Avatar

Rashmitha Acharya

ಸಂತ ಅಲೋಶಿಯಸ್ ಉರ್ವಾದ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಜೇನ್ ಜೆರುಶ ಪಿಂಟೋ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಗುಂಡು ಎಸೆತ ಹಾಗೂ ಚಕ್ರಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನುಗಳಿಸಿ ಮಧ್ಯ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಸಂಚಾಲಕರು ವಂ ಗುರುಗಳಾದ ಬೆಂಜಮಿನ್ ಪಿಂಟೋ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ಅಲೋಶಿಯಸ್ ಡಿಸೋಜ ,ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಮೋದ್, ಸುಧಾಕರ್ ಮತ್ತು ಹರಿಣಾಕ್ಷಿ ಇವರು ಶಾಲಾವತಿಯಿಂದ ಅಭಿನಂದಿಸಿ ಶುಭ ಹಾರೈಸಿದರು.

Read More

ಕಾಸರಗೋಡು : ರಸಮಂಜರಿ ಕಾರ್ಯಕ್ರಮದ ವೇಳೆ ಕಾಲ್ತುಳಿತ – 15 ಮಂದಿಗೆ ಗಾಯ

ಕಾಸರಗೋಡು:  ನಗರದ ಹೊರವಲಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ನಿರೀಕ್ಷೆಗೂ ಮೀರಿ ಸೇರಿದ್ದ ಜನಸಂದಣಿಯಿಂದ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತದಿಂದ ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ. ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕಾಸರಗೋಡು ನಗರದ ಹಲವು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಫ್ಲೀ ಯುವಜನ ಸಂಘಟನೆ ವತಿಯಿಂದ ನುಳ್ಳಿಪ್ಪಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಹೆಸರಾಂತ, ಗಾಯಕ ಹನಾನ್ ಷಾ ಅವರ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸೇರಿದ್ದರು. ಕಾರ್ಯಕ್ರಮಕ್ಕೆ…

Read More

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ “ಇನ್ನೋವೇಷನ್ ಶೋಕೆಸ್–2025” ಮತ್ತು “ಸಿಥೇರಿಯನ್–2025 ಹ್ಯಾಕಥಾನ್” ಭವ್ಯ ಉದ್ಘಾಟನೆ

ಮಂಗಳೂರು: ಮಂಗಳೂರಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ಆಕ್ಟಿವಿಟಿ ಸೆಲ್ ಹಾಗೂ CSE, ISE, AI & ML, ECE, CSD ಮತ್ತು CSBS ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ಇನ್ನೋವೇಷನ್ ಶೋಕೆಸ್: ಮೇಜರ್ ಪ್ರಾಜೆಕ್ಟ್ ಎಕ್ಸಿಬಿಷನ್–2025” ಮತ್ತು “ಸಿಥೇರಿಯನ್–2025: 24-ಗಂಟೆಗಳ ಹ್ಯಾಕಥಾನ್” ಕಾರ್ಯಕ್ರಮಗಳು ನವೆಂಬರ್ 22 ಮತ್ತು 23, 2025 ರಂದು ಭವ್ಯವಾಗಿ ಜರುಗಿದವು. ಉದ್ಘಾಟನಾ ಸಮಾರಂಭವು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸಭಾಂಗಣದಲ್ಲಿ ನೆಡೆಯಿತು. ಮುಖ್ಯ ಅತಿಥಿ ಡಾ. ನಿರಂಜನ್…

Read More

ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ಶ್ರೀಮತಿ ರೂಪಕಲಾ ದಂಪತಿ ವಿವಾಹ “ರಜತ ಸಂಭ್ರಮ “

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಮುಂದಾಳು ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ರೂಪಕಲಾ ದಂಪತಿಗಳ ವಿವಾಹದ 25ನೇ ವರ್ಷಚಾರಣೆ, ವಿವಾಹ ರಜತ ಸಂಭ್ರಮ ಕಾರ್ಯಕ್ರಮ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ 15.11.2025 ರಂದು ಅದ್ದೋ ರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೊಳ್ಳ ದಂಪತಿಗಳು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ಸೀರೆ, ಧೋತಿ ವಸ್ತ್ರ, ಗಳೊಂದಿಗೆ ಭಾಗಿನ ಸಮರ್ಪಿಸಿ ಗೌರವಿಸಿದರು. ಸುಮಾರು 25 ಮಂದಿ…

Read More

ಕೇಂದ್ರ ಸರಕಾರ ಜಾರಿ ಮಾಡಿದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ

ಮಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿ ಮಾಡಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಹಾಗೂ ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ ಇಂದು(22-11-2025) ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು CITU ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ…

Read More

ಸ್ಥಳೀಯಾಡಳಿತ ಚುನಾವಣೆ-ಯುಡಿಎಫ್ ಒಳಜಗಳ ಗಂಭೀರ ಸ್ವರೂಪ

ಮಂಜೇಶ್ವರ: ಮಂಜೇಶ್ವರದಲ್ಲಿ ಸ್ಥಳೀಯಾಡಳಿತ ಚುನಾವಣೆಯನ್ನು ಮುನ್ನಡೆಸುವ ಹಿನ್ನೆಲೆ ಯುಡಿಎಫ್ ಒಳಜಗಳ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯುಡಿಎಫ್ ಮೈತ್ರಿಯೊಳಗಿನ ಪಕ್ಷ ಹಂಚಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ಗೆ ಸೀಟು ನೀಡದಿರುವುದು ಹೊಸ ತಳಹದಿಯ ಉದ್ವಿಗ್ನತೆಯನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ಬಾನುವಾರ ಬೆಳಿಗ್ಗೆ ಮಂಜೇಶ್ವರ ಹೊಸಂಗಡಿಯಲ್ಲಿ ಇರುವ ಕಾಂಗ್ರೆಸ್ ಕಚೇರಿಯನ್ನು ಸ್ಥಳೀಯ ಕಾರ್ಯಕರ್ತರು ಸಂಕೇತಾತ್ಮಕವಾಗಿ ಮುಚ್ಚುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕಚೇರಿ ಮುಚ್ಚುವ ಸಂದರ್ಭ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನೇತಾರರು ಈ ಬಾರಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಮಂಜೇಶ್ವರ ಕಾಂಗ್ರೆಸ್ ನೇತಾರರು…

Read More

ವೀರಾಂಜನೇಯ ಫ್ರೆಂಡ್ಸ್ ಕ್ಲಬ್ ಬಂಬ್ರಾಣ ಕಬಡ್ಡಿ ತಂಡದ ನೂತನ ಸಮವಸ್ತ್ರ ಬಿಡುಗಡೆ ಸಮಾರಂಭ

ಕುಂಬಳೆ : ಕಾಸರಗೋಡು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕ್ರೀಡಾ, ಸಾಂಕೃತಿಕ, ಜೀವಕಾರುಣ್ಯ, ವಿದ್ಯಾಭ್ಯಾಸ ರಂಗದಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿರುವ ಸಂಸ್ಥೆ ವೀರಾಂಜನೇಯ ಫ್ರೆಂಡ್ಸ್ ಕ್ಲಬ್ ಶಿವಾಜಿ ನಗರ ಬಂಬ್ರಾಣ ಇದರ ಕಬಡ್ಡಿ ತಂಡದ ನೂತನ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮ ಇಂದು ಬೆಳಗ್ಗೆ ಭಜನಾ ಮಂದಿರ ವಠಾರದಲ್ಲಿ ನಡೆಯಿತು. ಇತ್ತೀಚಿಗೆ ಅಗಲಿದ ತಮ್ಮ ಸಂಸ್ಥೆಯ ಸದಸ್ಯ ಅಜಿತ್ ಬೆಜ್ಜ ಇವರ ಸವಿ ನೆನಪಿಗಾಗಿ ಈ ಸಮವಸ್ತ್ರವನ್ನು ತಯಾರಿಸಲಾಗಿದೆ. ದಿವಂಗತ ಅಜಿತ್ ಬೆಜ್ಜ ಅವರ ಸಹೋದರಿ ಶ್ರೀಮತಿ ವಿದ್ಯಾಶ್ರೀ ಅವರು…

Read More

ಸತ್ಯಸಾಯಿ ಬಾಬಾ ರ ಶತಾಬ್ದಿ ಯಂದು ಬೆಳಕು ಕನ್ನಡ ಸಂಘದ ಭಿತ್ತಿ ಪತ್ರ ಮತ್ತು ಹಸ್ತಪ್ರತಿ ಬಿಡುಗಡೆ

ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ ಸತ್ಯ ಸಾಯಿ ಬಾಬಾರವರ ನೂರನೇ ಜನ್ಮ ದಿನೋತ್ಸವದಂದು ಕನ್ನಡ ಮಕ್ಕಳ ಹಸ್ತಪ್ರತಿ “ಬೆಳಕು”ಮತ್ತು ಭಿತ್ತಿ ಪತ್ರ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಗೊಂಡಿತು. “ಬೆಳಕು” ಕನ್ನಡ ಸಂಘ ದ ಭಿತ್ತಿ ಪತ್ರವನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸತ್ಯಸಾಯಿ ಸೇವಾ ಟ್ರಸ್ಟ್ ಬಾಯಾರು ಇದರ ಉಪಾಧ್ಯಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್ ಇವರ ದಿವ್ಯ ಹಸ್ತದಿಂದ ಅನಾವರಣಗೊಂಡಿತು.ವಿದ್ಯಾರ್ಥಿಗಳ ಕಿರುಚಿತ್ರ ಇದೇ ಸಂಧರ್ಭದಲ್ಲಿ ಬಿಡುಗಡೆಗೊಂಡಿತು. ನಗರ ಸಂಕೀರ್ತನೆ ,ಶುಚಿತ್ವ ನಂತರ,ಸಾಯಿಪೂಜೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಾಯಿ ಸಂದೇಶ…

Read More

ತ್ರಿಮೂರ್ತಿ ಸೇವಾ ಸಮಿತಿ (ರಿ.) ಬಿಜೈ, ಆನೆಗುಂಡಿ ಇದರ ಆವರಣದಲ್ಲಿರುವ ಅಶ್ವಥ ಕಟ್ಟೆಗೆ ಮೇಲ್ಛಾವಣೆ , ಉದ್ಘಾಟನಾ ಸಮಾರಂಭ ಹಾಗೂ ಕಟ್ಟೆಯ ವಾಸ್ತು ಪೂಜೆ

ಮಂಗಳೂರು: ತ್ರಿಮೂರ್ತಿ ಸೇವಾ ಸಮಿತಿ (ರಿ.) ಬಿಜೈ, ಆನೆಗುಂಡಿ ಇದರ ಆವರಣದಲ್ಲಿರುವ ಅಶ್ವಥ ಕಟ್ಟೆಗೆ ಮೇಲ್ಛಾವಣೆ ಅಳವಡಿಸಲಾಗಿದ್ದು ಅದರ ಉದ್ಘಾಟನಾ ಸಮಾರಂಭ ಹಾಗೂ ಕಟ್ಟೆಯ ವಾಸ್ತು ಪೂಜೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಭಾಗವಹಿಸಿದರು. ನಂತರ ಮಾತನಾಡಿದ ಶಾಸಕರು, ಸ್ಥಳೀಯರ ಬೇಡಿಕೆ ಹಾಗೂ ಭಕ್ತರ ಅನುಕೂಲಕ್ಕಾಗಿ ಇಲ್ಲಿನ ಅಶ್ವಥ ಕಟ್ಟೆಗೆ ಹಾಗೂ ಮೇಲ್ಛಾವಣಿಗೆ ಸಹಕಾರ ನೀಡಿರುವುದು ತೃಪ್ತಿ ತಂದಿದೆ. ಎಲ್ಲರಿಗೂ ಇದರಿಂದ ಉಪಯೋಗವಾದರೆ ಅದೇ ತೃಪ್ತಿ ಎಂದರು. ವಾರ್ಡ್ ಅಧ್ಯಕ್ಷ ಕೆ. ನಾರಾಯಣ ರವರು ಮಾತನಾಡಿ, ಕೆಲವು…

Read More

ಕರ್ನಾಟಕದ ಶಬರಿಮಲೆ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ ಕುರಿತು ಮುನ್ನೆಚ್ಚರಿಕೆ ವಹಿಸಲು ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ

ಶಬರಿಮಲೆ : ಕರ್ನಾಟಕದ ಶಬರಿಮಲೆ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ ಕುರಿತು ಮುನ್ನೆಚ್ಚರಿಕೆ ವಹಿಸಲು ಸುರಕ್ಷತಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿನಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶಬರಿಮಲೆ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ/ ಸುರಕ್ಷಿತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ. ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು…

Read More
error: Content is protected !!