ಅವಿಭಜಿತ ಜಿಲ್ಲೆಯಿಂದ ವಿಧಾನ ಪರಿಷತ್‍ಗೆ ಇರುವ ಎರಡು ಸ್ಥಾನಗಳಲ್ಲಿ 1 ಸ್ಥಾನವನ್ನು ಕ್ರಿಶ್ಚಿಯನ್ ಸಮುದಾಯಕ್ಕೇ ನೀಡಬೇಕೆಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯ .. !
ಪುತ್ತೂರು: ಸುಮಾರು 38 ಲಕ್ಷ ಜನಸಂಖ್ಯೆ ಇರುವ ಕ್ರೈಸ್ತರಿಗೆ ಕರ್ನಾಟಕದಲ್ಲಿ ರಾಜಕೀಯ ಪಾಲು ತೀರಾ ಕಡಿಮೆ ಇದೆ. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಮಂಗಳೂರು ಕ್ರೈಸ್ತರಿಗೆ ಮಂತ್ರಿಮಂಡಲದಲ್ಲಿ ಸ್ಥಾನವಿಲ್ಲದೆ 31 ವರ್ಷಗಳಾಗಿವೆ. ಹಾಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮುಂದಿನ ಸಂಪುಟ ಪುನಾರಚಣೆ ಸಂದರ್ಭದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಅವಿಭಜಿತ ಜಿಲ್ಲೆಯಿಂದ ವಿಧಾನ ಪರಿಷತ್‍ಗೆ ಇರುವ ಎರಡು ಸ್ಥಾನಗಳಲ್ಲಿ 1 ಸ್ಥಾನವನ್ನು ಕ್ರಿಶ್ಚಿಯನ್ ಸಮುದಾಯಕ್ಕೇ ನೀಡಬೇಕು ಎಂದು ಪುತ್ತೂರು ಕ್ರಿಶ್ಚಿಯನ್ ಯೂನಿಯನ್ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…