Avatar

Rashmitha Acharya

ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವರ ಪರ ಸರ್ಕಾರ ನಿಲ್ಲುತ್ತದೆ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಮಂಗಳೂರು : ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವರ ಪರ ಸರ್ಕಾರ ನಿಲ್ಲುತ್ತದೆ. ತಲ್ವಾರ್ ಗಳು ಪ್ರದರ್ಶನ ಮಾಡುವವರ ಮೇಲೆ ಕ್ರಮ ಇಲ್ಲ. ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸರಕಾರದ ವಿರುದ್ಧ ಗುಡುಗಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕದಲ್ಲಿ 65 ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಯಾದಗಿರಿ…

Read More

ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ಹಕ್ಕುಗಳಿಗಾಗಿ ಹೋರಾಡುವುದು ನಮ್ಮ ಹಕ್ಕು: ಮುರಳೀಧರ ಬಳ್ಳಕುರಾಯ

ಕಾಸರಗೋಡು : ನಮ್ಮ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಸವಲತ್ತುಗಳು ನಿರಾಕರಿಸಲ್ಪಟ್ಟಾಗ ಅವುಗಳನ್ನು ಮರಳಿ ಪಡೆಯಲು ಹೋರಾಡುವುದು ನಮ್ಮ ಹಕ್ಕು. ಕೇರಳ ಸರಕಾರ ಈ ಬಗ್ಗೆ ತಿಳಿದುಕೊಂಡು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕುರಾಯ ಹೇಳಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ನಡೆದ ಕಾಸರಗೋಡು ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವದಾಖಲೆ ಸೃಷ್ಟಿಸಿದ ಶಾಸ್ತ್ರೀಯ ನೃತ್ಯ ಕಲಾವಿದೆ ಮಂಗಳೂರಿನ ರೆಮೊನಾ ಇವೆಟ್…

Read More

ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

ಕನ್ನಡ ರಾಜ್ಯೋತ್ಸವ ಸಮಾರಂಭವೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಸಂಘ ಸಂಸ್ಥೆಗಳಿಗೆ ಸನ್ಮಾನ ಜರಗಿತು. 18 ದೈವಸ್ಥಾನದ ಮಂಗಳೂರು ಜಿಲ್ಲಾ ಬಾಕುಡ ಸಮಾಜ ಸೇವಾ ಸಮಿತಿಗೂ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಲಭಿಸಿತು. ಅಧ್ಯಕ್ಷರಾದ ಶ್ರೀ ದೇವಾನಂದ ಮಂಗಳೂರು ಪ್ರಶಸ್ತಿ ಪತ್ರ ಸಹಿತ ಗೌರವ ಪುರಸ್ಕಾರ ಪಡೆದರು. ಈ ಸಂಧರ್ಭದಲ್ಲಿ ನೇತಾರರಾದ ಶ್ರೀಮತಿ ಇಂದಿರಾ ನಾಗೇಶ್ ‘ ನವೀನ್. ಗಣೇಶ್. ವಿಜಯ ಪಂಡಿತ್ ಶ್ರೀಮತಿ ಸುನೀತಾ…

Read More

ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿವೆ. ಇದರಿಂದ ರಾಜ್ಯಾದ್ಯಂತ ಶೇ. 70 ರಿಂದ 95 ರಷ್ಟು ಬಡ ಹಿಂದುಳಿದ ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ 70ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ…

Read More

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್

ಮಂಗಳೂರು: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ ದಲ್ಲಿ 11 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಜನರಲ್ಲಿ ಭಯ ಮೂಡಿಸುವುದಕ್ಕಾಗಿ ಕೊಲೆಯೆಂದು ಉಲ್ಲೇಖ ಮಾಡಲಾಗಿದೆ. ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ದೇಶದ್ರೋಹ ಕಾಯ್ದೆ ಸೇರಿದಂತೆ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿತ್ತು. ಸುರತ್ಕಲ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಸುಹಾಸ್ ಶೆಟ್ಟಿಯನ್ನು 2025ರ ಮೇ 1ರಂದು ಬಜ್ಜೆಯಲ್ಲಿ ಜನರು…

Read More

ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ: ಕೆ ಅಜಿತ್ ಕುಮಾರ್ ರೈ ಮಾಲಾಡಿ

ಮಂಗಳೂರು: ಬಂಟ ಸಮಾಜ ಬಾಂಧವರೊಳಗೆ ಬಾಂಧವ್ಯ ನಶಿಸಿ ಹೋಗುತ್ತಿದೆ. ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತವಾದ ಕಾರ್ಯವನ್ನು ನಾವು ಮಾಡಬೇಕಾಗಿದೆ. ನಮ್ಮವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ, ಎಲ್ಲಿದ್ದಾರೆ ಎಂಬ ವಿಷಯ, ಮಾಹಿತಿ ನಮ್ಮಲಿಲ್ಲ. ಸಹಸ್ರಾರು ಸಮಾಜ ಬಾಂಧವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಅವರ ಕಣ್ಣೀರನ್ನು ಒರೆಸಿ ಅವರಿಗೆ ಸಹಾಯ ಮಾಡುವ ಹಾಗೂ ಬಂಟ ಸಮಾಜವನ್ನು ಒಗ್ಗೂಡಿಸಿ ಬಾಂಧವ್ಯವನ್ನು ಬೆಸೆಯುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ…

Read More

ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವನದಲ್ಲಿ ಬೀಳ್ಳೊಡುಗೆ ಸಮಾರಂಭ

ಮಂಜೇಶ್ವರ : ಸುದೀರ್ಘ ಕಾಲ ಸೇವೆಯನ್ನು ನೀಡಿ ನಿವೃತರಾದ ಉಪ್ಪಳ ವಿದ್ಯುತ್ ಸೆಕ್ಷನ್ ಸಬ್ ಇಂಜಿನಿಯರ್ ಸೆಬಾಸ್ಟಿನ್ ರವರಿಗೆ ಉಪ್ಪಳ ವ್ಯಾಪಾರ ಭವಣದಲ್ಲಿ ನಡೆದ ಸಮಾರಂಭದಲ್ಲಿ ಬೀಳ್ಳೊಡುಗೆ ನೀಡಲಾಯಿತು.ಕಳೆದ 29 ವರ್ಷಗಳಲ್ಲಿ ಇವರು ಕಾಸರಗೋಡು ನೆಲಿಕುನ್ನು, ಪೈವಳಿಕೆ, ಉಪ್ಪಳ ಸೇರಿದಂತೆ ವಿವಿಧ ಸೆಕ್ಷನ್ ಗಳಲ್ಲಿ ಸೇವೆಯನ್ನು ಜನರ ಪ್ರೀತಿಗೆ ಪಾತ್ರರಾಗಿದ್ದರು. ಉಪ್ಪಳ ಸಬ್ ಅಸಿಸ್ಟಂಟ್ ಇಂಜಿನಿಯರ್ ಜಯನ್ ರವರ ಅಧ್ಯಕ್ಷತೆಯಲ್ಲಿ ನಡೆದ ವಿದಾಯ ಕೂಟ ಸಮಾರಂಭವನ್ನು ನಕಾಸರಗೋಡು ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗರಜ ಭಟ್ ಉದ್ಘಾಟಿಸಿದರು. ಈ ಸಂದರ್ಭ…

Read More

ಪಾವೂರು ಅಂಗನವಾಡಿಯಲ್ಲಿ ಪ್ರವೇಶ ಉತ್ಸವ

ಮಂಜೇಶ್ವರ: ಪಾವೂರು ಅಂಗನವಾಡಿ ಇಂದು ನಡೆದ ಪ್ರವೇಶ ಉತ್ಸವದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯ ಕಮರುಂನ್ನಿಸ ಮುಸ್ತಾಫಾ ಅವರನ್ನು ಪಾವೂರು ಅಂಗನವಾಡಿ ವೆಲ್ಫೇರ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದ ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು ಪ್ರವೇಶ ಉತ್ಸವ ಮಕ್ಕಳಿಗೆ ಹೊಸ ಹುರುಪು ಹಾಗೂ ಸಂತೋಷ ತಂದಿದೆ ಇದೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ತಿಂಗಳಿಗೆ 1ಸಾವಿರ ಅನುದಾನ ಹೆಚ್ಚಿಸಿರುದರಿಂದ ಅವರಿಗೂ ಸಂತೋಷ ಆಗಿದೆ ಏಂದು ಗಣೇಶ್ ಪಾವೂರು ಹೇಳಿದರು ಈ…

Read More

ಯಕ್ಷಗಾನದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ ನಿಧನ

ವಿಟ್ಲ: ಯಕ್ಷಗಾನ ರಂಗದ ಹಿರಿಯ ಅರ್ಥಧಾರಿ ವಿಟ್ಲ ಶಂಭು ಶರ್ಮ (74) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದ ಬಳಿಕ ಶನಿವಾರ ಬೆಳಗ್ಗೆ ನಿಧನ ಹೊಂದಿದರು. ಪತ್ನಿ ಹಾಗೂ ಪುತ್ರ ಸಹಿತ ಅಪಾರ ಬಂಧು, ಬಾಂಧವರು, ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು ಪ್ರಸ್ತುತ ಪುತ್ತೂರು ಸಮೀಪ ಮುರ ಎಂಬಲ್ಲಿ ವಾಸಿಸುತ್ತಿದ್ದರು.ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಖ್ಯಾತನಾಮರೊಂದಿಗೆ ಅರ್ಥಗಾರಿಕೆ ಮಾಡಿದ ಅನುಭವಿಯಾಗಿದ್ದ ಶಂಭು ಶರ್ಮಾ, ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತ. ಖಳಪಾತ್ರ ಸಹಿತ…

Read More

ಅಶ್ರಫ್ ಗುಂಪು ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು

ಮಂಗಳೂರು: ಅಶ್ರಫ್ ಗುಂಪು ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಮಂಗಳೂರಿಗೆ ಹೊರವಲಯದ ಕುಡುಪು ಬಳಿ ಎಪ್ರಿಲ್ 27ರಂದು ನಡೆದ ಕೇರಳದ ವಯನಾಡಿನ ಮುಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಮನೀಶ್ ಶೆಟ್ಟಿ ಮತ್ತು ಅನಿಲ್‌ ಕುಮಾರ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.

Read More
error: Content is protected !!