಪ್ರದೇಶದಲ್ಲಿ ಮುತ್ತಣ್ಣ ಆಳ್ವ ಮತ್ತು ಮದನನಾಯಕ್ ಎಂಬವರು ವಾಸಿಸುವ ಮನೆತನವಾಗಿದೆ.

ಅಲ್ಲೊಂದು ಮಾಡ ಆಗಬೇಕೆಂದು ತೀರ್ಮಾನಿಸಿ ಆಸ್ಥಳ ಯೋಗ್ಯವಲ್ಲವೆಂದು ತಿಳಿದು ಮುಂದೆ ಬಡಾಜೆ ಮಹಾಲಿಂಗೇಶ್ವರ ಸ್ಥಳವನ್ನು ದಾಟಿ ಮಂಜೇಶ್ವರದ “ಮಹಿಮೆಗೋಳಿ” ಎಂಬ ಸ್ಥಳವನ್ನು ದಾಟುವಾಗ ಅಣ್ಣ ದೈವರಿಗೆ “ಬಬ್ಬರ್ಯ”ಎಂಬ ದೈವವನ್ನು ಒಂದು ತಾಳೆ ಮರವನ್ನು ತನ್ನ ಹೆಗಲ ಮೇಲಿಟ್ಟು ಮತ್ತೊಂದು ತಾಳೆಮರದಿಂದ ಹಲ್ಲು ತಿಕ್ಕುತ್ತ, ತನ್ನ ಬಲಾಡ್ಯವನ್ನು ಪ್ರದರ್ಶಿಸುತ್ತಾ ಅಣ್ಣ ದೈವಗೆ ತೊಂದರೆಕೊಡಲೆAದೇ ಕಡಲ ನೀರನ್ನು ಹೆಚ್ಚಿಸಿ ಭರತವಾಗುವಂತೆ ಮಾಡಿದರು.ಮುಂದೆ ಹೋಗಬೇಕಾದರೆ ತನ್ನ ಕಾಲುಗಳ ಎಡೆಯಿಂದ ಹೋಗಬೇಕೆಂದು ತಾಕೀತು ಮಾಡಿದಾಗ ತೀರ ಸಾದು ಸ್ವಭಾವದವರಾದ ಅಣ್ಣ ದೈವ ಮುಂದೆ ಜಾತ್ರೆ ಸಮಯದಲ್ಲಿ ಪ್ರಜಾ ಭಂಡಾರ ಸಹಿತ ನಾನಿಲ್ಲಿಗೆ ಭೇಟಿ ನೀಡುವೆನು ಎಂದಾಗ ಬಬ್ಬರ್ಯ ಭಗವತಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಭಗವತೀಯು ಕುತೋಹಲದಿಂದ ಅಣ್ಣ ದೈವವನ್ನು ಕಾಣಲೆಂದು ಬಂದು ಮಾಯದ ದೃಷ್ಟಿಯಲ್ಲಿ ಎಲ್ಲವನ್ನು ತಿಳಿದುಕೊಂಡು ಅಣ್ಣ ಮತ್ತು ತಮ್ಮ ನೆಲೆಯಾಗುವಲ್ಲಿ ತಾನು ನೆಲೆಯಾಗುದೆಂದು ಭರವಸೆ ನೀಡಿದರು. ನಂತರ ಸಮುದ್ರ ಕರಾವಳಿಯಾಗಿ ಬರುವಾಗ ಉದ್ಯಾವರದ ಸಾವಿರ ಜಮಾತ್ ಮಸೀದಿಯಲ್ಲಿ ನೆಲೆಯಾಗಿರುವ ಶೇಕರಿಕರನ್ನು ಎದುರುಗೊಂಡಾಗ ನೀವು ಇಲ್ಲೇ ನೆಲೆಯಾಗಬೇಕೆಂದು ಬೇರೆಲ್ಲಿಯಾದರು ನೆಲೆಯಾದರು ನಮ್ಮಲ್ಲಿಗೆ ಭೇಟಿ ಕೊಡಬೇಕೆಂದು ಕೇಳಿಕೊಂಡಾಗ ಅಣ್ಣ ದೈವ ಹೀಗೆ ಹೇಳುತ್ತಾರೆ, ನಾವೆಲ್ಲಿ ನೆಲೆಯಾದರೂ ಜಾತ್ರೆಯ ಕೊಡಿಯೇರುವ ಎರಡನೇ ವರಕ್ಕಿಂತ ಮೊದಲು ಒಂದು ಶುಕ್ರವಾರ ಇಲ್ಲಿಗೆ ಬಂದು ನಿಮ್ಮನ್ನ ಭೇಟಿಯಾಗುತ್ತೇವೆ. ಅದೇ ರೀತಿ ನಮ್ಮ ಜಾತ್ರೆಗೆ ಬಂದು ಅದನ್ನು ಚಂದಮಾಡಿಸಿಕೊಡಬೇಕೆAದು ಅಣ್ಣ ದೈವ ಹೇಳಿದರೆಂಬ ಐತಿಹ್ಯವಿದೆ.


ಆಗ ರತ್ನ ಕಂಬಳಿಯಿ0ದ ನಿದ್ದೆಯಿಂದ ಎದ್ದ ತಮ್ಮ ದೈವ ಅಣ್ಣನನ್ನು ಕಾಣದಾದಾಗ ಕೋಪದಿಂದ ಬಡಗು ದಿಕ್ಕಿನಿಂದ ಹಡಗಿನಲ್ಲಿ ಸೋಮೇಶ್ವರ ದೇವಸ್ಥಾನದ ಬಲಭಾಗದಲ್ಲಿ ರುಧ್ರಪಾದೆಯಲ್ಲಿ ಮೌನದಲ್ಲಿ ಕುಳಿತರು. ಆ ಸಮಯದಲ್ಲಿ ಉದ್ಯಾವರದ “ತೇರು” ಎಂಬಲ್ಲಿ ಮುಂಡತ್ತಾಯ ದೈವಗಳು ರಾಜಂದ್
ದೈವಗಳಾಗಿ ನೆಲೆಸಿದ್ದರು. ಅವರು ಕಣ್ವತೀರ್ತಕ್ಕೂ ಸೋಮೇಶ್ವರಕ್ಕೂ ಅಲೌಕಿಕ ರೀತಿಯಲ್ಲಿ ಭೇಟಿಕೊಡುತ್ತಿದ್ದರು. ಕಣ್ವತೀರ್ತಕ್ಕೆ ಬಂದಾಗ ಅಲ್ಲಿ ಅಣ್ಣ ದೈವವಿದ್ದು , ನಂತರ ಸೋಮಶ್ವರ ದೇವಾಲಯಕ್ಕೆ ಬಂದಾಗ ತಮ್ಮ ದೈವವಿದ್ದು ಬಹುಶಃ ಇವರಿಬ್ಬರು ಒಬ್ಬರೇ ಆಗಿದ್ದು ಏನೋ ಕುತಂತ್ರ ಮಾಡುತ್ತಿದ್ದರೆಂದು ಅವರನ್ನು ಪ್ರಶ್ನಿಸಿದಾಗ ತಮ್ಮದೈವ ಎಲ್ಲಾ ವಿಷಯವನ್ನು ಹೇಳಿದರು. ಈ ಎಲ್ಲಾ ವಿಷಯನ್ನು ಕೇಳಿದ ಮುಂಡತ್ತಾಯ ದೈವ ನಿಮ್ಮನ್ನು ಒಂದು ಮಾಡಿದರೆ ನನಗೇನು ಮಾಡುತ್ತಿ ಎಂದು ಕೇಳಿದಾಗ ಅಣ್ಣ ದೈವ ಹೀಗೆ ಹೇಳುತ್ತಾರೆ.”ರಡ್ಡ್ ಕಿರುವಾಳ್‌ಗ್ ಒಂಜಿ ಕಡ್ತಲೆ, ರಡ್ಡ್ ಛಾವಡಿಗ್ ಒಂಜಿ ಬುದ್ಧಿವಂತೆ, ಎಂಕ್ಲೆಗ್ ಕುಳ್ಳಿಪಟ್ಟಾಂಡಲಾ ನಿಕ್ಕ್ ನಡತಿ ಪಟ್ಟ ” (ನೀನು ನಮ್ಮ ಜೊತೆ ಅನ್ಯೂನ್ಯವಾಗಿರಬೇಕೆಂದೇ ತಾತ್ಪರ್ಯ) ಆದರು ಕೋಪದಿಂದ ತಮ್ಮ ಅಣ್ಣನಿಗೆ ಬಾಣ ಬಿಡಲು ಮುಂದಾದಾಗ ಇದನ್ನು ಮುಂಡತ್ತಾಯ ದೈವವು ತಡೆಯುತ್ತದೆ. ಮತ್ತು ನಾವೆಲ್ಲಾದರೂ ಮಾಡ ಕಟ್ಟಿದರೆ ಅಲ್ಲಿ ಧ್ವಜವೇರಿ ಇಳಿಯುವ ಮುನ್ನ ನನಗೆ ಒಂದು ನೇಮ ಹೆಚ್ಚಾಗಿ ಕೊಡಬೇಕೆಂದು ಶರತ್ತನ್ನು ಇಟ್ಟಿದಾಗ ಅದಕ್ಕೆ ಒಪ್ಪುವ ಮೂಲಕ ಇವರಿಬ್ಬರು ಒಂದಾಗುತ್ತಾರೆ. ಅಲ್ಲಿಂದ “ಹೊನ್ನೆ” ಎಂಬ ಪವಿತ್ರ ಸ್ಥಳಕ್ಕೆ ಬಂದು ತನ್ನ ಶಕ್ತಿಯಿಂದ ಬಾವಿಯೊಂದನ್ನು ಸೃಷ್ಟಿಸುತ್ತಾರೆಂಬ ಐತಿಹ್ಯವಿದೆ. ನಂತರ ತಮ್ಮ ನೆಲೆಗಾಗಿ “ಬಲ್ಯ” ಎಂಬ ಸ್ಥಳಕ್ಕೆ ಬಾಣ ಬಿಟ್ಟರು ಅದು ಯೋಗ್ಯವಲ್ಲವೆಂದು ತಿಳಿದು ಮುಂದೆ ಮಂಜಿನಡ್ಕದತ್ತ ಬಾಣ ಹೊಡೆದರೆ ಅದು ಫಲಕಾರಿಯಾಗಿಲ್ಲ. ಮುಂದೆ ಉದ್ಯಾವರದ ಕಡೆಗೆ ಬಾಣ ಬಿಟ್ಟಾಗ ತಾವು ಬಾಣ ಬಿಟ್ಟ ಸ್ಥಳದಲ್ಲಿ ಹಾವು ಮುಂಗುಸಿ ಜೊತೆಯಾಗಿತ್ತು. ಮತ್ತು ಹಿಂದೆ ಈ ಜಾಗದಲ್ಲಿ ಉದ್ದಾಲಕ ಮುನಿ ತಪಸ್ಸು ಮಾಡಿದ ಸ್ಥಳವೆಂದು ಪ್ರತೀತಿ ಇದೆ. ಅಣ್ಣ ಬಾಣಬಿಟ್ಟ ಜಾಗದಲ್ಲಿ ದನ ಹುಲಿ ಜೊತೆಯಾಗಿದ್ದವು. ಈ ಸ್ಥಳವೇ ನಮಗೆ ಸೂಕ್ತವೆಂದು ತೀರ್ಮಾನಿಸಿ, ಸೂಯೋದಯದಲ್ಲಿ ತಮ್ಮನಿಗೆ ಮಾಡದ ರಚನೆಯಾಯಿತು. ಕತ್ತಲೆಗೆ ಮೊದಲು ಅಣ್ಣನಿಗೆ ಕೊಟ್ಯ ನಿರ್ಮಾಣವಾಯಿತು. ಪ್ರಕೃತಿ ಸಹಜವಾಗಿ ಕೆಲವು ಪ್ರಾಣಿಗಳಿಗೆ ಕೆಲವು ಪ್ರಾಣಿಗಳ ಜೊತೆ ವೈಷಮ್ಯೆ ಇರುವುದು ಸಹಜ, ಅದರಲ್ಲೂ ಹಾವು ಮುಂಗುಸಿ , ಹುಲಿ ದನ ಕಡು ವೈರಿ ಪ್ರಾಣಿಗಳು. ಆದರೂ ಉದ್ಯಾವರದ ಈ ಮಣ್ಣಿನಲ್ಲಿ ಅದರಲ್ಲಿದ್ದ ಭಾಂಧವ್ಯ ಪ್ರಸ್ತುತ ಹಿಂದೂ ಮುಸ್ಲಿಂ ಭಾಂದವ್ಯ , ಸೌಹರ್ದತೆಗೆ ನಾಂದಿಯಾಗಿತ್ತೆAದರೆ ಅತಿಷಯೋಕ್ತಿಆಗಲಾರದು. ಈ ಸೌರ್ಹಾದತೆಯ ಕೇಂದ್ರ ಬಿಂದು ಉದ್ಯಾವರದಲ್ಲಿ ಅಣ್ಣ ತಮ್ಮ ದೈವದ ಜೊತೆ ಮುಂಡತ್ತಾಯ ( ವೈದ್ಯನಾಥ) ದೈವವು ಮಂತ್ರಿಯಾಗಿ ನೆಲೆಯಾಗಿದ್ದರು.


ಉದ್ಯಾವರಕ್ಕೆ ಅಣ್ಣ ದೈವ ದಂಡಿಗೆಯಲ್ಲೂ , ತಮ್ಮ ದೈವ ಕುದುರೆಯಲ್ಲೂ ಬರುವಾಗ ನಡಿಮಾರ್ ಗದ್ದೆಯ ಬಳಿಯಿಂದ ಬರುವಾಗ ಇಲ್ಲಿನ ತುಂಡರಸರಾದ ಕೋಚುಮಳ್ಳಿಯ ಸವಾಲನ್ನು ಎದುರಿಸಬೇಕಾಗುತ್ತದೆ. ಈ ಗದ್ದೆಯಲ್ಲಿ ಏಳು ರಾತ್ರಿ ಎಂಟು ಹಗಲು ಯುದ್ಧವಾಗಿ ಸೋಲು ಗೆಲುವು ಯಾರಿಗೂ ಆಗದೇ ಇದ್ದಾಗ ಅಣ್ಣ ದೈವ ಸಮಯ ಎಷ್ಟಾಯಿತು ಮೇಲೆ ನೋಡೆಂದಾಗ ಕಬ್ಬಿಣದ ಅಂಗಿಯನ್ನು ಹಾಕಿದ್ದರಿಂದ ಮೇಲೆ ನೋಡುವಾಗ ಕೊರಳಿನ ಭಾಗದಲ್ಲಿ ಸಂದು ಬಿಟ್ಟ ಸ್ಥಳಕ್ಕೆ ಬಾಣ ಬಿಡುವುದರ ಮೂಲಕ ಅವರನ್ನು ಕೊಲ್ಲುತ್ತಾರೆ. ಅದಕ್ಕೆ ಪಶ್ಚಾತಾಪ ವೆಂಬತೆ ಕೋಚುಮಳ್ಳಿಯ ತಲೆಯ ರೂಪ ಮಾಡಿ ಅಣ್ಣ ಮಾಡದಲ್ಲಿ ಈಗಲೂ ಕಾಣಬಹುದಾಗಿದೆ. ಈ ರೂಪಕ್ಕೆ ತೆಂಕಾಯಿ ಮಲಯಾಳದಿಂದ ಬೊಳ್ಳಿಯ ಚಂದನ ಮರವನ್ನು ಉಪಯೋಗಿಸಲಾಯಿತೆಂಬ ಉಲ್ಲೇಖವಿದೆ. ಭಾಷಾ ಸೌರ್ಹದತೆಯ ಕೊಂಡಿಯAತಿರುವ ಉದ್ಯಾವರದ ಈ ಕ್ಷೇತ್ರದಲ್ಲಿ ಇಂದಿನಿAದ ಮೇ ೧೪ ರ ತನಕ ವರ್ಷಾವದಿ ಜಾತ್ರೋತ್ಸವ ಐತಿಹಾಸಿಕ ಬಂಡಿ ಮಹೋತ್ಸವ ನಡೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!