ಪುದೀನ ಚಿಕನ್ ಕರಿ -PUDINA CHIKEN CURRY

ಬೇಕಾಗುವ ಪದಾರ್ಥಗಳು…

  • ಚಿಕನ್- ಅರ್ಧ ಕೆಜಿ
  • ಪುದೀನ- 1 ಬಟ್ಟಲು
  • ಈರುಳ್ಳಿ- 1
  • ಅರಿಶಿನ ಪುಡಿ- ಸ್ವಲ್ಪ
  • ಗರಂ ಮಸಾಲ ಪುಡಿ- ಅರ್ಧ ಚಮಚ
  • ಕಾಳು ಮೆಣಸಿನ ಪುಡಿ- ಕಾಲು ಚಮಚ
  • ಕರಿಬೇವು- ಸ್ವಲ್ಪ
  • ಚಕ್ರಮೊಗ್ಗು- 1
  • ದಾಲ್ಚಿನ್ನಿ ಅಥವಾ ಚಕ್ಕೆ – ಸ್ವಲ್ಪ
  • ಲವಂಗ – 5
  • ಏಲಕ್ಕಿ- 2
  • ಶುಂಠಿ- ಸ್ವಲ್ಪ
  • ಬೆಳ್ಳುಳ್ಳಿ- ಸ್ವಲ್ಪ
  • ಹಸಿ ಮೆಣಸಿನಕಾಯಿ- 5
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಅಡುಗೆ ಎಣ್ಣೆ – ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

  • ಒಂದು ಮಿಕ್ಸಿ ಜಾರ್‌’ಗೆ ಪುದೀನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಟ್ಟುಕೊಲ್ಳಿ.
  • ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಕಾಳು ಮೆಣಸು, ಪಲಾವ್ ಎಲೆ, ಚಕ್ಕೆ, ಚಕ್ರಮೊಗ್ಗು, ಹಾಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ.
  • ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿದ ಬಳಿಕ ಚೆನ್ನಾಗಿ ತೊಳದಿಟ್ಟುಕೊಂಡ ಚಿಕನ್ ಫೀಸ್‌ಗಳನ್ನು ಹಾಕಿ. ಬಳಿಕ ಅರಶಿಣ ಪುಡಿ ಹಾಕಿ ಮಿಶ್ರಣ ಮಾಡಿ.
  • ನಂತರ 5 ನಿಮಿಷ ಫ್ರೈ ಮಾಡಿಕೊಳ್ಳಬೇಕು. 5 ರಿಂದ 6 ನಿಮಿಷದ ಬಳಿಕ ಇದಕ್ಕೆ ಮಿಕ್ಸಿ ಜಾರ್‌ನಲ್ಲಿ ರುಬ್ಬಿದ್ದ ಮಸಾಲೆಯನ್ನು ಹಾಕಿ.
  • ಬಳಿಕ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ. ಈಗ ಇದಕ್ಕೆ ಕಾಳು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿ.
  • ಮುಚ್ಚಳ ಮುಚ್ಚಿ 10 ನಿಮಿಷ ಬೇಯಲು ಬಿಡಿ. ಆಗಾಗ ತಳ ಹಿಡಿಯದಂತೆ ಕೈಯಾಡಿಸುತ್ತಿರಿ. ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಇದೀಗ ರುಚಿಕರವಾದ ಪುದೀನಾ ಚಿಕನ್ ಗ್ರೇವಿ ಸವಿಯಲು ಸಿದ್ಧ.
SHARE
Loading spinner

Leave a Reply

Your email address will not be published. Required fields are marked *

error: Content is protected !!