ನೆನಪಿನ ಶಕ್ತಿಯೊಂದೇ ಅಲ್ಲ, ಆರೋಗ್ಯ ವೃದ್ಧಿಗೂ ವರದಾನ ಬಾದಾಮಿ
ನಮ್ಮ ದೇಹವನ್ನು ಬಲವಾಗಿರಿಸಿಕೊಳ್ಳಲು ಉತ್ತಮವಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಹೀಗಾಗಿ ತಜ್ಞರು ಹಸಿರು ತರಕಾರಿಗಳು, ಹಣ್ಣುಗಳು, ಮೊಟ್ಟೆಗಳು ಮತ್ತು ಮಾಂಸವನ್ನು ತಿನ್ನಲು ಶಿಫಾರಸು ಮಾಡುತ್ತಾರೆ.ವಿಶೇಷವಾಗಿ ಚಳಿಗಾಲದಲ್ಲಿ ಬಾದಾಮಿಯನ್ನು ತಿನ್ನಲು ಒತ್ತು ನೀಡಲಾಗುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿವೆ. ಆದರೆ, ಬಾದಾಮಿಯ ಅಸಲಿ ಪ್ರಯೋಜನಗಳು ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಲಭ್ಯವಿರುತ್ತವೆ. ತಜ್ಞರ ಪ್ರಕಾರ, ನೀವು ಬಾದಾಮಿಯನ್ನು ಹಸಿಯಾಗಿ ತಿನ್ನುವ ಬದಲು ನೆನೆಸಿ ತಿನ್ನುವುದರಿಂದ ಅದರ…
ಅಭಿವೃದ್ಧಿ ಗೆ ಬಿಜೆಪಿ ಗೆಲುವು ಅವಶ್ಯಕ -ಸಲೀಲ್ ಮಾಸ್ಟರ್
ಮಿಯಪದವು : ಬಿಜೆಪಿ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಯ ಹರಿಕಾರ ನರೇಂದ್ರ ಮೋದಿ, ಮೋದಿಯವರಿಗೆ ಶಕ್ತಿ ತುಂಬಲು ಕೇರಳದ ಗ್ರಾಮ ಗಳಲ್ಲಿ ತಾವರೆ ಅರಳಬೇಕಿದೆ ಎಂದು ಮುಸ್ಲಿಂ ಲೀಗ್ ಮಾಜಿ ನೇತಾರ ಇತ್ತೀಚಿಗೆ ಮೋದಿ ಅಭಿಮಾನಿಯಾಗಿ ಬಿಜೆಪಿ ಸೇರ್ಪಡೆ ಗೊಂಡ ಸಲೀಲ್ ಮಾಸ್ಟರ್ ಹೇಳಿದರು. ಮೀoಜ ಬಿಜೆಪಿ ಕಾರ್ಯಕರ್ತರ ಸಮಾವೇಶ ದಲ್ಲಿ ಅವರು ಅತಿಥಿ ಯಾಗಿ ಭಾಗವಹಿಸಿದರು. ಕಾಂಗ್ರೆಸ್ ಎಂಬುವುದು ಕಾಸರಗೋಡು ಜಿಲ್ಲೆಯಲ್ಲಿ ನರಸತ್ತ ಪಕ್ಷ ಮುಸ್ಲಿಂ ಲೀಗ್ ನ ಬೆದರಿಕೆಗಳಿಗೆ ಬೆದರಿ ಕಾಂಗ್ರೆಸ್ ಇಂದು ನಾಶವಾಗಿದೆ.ಎಡರಂಗ…
ಶಬರಿಮಲೆ ಲೂಟಿ ಮಾಡಿದ ಪಕ್ಷಕ್ಕೆ ವೋಟ್ ನೀಡಬೇಡಿ -ಕಿಶೋರ್ ಕುಮಾರ್
ಮಿಯಪದವು : ಕೇರಳ ದಲ್ಲಿ ಎಡರಂಗ ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಪಕ್ಷಗಳಿಗೆ ಪಕ್ಷ ತತ್ವ ಸಿದ್ದಂತಗಳಿಲ್ಲ ಅವರದ್ದು ಅಧಿಕಾರಕಾಗಿ ಅವಕಾಶ ರಾಜಕಾರಣ. ಸ್ಥಳೀಯಡಳಿತ ಚುನಾವಣೆ ಯಲ್ಲಿ ಗ್ರಾಮ ಗ್ರಾಮಗಲ್ಲಿ ಬಿಜೆಪಿ ಯನ್ನು ಗೆಲ್ಲಿಸಿ ಆಡಳಿತ ಬಿಜೆಪಿ ಗೆ ನೀಡಬೇಕು.ಶಬರಿಮಲೆ ಯಲ್ಲಿ ಲೂಟಿ ಮಾಡಿ ಜೈಲು ಸೇರಿರುವ ಎಡರಂಗಕ್ಕೆ ಅಸ್ತಿಕ ಬಂಧುಗಳು ವೋಟ್ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯ ಬಿಜೆಪಿ ನೇತಾರ ಕಿಶೋರ್ ಕುಮಾರ್ ಹೇಳಿದರು.ಮೀoಜ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆ…
ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ -ಮಂಜೇಶ್ವರ ಪೋಲೀಸರ ವಶ
ಮಂಜೇಶ್ವರ : ಸ್ಥಳೀಯಾಡಳಿತ ಚುನಾವಣೆ ಹಾಗೂ ಕ್ರಿಸ್ಮಸ್, ಹೊಸ ವರ್ಷ ಸ್ಪೆಷಲ್ ಡ್ರೈವ್ ನಲ್ಲಿ ನಡೆದ ವಾಹನ ತಪಾಸಣೆಯ ಭಾಗವಾಗಿ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ತಲಪಾಡಿ ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿನಿಂದ ದಾಖಲೆಗಳಿಲ್ಲದೆ ಸಾಗಿಸಲಾಗುತಿದ್ದ 67,50000 ಲಕ್ಷ ಹವಾಲ ಹಣ ವಶ ಪಡಿಸಲಾಗಿದೆ. ಈ ಸಂಬಂಧ ಕಣ್ಣೂರು ತಳಿಪರಂಬ ನಿವಾಸಿ ಸಮೀರ್ ಪಿ ಎಂಬಾತನನ್ನು ವಶಕ್ಕೆ ತೆಗೆಯಲಾಗಿದೆ.ಬಳಿಕ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕಾಸರಗೋಡಿನಲ್ಲಿ ಅಭಿವೃದ್ಧಿ ವಂಚನೆಗೆ ಎಡ ಮತ್ತು ಬಲ ಪಕ್ಷ ಕಾರಣ – ನಳಿನ್ ಕುಮಾರ್ ಕಟೀಲ್
ಪೈವಳಿಕೆ: ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಅಭಿವೃದ್ಧಿಯಲ್ಲಿ ಅಗಾಧ ಅಂತರವಿದೆ, ಒಂದೇ ರೀತಿಯ ಭೌಗೋಳಿಕತೆ ಮತ್ತು ಸಮಾನ ಸಂಪನ್ಮೂಲಗಳನ್ನು ಹೊಂದಿರುವ ಗಡಿ ಜಿಲ್ಲೆಗಳು, ಮತ್ತು ಕಾಸರಗೋಡು ಜಿಲ್ಲೆಯ ಹಿಂದುಳಿಯುವಿಕೆಗೆ ಎಡ ಮತ್ತು ಬಲ ರಂಗಗಳೇ ಕಾರಣ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು. ಕೆ.ಟಿ. ಜಯಕೃಷ್ಣನ್ ಮಾಸ್ಟರ್ ಅವರಂತಹ ತ್ಯಾಗಗಳು ಯಾವಾಗಲೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತವೆ ಎಂದು ಅವರು ಹೇಳಿದರು. ಮಾಜಿ ಬಿಜೆಪಿ ಜಿಲ್ಲಾ…
ಅಕ್ರಮ ದನ ಸಾಗಾಟದ ಸುಳಿವು ನೀಡಿದ ಕೆಟ್ಟು ಹೋದ ಕಾರು!
ಪುತ್ತೂರು: ಕಾರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಿದ ಆರೋಪದಡಿಯಲ್ಲಿ ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಬಂಧಿತರನ್ನು ಆಶಿಕ್ ಪಾಷಾ ಹಾಗೂ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ. ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುವ ವೇಳೆ ಈ ವಾಹನ ರಸ್ತೆಯಲ್ಲಿ ಕೆಟ್ಟುಹೋಗಿತ್ತು. ಹೀಗಾಗಿ ವಾಹನದಲ್ಲಿದ್ದ ಗೋವುಗಳನ್ನು ಪುತ್ತೂರು, ನರಿಮೊಗರು ಎಂಬಲ್ಲಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದು, ಅವುಗಳನ್ನು ದೂರುದಾರರು ಸ್ಥಳೀಯರ ಸಹಕಾರದಿಂದ ಪುತ್ತೂರು ನಗರ ಠಾಣೆಗೆ ಹಸ್ತಾಂತರಿಸಿದ್ದರು. ಗೋವುಗಳನ್ನು ಯಾರೋ ಕಳ್ಳರು ಕದ್ದು ತಂದಿರಬಹುದೆಂದು ಸಂಶಯವಿದ್ದು, ಕೃತ್ಯವೆಸಗಿದ…
ಕಾರು ಮತ್ತು ಆಟೋ ರಿಕ್ಷಾ ಮುಖಾಮುಖಿ , ಆಟೋ ಚಾಲಕನಿಗೆ ಗಂಭೀರ ಗಾಯ
ಉಡುಪಿ: ಆಟೋ ರಿಕ್ಷಾ ಮತ್ತು ಕಾರು ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾಪು ತಾಲೂಕಿನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಉಚ್ಚಿಲ ನಿವಾಸಿ ರಫೀಕ್ ಗಾಯಗೊಂಡ ಚಾಲಕ. ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ನಜ್ಜುಗುಜ್ಜಾಗಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ…
ಅಯ್ಯಪ್ಪ ಭಕ್ತವೃಂದ ಸಮಿತಿ ರಚನೆ
ವರ್ಕಾಡಿ:ತಾರೀಕು ೦3/೦1/2೦26ರಂದು ಶನಿವಾರ ಶ್ರೀ ಮಹಾವಿಷ್ಣು ದೇವಸ್ಥಾನ ದೇವಂದ ಪಡ್ಪು ಇದರ ವಠಾರದಲ್ಲಿ ಅಯ್ಯಪ್ಪ ಭಕ್ತವೃಂದ ದೇವಂದ ಪಡ್ಪು ಇದರ ಆಶ್ರಯದಲ್ಲಿ ಅಯ್ಯಪ್ಪ ದೀಪೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಅಯ್ಯಪ್ಪ ಭಕ್ತಾಭಿಮಾನಿಗಳು ತೀರ್ಮಾನಿಸಿರುತ್ತಾರೆ. ಇದರ ಪೂರ್ವಭಾವಿಯಾಗಿ ಅಯ್ಯಪ್ಪ ಭಕ್ತವೃಂದ ಸಮಿತಿ ಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು ,ಗೌರವ ಸಲಹೆಗಾರರಾಗಿ ಮೋಹನದಾಸ್ ಭಂಡಾರಿ ನೆತ್ತಿಲ ಬಾಳಿಕೆ ,ಸಂಜೀವ ಶೆಟ್ಟಿ ಮಾಡ, ಮೋಹನ್ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಧನಂಜಯ ಪೂಜಾರಿ ನೆತ್ತಿಲಪದವು, ಜಗದೀಶ್ ಸುಳ್ಯ, ಉಪಾಧ್ಯಕ್ಷರಾಗಿ ಮಾಧವ…
ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಪ್ರಥಮ ವಾರ್ಷಿಕ – ಮಧೂರಿನಲ್ಲಿ ಸಂಭ್ರಮಾಚರಣೆ
ಮಂಜೇಶ್ವರ: ಸುಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇಶಪ್ರೇಮ, ದೇವಭಕ್ತಿ ,ಸನಾತನ ಧರ್ಮ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಶ್ರೀ ಭಾರತಾಂಬ ಭಜನಾ ತಂಡ ಮಂಜೇಶ್ವರ ಇದರ ಪ್ರಥಮ ವಾರ್ಷಿಕವನ್ನು ಭಕ್ತಿಪೂರ್ವಕವಾಗಿ ಶ್ರದ್ಧ ಭಕ್ತಿಯಿಂದ ಹರಿನಾಮ ಸಂಕೀರ್ತನೆಯೊಂದಿಗೆ ಆಚರಿಸಲಾಯಿತು.ತಂಡದ ಸ್ಥಾಪಕರಾದ ಧಾರ್ಮಿಕ ,ಸಾಮಾಜಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ರವರ ಮುಂದಾಳುತ್ವದಲ್ಲಿ ಹಾಗು ತಂಡದ ಪೋಷಕರಾದ ಶ್ರೀ ಪ್ರಶಾಂತ್ ಭಟ್ ಚಕ್ರತೀರ್ಥ,ಖ್ಯಾತ ವಕೀಲರಾದ ಶ್ರೀ ರಾಮ್ ಪ್ರಸಾದ್ ಮಂಗಳೂರು,ಶ್ರೀ ಯತೀಶ್ ಕುಂಜತ್ತೂರು ,ಶ್ರೀ ಶ್ರೀಕಾಂತ್ ಮುಂಬೈ ಇವರ ಸಹಕಾರದೊಂದಿಗೆ…