ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ಶ್ರೀಮತಿ ರೂಪಕಲಾ ದಂಪತಿ ವಿವಾಹ “ರಜತ ಸಂಭ್ರಮ “

ಕಾಸರಗೋಡು : ಧಾರ್ಮಿಕ, ಸಾಮಾಜಿಕ, ಮುಂದಾಳು ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ -ರೂಪಕಲಾ ದಂಪತಿಗಳ ವಿವಾಹದ 25ನೇ ವರ್ಷಚಾರಣೆ, ವಿವಾಹ ರಜತ ಸಂಭ್ರಮ ಕಾರ್ಯಕ್ರಮ, ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ದಲ್ಲಿ 15.11.2025 ರಂದು ಅದ್ದೋ ರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೊಳ್ಳ ದಂಪತಿಗಳು ಕನ್ನಡ ಭವನದ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ಸೀರೆ, ಧೋತಿ ವಸ್ತ್ರ, ಗಳೊಂದಿಗೆ ಭಾಗಿನ ಸಮರ್ಪಿಸಿ ಗೌರವಿಸಿದರು. ಸುಮಾರು 25 ಮಂದಿ ಮುತ್ತೈದೆಯರಿಗೆ “ಭಾಗಿನ ಸಮರ್ಪಣೆ ನೀಡಿದರು. ಹೊಳ್ಳ ದಂಪತಿಗಳ ಅಪಾರ ಅಭಿಮಾನಿ ಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅಭಿನಂದಿಸಿದರು.


ಕಾರ್ಯಕ್ರಮ ದಲ್ಲಿ ಶ್ರೀ ಗುರುರಾಜ್ ಕಾಸರಗೋಡು ಸಾರತ್ಯದ”ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ.) ತಂಡದ ನ್ರಿತ್ಯ ವೈಭವ, ಶ್ರೀ ವಿಷ್ಣು ಪ್ರಿಯ ಮಹಿಳಾ ಸಂಘ, ಕೀಕಾನ ಇವರ ನ್ರಿತ್ಯ, ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.
ಕನ್ನಡ ಭವನ ವತಿಯಿಂದ 25ನೇ ವರ್ಷದ ನವ ದಂಪತಿಗಳಿಗೆ ವಿಶೇಷ ಸನ್ಮಾನ ನಡೆಯಿತು. ಕಾಸರಗೋಡು ಜಿಲ್ಲೆಯ ಹಾಗೂ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ, ದ. ಕ. ಜಿಲ್ಲಾ ಘಟಕ, ಕೋಲಾರ ಜಿಲ್ಲಾ ಘಟಕ, ಡಾ. ಕೆ. ಏನ್. ವೆಂಕಟ್ರಮಣ ಹೊಳ್ಳ ನಿರ್ದೇಶಕರಾಗಿರುವ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಭಾವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!