ಉಗ್ರರ ಹಟ್ಟಹಾಸಕ್ಕೆ ತಕ್ಕ ಉತ್ತರ ನೀಡಿದ “ಸಿಂಧೂರ” ಮಾನವೀಯತೆ ಮೆರೆದ ಭಾರತೀಯ ಸೇನೆ

ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಬಹಳ ಬುದ್ಧಿವಂತಿಕೆಯಿ0ದ ಹಾಗೂ ಯೋಜಿತ ಕಾರ್ಯದೊಂದಿಗೆ ತಕ್ಕ ಉತ್ತರ ನೀಡಿ ಪಾಕಿಸ್ಥಾನದ ವಿರುದ್ಧ ಪ್ರತೀಕಾರ ಆರಂಭಿಸಿದೆ.ಪೆಹಲ್‌ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 26 ಭಾರತೀಯರು ಸಾವನ್ನಪ್ಪಿದ್ದು ಇದರಲ್ಲಿ ಸಿಂಧೂರ ನಷ್ಟಗೊಳಿಸಿದವರಿಗೆ ಸಿಂಧೂರದ ಬೆಲೆ ಏನೆಂಬುದನ್ನು ಅಪರೇಷನ್ ಸಿಂಧೂರದ ಮೂಲಕ ತಿಳಿಸಿದೆ.

ಮೇ17ರ ಬುಧವಾರ ನಸುಕಿನ ವೇಳೆ ಅಪರೇಷನ್ ಸಿಂಧೂರ ಅಡಿಯಲ್ಲಿ ಭಾರತೀಯ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಭಯೊತ್ಪಾಧನೆಯನ್ನ ಪ್ರೋತ್ಸಾಹಿಸುತ್ತಿರುವ ಜೈಶ್.ಎ-ಮೊಹಮ್ಮದ್ ,ಲಷ್ಕರ್-ಎ-ತೊಯ್ಬ,ಸಂಘಟನೆಯನ್ನ ಗುರಿಯಾಗಿಸಿ ಕಾರ್ಯಚರಣೆ ಆರಂಭಿಸಿ ಒಟ್ಟು ಉಗ್ರರ ಒಂಬತ್ತು ಹಡಗುತಾಣಗಳನ್ನು ಧ್ವಂಸ ಮಾಡಿದೆ.


ಪೆಹಲ್‌ಗಾಮ್ ಉಗ್ರರ ದಾಳಿಯ ನಂತರ ಪ್ರತೀ ಕ್ಷಣ ಕ್ಷಣಕ್ಕೂ ಭಾರತೀಯ ಸೇನೆ ವಿವಿಧ ಆಯಾಮಗಳಲ್ಲಿ ಬಹಳ ಯೋಜಿತವಾಗಿ ದೂರದರ್ಶಿ ನಿಲುವಿನೊಂದಿಗೆ ಆಲೋಚಿಸಿ ಸುಮಾರು 14 ದಿನಗಳ ನಂತರ ಉಗ್ರರಿಗೆ ತಕ್ಕ ಪಾಠ ಕಲಿಸಿದೆ.


ಇಲ್ಲಿ ಭಾರತೀಯ ಸೇನೆ ನಮಗೆ ಪಾಕ್ ಪ್ರಜೆಗಳ ಮೇಲೆ ಯಾವುದೇ ಧ್ವೇಷವಿಲ್ಲ, ಕೇವಲ ಉಗ್ರರೇ ನಮ್ಮ ಗುರಿ. ಆದುದರಿಂದ ಪಾಕ್ ಪ್ರಜೆಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲವೆಂಬ ವಿಶಾಲ ಹೃದಯದಿಂದ ಮಾನವೀಯತೆ ಮೇರೆದಿದ್ದು ಲೋಕ ರಾಷ್ಟçಗಳು ಕೊಂಡಾಡುವAತೆ ಮಾಡಿದೆ.
ಉಗ್ರರ ಅಟ್ಟಡಗಿಸುವ ಮಧ್ಯೆಯೂ ಈ ರೀತಿಯ ಮಾನವೀಯತೆ ಮೆರೆದಿದ್ದು ಭಾರತೀಯ ಸೇನೆಯ ಉದಾತ್ತ ಚಿಂತನೆಯಾಗಿದೆ. ಭಾರತೀಯ ಸೇನೆಯು ನೀಡಿದ ಉತ್ತರದಿಂದ ಉಗ್ರರ ತವರು ಪಾಕಿಸ್ಥಾನ ಕಕ್ಕಬಿಕ್ಕಿಯಾಗಿದ್ದು ಪ್ರಸ್ತುತ ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನಮ್ಮ ಸೇನೆಯ ಉತ್ತರ ಇದೇ ರೀತಿ ಮುಂದುವರಿದ್ದಲ್ಲಿ ಪಾಕಿಸ್ಥಾನ ಸರ್ವನಾಶ ಖಂಡಿತ.

SHARE
Loading spinner

Leave a Reply

Your email address will not be published. Required fields are marked *

error: Content is protected !!