Avatar

Rashmitha Acharya

ಅತ್ಯಾಚಾರ ಪ್ರಕರಣ : ರ‍್ಯಾಪರ್ ವೇಡನ್ ಬಂಧನ

ಕೊಚ್ಚಿ: ವೈದ್ಯೆಯೊಬ್ಬರು ನೀಡಿದ ಅತ್ಯಾಚಾರ ದೂರಿಗೆ ಸಂಬಂಧಿಸಿದಂತೆ ವೇಡನ್ ಎಂದೇ ಖ್ಯಾತಿಯಾದ ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿಯನ್ನು ಬಂಧಿಸಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನದ ವಿಚಾರಣೆ ಬಳಿಕ ಕೊಚ್ಚಿಯ ತ್ರಿಕ್ಕಾಕರ ಪೊಲೀಸರು ವೇಡನ್ ಅವರನ್ನು ಬಂಧಿಸಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಕೇರಳ ಹೈಕೋರ್ಟ್ ವೇಡನ್‌ಗೆ ಈಗಾಗಲೇ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ವೈದ್ಯಕೀಯ ಪರೀಕ್ಷೆ ಮತ್ತು ಬಂಧನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Read More

ರಾಷ್ಟ್ರ ಮಟ್ಟದ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಸೌಂದರ್ಯ ಸ್ಪರ್ಧೆ : ಎಲ್ಲಾ ವಿಭಾಗದಲ್ಲೂ ಮಂಗಳೂರಿಗರ ಪಾರಮ್ಯ

ಮಂಗಳೂರು : ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ 9ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಜರಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ವನಿತೆಯರು, ಯುವತಿಯರು ಹಾಗೂ ಮಕ್ಕಳು ಬಹುತೇಕ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಮಂಗಳೂರಿಗರ ಹೆಮ್ಮೆಗೆ ಕಾರಣವಾಗಿದೆ. ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 9ನೇ ಆವೃತ್ತಿ ಸ್ಪರ್ಧೆ ಸೆ.4 ರಿಂದ ಸೆ.6ರವರೆಗೆ ಮೂರು ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳ…

Read More

ಅಮೃತ ಪ್ರಕಾಶ ಪತ್ರಿಕೆ ವತಿಯಿಂದ 114ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆ ವತಿಯಿಂದ 114ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಶ್ರೀನಿವಾಸ ಕೆ.ಟಿ. ಅವರು ಪ್ರಥಮ ಕನ್ನಡ ಪತ್ರಿಕೆ ಬಿಡುಗಡೆಯಾದದ್ದು ಮಂಗಳೂರಿನಲ್ಲಿ, ಅನೇಕ ಕವಿಗಳ ತವರೂರು ಮಂಗಳೂರು ಆದರೆ ಇತ್ತೀಚಿಗೆ ಸಾಹಿತ್ಯದ ಕಡೆಗೆ ಯುವ ಪೀಳಿಗೆಯ ಒಲವು ಕಡಿಮೆಯಾಗಿದ್ದು, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು, ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಬೇಕು…

Read More

“ಕಾನೂನು ಬಿಗಿ ಹಿಡಿತದಿಂದ ದ.ಕ. ಜಿಲ್ಲೆಯಲ್ಲಿ ಶಾಂತಿ ಮರುಕಳಿಸಿದೆ”-ಮಂಜುನಾಥ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ತಿಂಗಳ ಹಿಂದಿನ ಕೋಮು ಸೂಕ್ಷ್ಮ ಘಟನೆಗಳೇ ಇಂದಿನ ಕಾನೂನು ಬಿಗಿತಕ್ಕೆ ಕಾರಣವಾಗಿದ್ದು ಕಠಿಣ ಕ್ರಮಗಳಿಂದ ಜಿಲ್ಲೆಯಲ್ಲಿ ಶಾಂತಿ ಮರುಕಳಿಸಿದೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಮೇ ತಿಂಗಳಲ್ಲಿ ನಡೆದ ಕೊಲೆ, ಚೂರಿ, ಇರಿತ ಪ್ರಕರಣಗಳಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಕಪ್ಪು ಚುಕ್ಕೆಯಾದರೂ, ರಾಜ್ಯ ಸರ್ಕಾರ ತಕ್ಷಣವೇ ಹೊಸ ಅಧಿಕಾರಿಗಳನ್ನು ನಿಯೋಜಿಸಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಮುಕ್ತ ಅವಕಾಶ ನೀಡಿತು….

Read More

ದಕ್ಷಿಣ ಏಷ್ಯಾದ ಮೊದಲ ಆರ್ಥೊ ರೊಬೊಟಿಕ್ಸರ್ಜರಿ ವ್ಯವಸ್ಥೆ ಯೆನೆಪೋಯದಲ್ಲಿ ಆರಂಭ

ಮಂಗಳೂರು: ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಎನಿಸಿದ ಆರ್ಥೋಪೆಡಿಕ್ ರೊಬೊಟಿಕ್ ವ್ಯವಸ್ಥೆ ‘ಸ್ಕೈವಾಕರ್’ ಸರ್ಜರಿಯನ್ನು ಮಂಗಳೂರಿನ ಯೆನಪೋಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿದೆ.ಈ ವ್ಯವಸ್ಥೆಯನ್ನು ಹೊಂದಿದ ದಕ್ಷಿಣ ಏಷ್ಯಾದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಯೆನೆಪೋಯ ಪಾತ್ರವಾಗಿದೆ. ಅಮೆರಿಕದ ಮೈಕ್ರೋಪೆಡಿರ್ಟ್ ಆರ್ಥೋಪೆಡಿಕ್ಸ್ ಇಂಕ್ ಸಹಭಾಗಿತ್ವದಲ್ಲಿ ಈ ಸರ್ಜರಿ ವ್ಯವಸ್ಥೆಯನ್ನು ಯೆನಪೋಯದಲ್ಲಿ ಆರಂಭಿಸಲಾಗಿದೆ. ಅದರೊಂದಿಗೆ ರೋಗಿಗಳ ಆರೈಕೆಗೆ ಜಾಗತಿಕ ದರ್ಜೆಯ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಆಸ್ಪತ್ರೆಯು ಇನ್ನೊಂದು ಗರಿಯನ್ನು ತನ್ನ ಮುಡಿಗೆ ಏರಿಸಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯಕೀಯ…

Read More

ಓಲೈಕೆ ರಾಜಕಾರಣವೇ ಕಾಂಗ್ರೆಸ್ಸಿನ ಬ್ರದರ್ಸ್’ಗಳ ಅಟ್ಟಹಾಸಕ್ಕೆ ಕಾರಣ:- ಶಾಸಕ ಕಾಮತ್

ಮಂಡ್ಯದ ಮದ್ದೂರಿನ ಗಣೇಶ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ನಡೆದಿದ್ದು ಇದು ರಾಜ್ಯ ಸರ್ಕಾರದ ಒಂದು ಕೋಮಿನ ತುಷ್ಟೀಕರಣದ ಪರಮಾವಧಿ ಹಾಗೂ ಹಿಂದೂ ವಿರೋಧಿ ನೀತಿಯ ಫಲವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ಸಹ ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದೆ. ಈ ಕೃತ್ಯವನ್ನು ಪ್ರತಿಭಟಿಸಿದ ಹಿಂದೂಗಳ ಮೇಲೆಯೇ ಲಾಠಿಚಾರ್ಜ್ ನಡೆಸಿ ಹಿಂದೂಗಳನ್ನು ಸದೆಬಡಿಯುವ ಹುನ್ನಾರ ನಡೆಸಿರುವ ಕಾಂಗ್ರೆಸ್…

Read More

ಜಿಲ್ಲಾ ಮಟ್ಟದ ದಸರಾ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ಪ್ರಶಸ್ತಿ

ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಹ್ಯಾಂಡ್ ಬಾಲ್ ಕ್ರೀಡಾ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹ್ಯಾಂಡ್ ಬಾಲ್ ಅಸೋಶಿಯನ್ ನ ಪುರುಷ ಮತ್ತು ಮಹಿಳಾ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಎರಡು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ದಕ್ಷಿಣಕನ್ನಡ ಜಿಲ್ಲೆಯ ಹ್ಯಾಂಡ್ ಬಾಲ್ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ಹ್ಯಾಂಡ್ ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಆರ್…

Read More

ಮಂಜೇಶ್ವರ : ಕುಂಬಳೆ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ನಿರ್ಮಿಸುತ್ತಿರುವ ಟೋಲ್‌ಬೂತ್ ವಿರುದ್ಧ ಆಕ್ಷನ್‌ ಸಮಿತಿಯ ಬೃಹತ್ ಜನ ಆಂದೋಲನ ಮೆರವಣಿಗೆಯಲ್ಲಿ ಸಂಘರ್ಷ

ಮಂಜೇಶ್ವರ : ಕುಂಬಳೆ ಆರಿಕ್ಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗ ನಿರ್ಮಿಸುತ್ತಿರುವ ಟೋಲ್‌ಬೂತ್ ವಿರುದ್ಧ ಆಕ್ಷನ್‌ ಸಮಿತಿಯ ಬೃಹತ್ ಜನಆಂದೋಲನ ಮೆರವಣಿಗೆಯಲ್ಲಿ ಸಂಘರ್ಷ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಕುಂಬಳೆ ಜಂಕ್ಷನ್ ನಿಂದ ಆರಂಭಗೊಂಡು ಟೋಲ್‌ಗೇಟ್ ಬಳಿಗೆ ತಲುಪುತಿದ್ದಂತೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಪೊಲೀಸರು ಜಲಪೀರಂಗಿ ಪ್ರಯೋಗಿಸಿದರು. ಉದ್ರಿಕ್ತರಾದ ಪ್ರತಿಭಟನಾ ನಿರತರು ಹೆದ್ದಾರಿ ಪ್ರಾಧಿಕಾರದ ಅನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.ಸಾವಿರಾರು ಜನರು ಪಾಲ್ಗೊಂಡ…

Read More

ಮಚ್ಚಂಪಾಡಿಯಲ್ಲಿ, ಹೈಟೆನ್ಷನ್ ಲೈನ್ ಅಪಾಯ; ಸ್ಥಳೀಯರು ಮತ್ತು ಪಕ್ಷಿಗಳ ಪ್ರಾಣಕ್ಕೆ ಬೆದರಿಕೆ

ಮಂಜೇಶ್ವರ: ಮಚ್ಚಂಪಾಡಿ ಪುಚ್ಚತ್ತ್ ವಯಲ್ ಜುಮಾ ಮಸೀದಿ ರಸ್ತೆ ಸಮೀಪ ಹಾದುಹೋಗುವ ಹೈಟೆನ್ಷನ್ (ಎಚ್.ಟಿ.) ವಿದ್ಯುತ್ ತಂತಿಗಳು ಸ್ಥಳೀಯರ ಸುರಕ್ಷತೆಗೆ ದೊಡ್ಡ ಅಪಾಯವಾಗಿವೆ. ಕಿರಿದಾದ ರಸ್ತೆಯ ಅಂಚಿನಲ್ಲಿರುವ ಸಾಮಾನ್ಯ ಮನೆಗಳ ವಿದ್ಯುತ್ ಲೈನ್‌ಗಳ ಮೇಲೆ ಈ ಅಪಾಯಕಾರಿ ಹೈಟೆನ್ಷನ್ ಲೈನ್ ಹಾದುಹೋಗುತ್ತಿದೆ. ಈ ಲೈನ್‌ಗಳು ತೆಂಗಿನ ಮರಗಳು, ಅಡಿಕೆ ಮರಗಳು ಮತ್ತು ಮನೆಗಳಿಗೆ ತೀರಾ ಹತ್ತಿರದಲ್ಲಿವೆ. ಬಲವಾದ ಗಾಳಿ ಮತ್ತು ಮಳೆಯ ಸಮಯದಲ್ಲಿ ತೆಂಗಿನ ಗರಿಗಳು ಲೈನ್‌ಗೆ ತಗುಲಿ ಬೆಂಕಿ ಕಿಡಿಗಳು ಹೊತ್ತಿಕೊಳ್ಳುತ್ತವೆ. ಇಂತಹ ಘಟನೆಗಳು ದೊಡ್ಡ…

Read More

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ:

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಎಂ.ಸಿ ಅವರು ನಿರ್ವಹಿಸಿದರು. ಸ್ಪರ್ಧೆಯಲ್ಲಿ ಲಿಂಗಪ್ಪ ಕುಬಣೂರು ,ದಯಾನಂದ ಸೋಂಕಾಲ್,ಕೃಷ್ಣ ಕೆಪಿ ಸೋಂಕಾಲ್ ತೀರ್ಪುಗಾರರಾಗಿ ಸಹಕರಿಸಿದರು. ಆ ಬಳಿಕ ಹರೀಶ್ ಎಂ.ಜಿ ,ರಾಮಚಂದ್ರ ಎಂ ,ವೇದಿಕೆ ಅಧ್ಯಕ್ಷರಾದ ಕಿಶೋರ್ ಕುಮಾರ್ ಅವರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಮಿತಾ ಸುರೇಶ್ ನಿರೂಪಿಸಿದರು.

Read More
error: Content is protected !!