ಮಂಜೇಶ್ವರ: ವಸತಿಗೃಹ ದಾಳಿ–ಬೆದರಿಕೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪೊಲೀಸ್ ವಶ
ಮಂಜೇಶ್ವರ: ವಸತಿಗೃಹಕ್ಕೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಗೆಳತಿಯ ಅರೆನಗ್ನ ವೀಡಿಯೋ–ಫೋಟೋ ಚಿತ್ರೀಕರಿಸಿ ಬೆದರಿಸಿ ಹಣ ಮತ್ತು ಮೊಬೈಲ್ ಅಪಹರಿಸಿದ ಪ್ರಕರಣದಲ್ಲಿ ಮತ್ತೊಬ್ಬನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮೊಹಮ್ಮದ್ ಫೈಸಲ್ (42) ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮಂಜೇಶ್ವರ ಪಿರಾರಮೂಲೆ ನಿವಾಸಿ ಕೆ.ಎ. ಹಾರಿಸ್ (40) ಬಂಧಿತನಾಗಿದ್ದ. ಜನವರಿ 14ರಂದು ನಡೆದ ಘಟನೆಯಲ್ಲಿ ನಾಲ್ಕು ಮಂದಿಯ ತಂಡ…