ಕನ್ನಡ ರಾಜ್ಯೋತ್ಸವ ಸಮಾರಂಭವೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮತ್ತು ಸಂಘ ಸಂಸ್ಥೆಗಳಿಗೆ ಸನ್ಮಾನ ಜರಗಿತು. 18 ದೈವಸ್ಥಾನದ ಮಂಗಳೂರು ಜಿಲ್ಲಾ ಬಾಕುಡ ಸಮಾಜ ಸೇವಾ ಸಮಿತಿಗೂ ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಲಭಿಸಿತು. ಅಧ್ಯಕ್ಷರಾದ ಶ್ರೀ ದೇವಾನಂದ ಮಂಗಳೂರು ಪ್ರಶಸ್ತಿ ಪತ್ರ ಸಹಿತ ಗೌರವ ಪುರಸ್ಕಾರ ಪಡೆದರು. ಈ ಸಂಧರ್ಭದಲ್ಲಿ ನೇತಾರರಾದ ಶ್ರೀಮತಿ ಇಂದಿರಾ ನಾಗೇಶ್ ‘ ನವೀನ್. ಗಣೇಶ್. ವಿಜಯ ಪಂಡಿತ್ ಶ್ರೀಮತಿ ಸುನೀತಾ “ಮೇಘನಾ. ಮುಂತಾದವರು ಉಪಸ್ಥಿತರಿದ್ದರು.