Avatar

Rashmitha Acharya

ರಷ್ಯಾ ಅಧ್ಯಕ್ಷ ಪುಟಿನ್ಗೆ ಪ್ರಧಾನಿಯವರು ಭಗವದ್ಗೀತೆ ಉಡುಗೊರೆ ನೀಡಿದ ವಿಚಾರಕ್ಕೆ ಉಡುಪಿ ಪುತ್ತಿಗೆ ಮಠದ ಸ್ವಾಮೀಜಿ ಸಂತಸ… !

ಉಡುಪಿ: ರಷ್ಯಾ ಅಧ್ಯಕ್ಷರಿಗೆ ಪ್ರಧಾನಿಯವರು ಭಗವದ್ಗೀತೆ ಉಡುಗೊರೆ ನೀಡಿದ ವಿಚಾರಕ್ಕೆ ಉಡುಪಿ ಪುತ್ತಿಗೆ ಮಠದ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ರಷ್ಯಾ ಅಧ್ಯಕ್ಷರಿಗೆ ಪ್ರಧಾನಿ ಭಗವದ್ಗೀತೆ ಕೊಟ್ಟಿದ್ದಾರೆ, ರಷ್ಯನ್ ಭಾಷೆಯಲ್ಲಿ ಬರೆದ ಭಗವದ್ಗೀತೆ ಕೊಟ್ಟಿರುವುದು ಸಂತೋಷ ನೀಡಿದೆ. ಇದೇ ಕಾರಣಕ್ಕೆ ಅವರನ್ನು ಭಾರತ ಭಾಗ್ಯವಿದಾತ ಎಂದು ನಾವು ಕರೆದಿದ್ದೇವೆ ಎಂದರು. ಪ್ರಧಾನಿ ಮೋದಿಯವರಿಗೆ ವಿಶೇಷ ಅಭಿನಂದನೆಗಳು, ಎಲ್ಲಿಗೆ ಹೋದರೂ ಭಗವದ್ಗೀತೆಯನ್ನೇ ಅವರು ಕೊಡುಗೆಯಾಗಿ…

Read More

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಭೇಟಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ …. !

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಭೇಟಿಗೆ ಎಂಎಲ್ಸಿ ಕಿಶೋರ್ ಕುಮಾರ್ ಪತ್ನಿಗೆ ಅವಕಾಶ ನೀಡಿರುವುದನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಮರ್ಥಿಸಿಕೊಂಡಿದ್ದಾರೆ. ಅವರೇನು ಕ್ರಿಮಿನಲ್ ಅಲ್ಲ ಅವರು ಬಿಜೆಪಿ ಪಕ್ಷದ ಸದಸ್ಯೆ ಎಂದು ಹೇಳಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ನೀಡಬೇಕು ಅನ್ನೋ ವಿಚಾರದ ಪರವಾಗಿ ನಾನೂ‌ ಇದ್ದೇನೆ. ಸಾಮಾನ್ಯ ಕಾರ್ಯಕರ್ತನಿಗೆ ಈ ಅವಕಾಶ ಕೊಡಬೇಕು ಅನ್ನುವವರ ವಾದ ಸರಿಯಿದೆ. ಆದರೆ ಕಿಶೋರ್ ಕುಮಾರ್ ಅವರ ಪತ್ನಿಯ ವಿಚಾರವಾಗಿ ನಡೆಯುತ್ತಿರುವ ವಿವಾದ…

Read More

ಡಿಸೆಂಬರ್ 8: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿಪಿಐಎಂನಿಂದ ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ ಬೃಹತ್ ಹೋರಾಟ… !

ಮಂಗಳೂರು: ಜಿಲ್ಲೆಯ ಜನ ಸಾಮಾನ್ಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ, ಜಿಲ್ಲೆಯ ಜನರ ಬದುಕಿನ ಮೌಲ್ಯಗಳ ಬಲವರ್ಧನೆಗಾಗಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಾ. 08-12-2025ರಂದು “ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ” ಎಂಬ ಘೋಷಣೆ ಅಡಿಯಲ್ಲಿ ಬೃಹತ್ ಹೋರಾಟ ರೂಪಿಸಲಾಗಿದ್ದು ಈ ಬೃಹತ್ ಹೋರಾಟದಲ್ಲಿ ಮಂಗಳೂರು ನಗರದ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ….

Read More

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ಡಿಸೆಂಬರ್ 7 ರಂದು ವಿಶೇಷ ಚೇತನ ಮಕ್ಕಳೊಂದಿಗೆ ‘ಸಾಂತ್ವಾನ ಸಂಚಾರ’:

ಮಂಗಳೂರು:ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಸರಾಗಿರುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಸಂಸ್ಥೆ ಈ ಬಾರಿ ವಿಶೇಷ ಚೇತನ ಮಕ್ಕಳಿಗಾಗಿ ಹೃದಯಸ್ಪರ್ಶಿ ಕಾರ್ಯಕ್ರಮವನ್ನು ಆಯೋಜಿಸಿದೆ. ‘ಸಾಂತಾನ ಸಂಚಾರ 3.0 – A Day with Special Kids’ ಎಂಬ ಶೀರ್ಷಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಡಿಸೆಂಬರ್ 7 ರಂದು ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಶರೀಫ್ ಅಬ್ಬಾಸ್ ವಳಾಲ್ ತಿಳಿಸಿದರು. ಅವರು ಪಂಪ್‌ ವೆಲ್ ನ ಖಾಸಗಿ ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ…

Read More

2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರು ಆಯ್ಕೆ …. !

ಮಂಗಳೂರು: ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರ ಸಂಸ್ಥೆಯು 2025-26 ರ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷ ಕಲಾವಿದ ಪುತ್ತಿಗೆ ಕುಮಾರ ಗೌಡರನ್ನು ಆಯ್ಕೆ ಮಾಡಿದೆ. ಇದರ ಭಾಗವಾಗಿ ಪ್ರಶಸ್ತಿ ಸಮಾರಂಭವು ಡಿಸೆಂಬರ್ ೭ ರಂದು ಸಂಜೆ 4.00 ರಿಂದ ಮಂಗಳೂರಿನ ರಾಮಕೃಷ್ಣ ಆಶ್ರಮದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯ ಸಂಚಾಲಕರಾದ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೂಡಬಿದಿರೆಯ ಜನತೆಯಿಂದ ಪ್ರೀತಿಯಿಂದ…

Read More

ಡಿ 6 ರಂದು ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ…. !

ಮಂಗಳೂರು: ಲಯನ್ಸ್‌ ಜಿಲ್ಲೆ 317ಡಿ ಇದರ ಪ್ರಾಂತ್ಯ 4 ರ ಪ್ರಾಂತೀಯ ಸಮ್ಮೇಳನ ಡಿ 6 ರಂದು ನಗರದ ಬಿಜೈ ಚರ್ಚ್ ಹಾಲ್ನಲ್ಲಿ ಸಂಜೆ 3.30 ರ ನಂತರ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷರಾದ ವಿದ್ಯಾ ಕಾಮತ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಸಭೆಯಲ್ಲಿ ಪ್ರಾಂತೀಯ ಸಮ್ಮೇಳನದ ಅಧ್ಯಕ್ಷರು ಅಧ್ಯಕ್ಷತೆ ಯನ್ನು ವಹಿಸಿಕೊಳ್ಳಲಿದ್ದು, ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮತ್ತು ಮುಖ್ಯ ಅತಿಥಿಗಳಾಗಿ ಪೂರ್ವ ರಾಜ್ಯಪಾಲರು ಮತ್ತು ಗ್ಯಾಲೆಂಟರಿ…

Read More

ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಹಬ್ಬ ಆರಂಭ

ಮಂಜೇಶ್ವರ: ಐತಿಹಾಸಿಕ ಬಾಯಾರ್ ಜಾರಂ ಮಕ್ಕಂ ಉರೂಸ್ ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ಉರೂಸ್ ಸಮಿತಿ,ಗೌರವಾನ್ವಿತ. ಮೋನು ಹಾಜಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ್ಯ. ಸೈಯದ್ ಶಮೀಮ್ ತಂಗಳ್ ಧ್ವಜಾರೋಹಣ ನೆರವೇರಿಸಿದರು. ಜಮಾತ್ ಸಮಿತಿ ಅಧ್ಯಕ್ಷರು. ಗೌರವಾನ್ವಿತ. ಅಲಿ ಹಾಜಿ, ಕಾರ್ಯದರ್ಶಿ.. ಮುಹಮ್ಮದ್ ಹಾಜಿ, ಕಾದರ್ ಹಾಜಿ, ಜಮಾತ್ ಮುತಾರಿಸ್.ಶುಹೈಬ್ ಇರ್ಫಾನಿ,ಆದಂ ದಾರಿಮಿ ರಝಾಕ್ ಮಿಸ್ಬಾಹಿ, ಸಿರಾಜುದ್ದೀನ್ ಫೈಝಿ, ಚೇರಲ್ ಮಜೀದ್ ದಾರಿಮಿ, ರಝಾಕ್ ಇರ್ಫಾನಿ ಮತ್ತಿತರರು ಉಪಸ್ಥಿತರಿದ್ದರು.ಡಿಸೆಂಬರ್ 4 ರಿಂದ 15 ರವರೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಸಿದ್ಧ ಭಾಷಣಕಾರರು…

Read More

574 ಮೆಟ್ಟಿಲುಗಳಲ್ಲಿ ಭರತ ನಾಟ್ಯ ಮಾಡುತ್ತ ಅಂಜನಾದ್ರಿ ಬೆಟ್ಟ ಏರಿದ ಕಲಾವಿದೆ!

ಗಂಗಾವತಿ,:  ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲಾವಿದೆ ಆರ್. ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಕಲೆ ಪ್ರದರ್ಶನ ನೀಡಿದ್ದಾರೆ. ಹನುಮದ್ ವ್ರತಾಚರಣೆ ಸಂದರ್ಭದಲ್ಲಿ, ಪಾಲಕರ ಮಾರ್ಗದರ್ಶನದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ನಡೆಸಿ, ಅವರು 8 ನಿಮಿಷ 59 ಸೆಕೆಂಡಿನಲ್ಲಿ ಶಿಖರವನ್ನು ದಾಟಿದ್ದಾರೆ. ಬೆಟ್ಟದ ತುದಿಯ ಆವರಣದಲ್ಲಿ ಭರತನಾಟ್ಯ ಕಲೆ ಪ್ರದರ್ಶಿಸಿ, ದೇವರ ದರ್ಶನ ಪಡೆದ ಆರ್. ಹರ್ಷಿತಾರನ್ನು ನಂತರ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿಲಾಯಿತು. ಹನುಮಮಾಲಾ ವಿಸರ್ಜನೆ ಹಾಗೂ ಹನುಮದ್ ವ್ರತಾಚರಣೆಯ ಸಂದರ್ಭದಲ್ಲಿ,…

Read More

ರೇಬಿಸ್ ರೋಗ ಹೇಗೆ ಬರುತ್ತದೆ? ರೇಬೀಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ರೇಬೀಸ್ (ಹುಚ್ಚು ನಾಯಿ ರೋಗ) ಎಂಬುದು ವೈರಸ್‌ನಿಂದ ಉಂಟಾಗುವ ಗಂಭೀರವಾದ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ ಹರಡುತ್ತದೆ, ಮುಖ್ಯವಾಗಿ ಕಚ್ಚುವಿಕೆಯಿಂದ. ಲಕ್ಷಣಗಳು ಆರಂಭವಾದ ನಂತರ ಈ ಕಾಯಿಲೆ ಮಾರಣಾಂತಿಕವಾಗುತ್ತದೆ, ಆದರೆ ಸೋಂಕಿತ ಪ್ರಾಣಿಯಿಂದ ಕಚ್ಚಿಸಿಕೊಂಡ ನಂತರ ತಕ್ಷಣವೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಇದನ್ನು ತಡೆಯಬಹುದು. ರೇಬೀಸ್ ಲಕ್ಷಣಗಳು ಆರಂಭಿಕ ಲಕ್ಷಣಗಳು: : ಜ್ವರ, ತಲೆನೋವು, ಕಚ್ಚಿದ ಸ್ಥಳದಲ್ಲಿ ಜುಮ್ಮೆನಿಸುವಿಕೆ. ಮುಂದುವರಿದ ಲಕ್ಷಣಗಳು: ರೇಬೀಸ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

Read More

ಉಡುಪಿ: ಮನೆಗೆ ನುಗ್ಗಿ 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಕಳ್ಳನ ಬಂಧನ

ಉಡುಪಿ: ಉಡುಪಿ ಚಿಟ್ಪಾಡಿಯ ಶಾರದಾಂಬ ದೇವಾಸ್ಥಾನ ಗೋಪುರ ಬಳಿಯ ಮನೆಯೊಂದರಲ್ಲಿ ನ.30ರಂದು 65.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುಕ್ಕೆಹಳ್ಳಿ ಗ್ರಾಮದ ಕುಕ್ಕಿಕಟ್ಟೆ ನಿವಾಸಿ ಸುಕೇಶ ನಾಯ್ಕ್ (37) ಬಂಧಿತ ಆರೋಪಿ.ನ.30ರಂದು ಚಿಟ್ಪಾಡಿಯ ಶೈಲಾ ವಿಲ್ಲೆಲ್ ಮೀನಾ ಅವರ ಮನೆಗೆ ನುಗ್ಗಿದ ಯಾರೋ ಕಳ್ಳರು ಸುಮಾರು 65.79 ಲಕ್ಷ ಮೌಲ್ಯದ ಸೊತ್ತು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಉಡುಪಿ…

Read More
error: Content is protected !!