ಸಮಸ್ಯೆ ಅದು ಸಮಸ್ಯೆಯೇ ಅಲ್ಲ…..!

ದಿನವೂ ಒಂದಲ್ಲ ಒಂದು ಕಷ್ಟಗಳು ಬರುತ್ತಾ ಇರುತ್ತದೆ. ಕಷ್ಟಗಳು ನಷ್ಟಗಳು ಸಾಗರದ ಅಲೆಗಳಂತೆ ಬಂದು ಬದುಕ್ಕೆನ್ನುವ ದಡಕ್ಕೆ ನಿರಂತರವಾಗಿ ಬಡೆಯುತ್ತಲೇ ಇರುತ್ತದೆ. ಆದರೆ ಆ ಅಲೆಗಳಿಗೆ ಹೆದರಿದರೆ ಬಾಳು ಸೋತು ಹೋಗುತ್ತದೆ. ಅಲೆಗಳನ್ನು ಧೈರ್ಯದಿಂದ ಎದುರು ಹಾಕಿ ಮುನ್ನುಗ್ಗಿ ಈಜಿದರೆ ಗೆಲುವು ನಮ್ಮದಾಗುತ್ತದೆ .

ಪ್ರತಿ ಸಮಸ್ಯೆಗಳು ಎದುರಾದ ಸಮಯದಲ್ಲಿ ನಮಗೆ ಬೇಕಾಗಿರುವುದು ಧೈರ್ಯ, ಆತ್ಮವಿಶ್ವಾಸ . ಇದನ್ನು ನಾವು ಒಮ್ಮೆ ಕಳೆದುಕೊಂಡರೆ ಮುಂದೆ ಎದುರಾಗುವ ಸಮಸ್ಯೆಗಳನ್ನು ಹಿಮ್ಮೆಟ್ಟಲು ಕಷ್ಟವಾಗುತ್ತದೆ. ಹಾಗಾಗಿ ಆತ್ಮವಿಶ್ವಾಸವನ್ನು ನಾವು ಯಾವತ್ತಿಗೂ ಯಾವ ಕ್ಷಣಕ್ಕೂ ಕಳೆದುಕೊಳ್ಳಬಾರದು . ಅದರಂತೆ ಗುರಿಯನ್ನು ಮುಟ್ಟುವ ತನಕ ,ಗುರಿ ಮುಟ್ಟಿದ ಮೇಲು ತಾಳ್ಮೆಯನ್ನು ಕಳೆದುಕೊಳ್ಳಬಾರದು. ತಾಳ್ಮೆಯನ್ನು ಕೆರಳಿಸುವ ತಾಳ್ಮೆಯನ್ನು ಕೆಡಿಸುವ ಪ್ರಸಂಗಗಳು ಆಗಾಗ್ಗೆ ಬರುತ್ತಾ ಹೋಗುತ್ತಾ ಇರುತ್ತದೆ ಆದರೆ ಎಲ್ಲವನ್ನು ತಾಳ್ಮೆಯಿಂದ ಸಹಿಸಬೇಕು. ಒಮ್ಮೆ ತಾಳ್ಮೆ ಕೆಟ್ಟರೇ ಅದೆಷ್ಟೋ ದಿನಗಳಿಂದ ಪಟ್ಟ ಕಷ್ಟ , ನಿನ್ನ ಬೆವರ ಹನಿ, ಆ ಕಾಯಕಕ್ಕಾಗಿ ವಿನಯೋಗಿಸಿದ ಸಮಯ ಎಲ್ಲವೂ ವ್ಯರ್ಥವಾಗಿ ಬಿಡುತ್ತದೆ.

ಆತ್ಮವಿಶ್ವಾಸ ಮತ್ತು ತಾಳ್ಮೆಯ ಜೊತೆಗೆ ಕಠಿಣ ಪರಿಶ್ರಮದ ಜೊತೆಗೆ ಅದೃಷ್ಟವೂ ಇದ್ದರೆ ನಾವು ಅಂದುಕೊಂಡ ಗುರಿಯನ್ನು ತಲುಪಬಹುದು ತೀರವ ಸೇರಬಹುದು . ಹಾಗಂತ ಅದೃಷ್ಟ ತಾನು ಕುಳಿತ್ತಲೇ ಬರಲಿ ಎಂದು ಕೊಂಡರೆ ಮೂರ್ಖತನ ಯಾಕೆಂದರೆ ನೀನು ಕೆಲಸ ಆರಂಭಿಸಿದ ಮೇಲೆ ಅದೃಷ್ಟ ಬರುವ ಸಾಧ್ಯತೆ ಹೆಚ್ಚೆಂದು ಹಣೆ ಬರಹದಲ್ಲಿ ಬರೆದಿದ್ದರೆ. ಯಾವುದೇ ಒಳ್ಳೆ ಕಾರ್ಯವನ್ನು ಆರಂಭಿಸು ಪ್ರತಿಫಲ ಆ ದೇವರಿಗೆ ಬಿಟ್ಟದ್ದು.ತಾಳು ಮನವೇ ನಿನಗಾಗಿ ಬರುವುದು ಒಂದು ಕಾಲ ,ತಾಳು ಬಾಳೇ ನಿನಗಾಗಿ ಬರುವುದು ಸುಂದರ ನಾಳೆ , ತಾಳ್ಮೆ ಕೆಟ್ಟು ,ಗುರಿಯ ಬಿಟ್ಟು, ಅತಿ ಆಸೆಯ ಪಟ್ಟು ನೀನು ಮುನ್ನಡೆದರೆ ನಿನ್ನ ಕೋರಿಕೆ ಬಯಕೆ ನೆಲ ಕಚ್ಚಬಹುದು.

✍️ ಗಿರೀಶ್ ಪಿಎಂ
ಕಾಸರಗೋಡು

SHARE
Loading spinner

Leave a Reply

Your email address will not be published. Required fields are marked *

error: Content is protected !!