Avatar

Shramitha bejja

ಪುತ್ತೂರಿನಲ್ಲಿ ಸಿದ್ದರಾಮಯ್ಯ ಪಾಲ್ಗೊಂಡ ಅಶೋಕ ಜನಮನ ಕಾರ್ಯಕ್ರಮದಲ್ಲಿ ನೂಕು ನುಗ್ಗಲು,11ಕ್ಕೂ ಹೆಚ್ಚು ಮಂದಿ ಅಸ್ವಸ್ಥ .

ಪುತ್ತೂರು : ಪುತ್ತೂರಿನಲ್ಲಿ ಅಶೋಕ್ ರೈ ನೇತೃತ್ವದಲ್ಲಿ ಅಶೋಕ ಜನಮನ ಕಾರ್ಯಕ್ರಮ ನಡೆದಿತ್ತು .ಈ ಕಾರ್ಯಕ್ರಮಕ್ಕೆ ಸಿ.ಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು, ಉಂಟಾಗಿದ್ದು 11ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. 11ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು ಇದರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ಕ್ರೀಡಾಂಗಣದ ಸಾಮರ್ಥ್ಯಕ್ಕಿಂದ ಹೆಚ್ಚು ಜನ ಭಾಗಿಯಾಗಿದ್ದು ನೂಕುನುಗ್ಗಲು ಉಂಟಾಗಿ ಆಮ್ಲಜನಕ ಕೊರತೆಯಿಂದ ಅಸ್ವಸ್ಥರಾಗಿದ್ದರೆಂದು ತಿಳಿದುಬಂದಿದೆ ಕೆಸರು ತುಂಬಿದ್ದ ಮೈದಾನದಲ್ಲಿ ಅವ್ಯವಸ್ಥೆ ಉಂಟಾಗಿದ್ದು ಕುಡಿಯಲು ನೀರು…

Read More

ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರಾಗಿರುವ ಹೊಸಂಗಡಿಯ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೋಷಕರ ಪಾತ್ರವನ್ನು ಒತ್ತಿ ಹಿಡಿಯುವ ಉದ್ದೇಶದಿಂದ “ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದಲ್ಲಿ ಶಾಲೆಯು “ಪೋಷಕರಿಗಾಗಿ ವಿಶೇಷ ಕಾರ್ಯಕ್ರಮ”ವನ್ನು ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಶಾಲೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಂಜತ್ತೂರು ದಾರುಸ್ಸಲಾಂ ಮಸೀದಿಯ ಖತೀಬ್ ಮೊಹಮ್ಮದಲಿ ಸಲಫಿ ಅವರು ಮುಖ್ಯ ಉಪನ್ಯಾಸಕವಾಗಿ…

Read More

ಮನೆ ಮೇಲೆ ಬೃಹತ್ ಗಾತ್ರದ ತೆಂಗಿನ ಮರ ಬಿದ್ದು ಹಾನಿ: ಸ್ಥಳಕ್ಕೆ ಶಾಸಕರ ಭೇಟಿ .

ಸುರತ್ಕಲ್ ಸಮೀಪದ ಕುಚಿಗುಡ್ಡೆ ಸಮೀಪ ಮನೆಯೊಂದರ ಮೇಲೆ ಬೃಹತ್ ತೆಂಗಿನ ಮರ ಬಿದ್ದು ಮನೆಯ ಮೇಲ್ಚಾವಣಿ ಎರಡು ಹೋಳಾದ ಘಟನೆ ನಡೆದಿದ್ದು, ಶಾಸಕರಾದ ಡಾ. ಭರತ್ ಶೆಟ್ಟಿ ವೈ ಭೇಟಿ ನೀಡಿ ಹಾನಿಗೀಡಾದ ಮನೆ ಪರಿಶೀಲನೆ ನಡೆಸಿದರು.ಹಾನಿಗೀಡಾದ ಮನೆಗೆ ಭೇಟಿ ನೀಡಿದ ಶಾಸಕರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪ್ರಕೃತಿ ವಿಕೋಪದಡಿ ಮನೆಯ ಪುನರ್ ನಿರ್ಮಾಣಕ್ಕೆ ಬೇಕಾದ ಪರಿಹಾರ ಒದಗಿಸುವಂತೆ ಸೂಚಿನೆ ನೀಡಿದರು. ಈ ಸಂದರ್ಭ, ನಿಕಟಪೂರ್ವ ಪಾಲಿಕೆಯ ಸದಸ್ಯೆ ನಯನ ಆರ್ ಕೋಟ್ಯಾನ್, ರಾಘವೇಂದ್ರ ಶೆಣೈ, ದಿನಕರ…

Read More

ಆಟೋ ಚಾಲಕನ ಮೇಲೆ ಸಂಚಾರಿ ಪೊಲೀಸರ ದರ್ಪ; ಪುತ್ತೂರಿನಲ್ಲಿ ಆಟೋ ಚಾಲಕರ ಯೂನಿಯನ್ ಪ್ರತಿಭಟನೆ .

ಸಂಚಾರಿ ಪೊಲೀಸರ ಸೂಚನೆಯನ್ನು ಪಾಲಿಸಲಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆನ್ನಟ್ಟಿಕೊಂಡು ಬಂದು ಆಟೋ ಚಾಲಕನ ಮೈ ಮೇಲೆ ಕೈ ಮಾಡಿ ಅವಾಚ್ಯ ಪದಗಳಿಂದ ಬೈದು ನಿಂದಿಸಿದ ಘಟನೆಗೆ ಸಂಬಂಧಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಆಟೋ ಚಾಲಕರ ಯೂನಿಯನ್ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಇಬ್ಬರು ಸಂಚಾರಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಪುತ್ತೂರು ಆಟೋ ಚಾಲಕರ ಯೂನಿಯನ್ ವತಿಯಿಂದ ಪುತ್ತೂರು…

Read More

ಮಂಗಳೂರು: ಏಕ ದಿನ ಸಾಹಿತ್ಯ ಅಭಿಯಾನ .

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ ದಿನಾಂಕ 17.10.2015 ರಂದು ಪೂರ್ವಾಹ್ನ 11.00 ರ ವೇಳೆಗೆ ಸಿ ಎಸ್ ಐ ಇಂಗ್ಲಿಷ್ ಮೀಡಿಯಂ ಶಾಲೆ ಕಾರ್ನಾಡ್ ಮುಲ್ಕಿ ಇಲ್ಲಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಆಗಿರುವ ಶ್ರೀಮತಿ ಎಲಿಜಬೆತ್ ಪುಷ್ಪಲತಾ ಬಂಗೇರ ಕಾರ್ಯಕ್ರಮದ ಉದ್ಘಾಟನೆಗೈದರು. ಕಾರ್ಯಾಧ್ಯಕ್ಷರು ಕನ್ನಡ…

Read More

ಐಇಇಇ ಡಿಸ್ಕವರ್ 2025’ ಸಮಾರೋಪ ಸಮಾರಂಭ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ .

ಮಂಗಳೂರು: ವಿತರಿತ ಗಣನೆ, ವಿಎಲ್‌ಎಸ್‌ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟಿಕ್ಸ್ ವಿಷಯಾಧಾರಿತ 9ನೇ ಅಂತರಾಷ್ಟ್ರೀಯ ‘ಐಇಇಇ ಡಿಸ್ಕವರ್ 2025’ (IEEE DISCOVER 2025) ಸಮ್ಮೇಳನವು ನಡುಪದವು ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭವ್ಯವಾಗಿ ಸಮಾರೋಪಗೊಂಡಿತು. ಈ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವು ದೇಶ–ವಿದೇಶಗಳ ಸಂಶೋಧಕರು, ಅಕಾಡೆಮಿಷ್ಯನರು ಮತ್ತು ಕೈಗಾರಿಕಾ ತಜ್ಞರನ್ನು ಒಟ್ಟುಗೂಡಿಸಿತು. ಡಾ. ಎಸ್. ಡಿ. ಸುಧರ್ಶನ, ಕಾರ್ಯನಿರ್ವಾಹಕ ನಿರ್ದೇಶಕರು,ಸಿ-ಡ್ಯಾಕ್ (C-DAC), ಬೆಂಗಳೂರು, ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭಾರತದ ಸೆಮಿಕಂಡಕ್ಟರ್ ಮತ್ತು ವಿಎಲ್‌ಎಸ್‌ಐ ಉದ್ಯಮದ ಬೆಳವಣಿಗೆ…

Read More

ಕಲಾನಿಧಿ ಪ್ರಶಸ್ತಿ ಪ್ರದಾನ ಸಮಾರಂಭ .

ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇವರು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇವರ ಸಹಕಾರದೊಂದಿಗೆ ಆಯೋಜಿಸಿದ,’ಕಲಾ ನಿಧಿ-25′ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18 ಅಕ್ಟೋಬರ್ 2025 ರಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿ ನಡೆಯಿತು. ಖ್ಯಾತ ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ತುಕಾರಾಮ…

Read More

ಕೃಷ್ಣ ನಗರದಲ್ಲಿ ಸಂಭ್ರಮದ ದೀಪಾವಳಿ ಹಬ್ಬ ,ಎಣ್ಣೆ ಶಾಸ್ತ್ರದಲ್ಲಿ ಭಾಗಿಯಾದ ಮಠಾಧೀಶರು….. !

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ದೀಪಾವಳಿ‌ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು. ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತರು ಕಲಶಪೂಜೆ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಮಾಡಲಾಯಿತು. ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದರು ಜಗತ್ತಿನ…

Read More

‘ಗುಡ್ ಪರ್ಸನ್ ಇನ್ ರಾಂಗ್ ಪಾರ್ಟಿ ಹೇಗೆಂದರೇಕೆ’ ಮಂಜುನಾಥ ಭಂಡಾರಿ ….. ?

ಮಂಗಳೂರು: ‘ನಾನು ಎನ್‌ಎಸ್‌ಯುಐ ನಾಯಕನಾಗಿದ್ದು, ಬೆಳೆದವನು. ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿದ್ದು ನಡೆದುಕೊಂಡು ಬಂದಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ . ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಬರೆದವರು ಯಾವ ನೈತಿಕತೆ ಆಧಾರದಲ್ಲಿ ಕಾಂಗ್ರೆಸ್‌ನ ಎಂಎಲ್‌ಸಿ ಟಿಕೆಟ್ ಕೇಳಿರುವುದು ಎಂಬುದನ್ನು ಆರೋಪ ಮಾಡಿದವರು ಸ್ಪಷ್ಟಪಡಿಸಲಿ’ ಎಂದು ತಮ್ಮ ಮೇಲಿನ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ಈ ರೀತಿಯಾಗಿ ಇಂತಹ ಆರೋಪ ಮಾಡಿದರೆ…

Read More

ದೋಹಾ ಖತಾರಿನಲ್ಲಿ ರಸ್ತೆ ಅಪಘಾತ . ತೂಮಿನಾಡು ನಿವಾಸಿ ಮೃತ್ಯು.

ಮಂಜೇಶ್ವರ : ದೋಹಾ ಖತಾರಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ತೂಮಿನಾಡು ನಿವಾಸಿಯಾಗಿರುವ ಯುವಕನೊಬ್ಬ ಬಾನುವಾರ ಖತಾರ್ ಸಮಯ 12.30 ಕ್ಕೆ ದಾರುಣವಾಗಿ ಸಾವನ್ನಪ್ಪಿದ್ದಾನೆ. ತೂಮಿನಾಡು ಹಿಲ್ ಟಾಪ್ ನಗರ ನಿವಾಸಿ ಅಬೂಬಕ್ಕರ್ (ಅಬ್ಬುಚ್ಚ) ಎಂಬವರ ಪುತ್ರ ಹಾರಿಸ್ (39) ಸಾವನ್ನಪ್ಪಿದ ದುರ್ದೈವಿ. ದೋಹಾ ಖತಾರಿನಲ್ಲಿ ಟ್ಯಾಕ್ಸಿ ಚಲಾಯಿಸಿ ಜೀವನ ಸಾಗಿಸುತಿದ್ದ ಹಾರಿಸ್ ಕೆಲವು ದಿನಗಳ ಹಿಂದೆ ಊರಿಗೆ ಬಂದು ಮರಳಿದ್ದಾನೆ. ಬಾನುವಾರದಂದು ಟ್ಯಾಕ್ಸಿ ಚಕ್ರ ಪಂಕ್ಚರ್ ಆಗಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಂಗಾಳಿ ಪ್ರಜೆಯೊಬ್ಬನ ಸಹಾಯದಿಂದ ಪಂಕ್ಚರ್ ಸರಿ…

Read More
error: Content is protected !!