Avatar

Shramitha bejja

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ.

ಮಂಗಳೂರು: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಲಾಗಿದೆ. ಬರೋಬ್ಬರಿ 12 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಸಬ ಬೆಂಗ್ರೆ ನಿವಾಸಿ ಅಲ್ತಾಫ್ (47) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ದಂಗೆ, ಶಸ್ತ್ರ ಪ್ರಯೋಗ, ಹಾನಿ ಮತ್ತು ಬೆದರಿಕೆ ಸೇರಿ ಹಲವು ಪ್ರಕರಣ ದಾಖಲಾಗಿತ್ತು. ಈತನ ಬಗ್ಗೆ ಮಂಗಳೂರು 2ನೇ ಸಿ.ಜೆ.ಎಂ ನ್ಯಾಯಾಲಯಕ್ಕೆ…

Read More

ತಲಪಾಡಿ ಫಾರ್ಮ್‌ನೊಳಗಿನ ಮರದಲ್ಲಿ ಅಸ್ಥಿಪಂಜರ ಪತ್ತೆ .

ಮಂಗಳೂರು: ತಲಪಾಡಿ ಫಾರ್ಮ್‌ನೊಳಗಿನ ಮರದಲ್ಲಿ ಪತ್ತೆಯಾಗಿರುವ ಅಸ್ಥಿಪಂಜರ ಯಾರದ್ದು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಿಪುರದ ಅಕ್ಷಯ ಫಾರ್ಮ್‌ನಲ್ಲಿ ಮಂಗಳವಾರ ಬೆಳಿಗ್ಗೆ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾನವನ ಅಸ್ಥಿಪಂಜರ ಬಿಹಾರ ಮೂಲದಿಂದ ಬಂದು ಮಂಜೇಶ್ವರದಲ್ಲಿ ನೆಲೆಸಿದ್ದ ವ್ಯಕ್ತಿಯದ್ದಿರಬಹುದೆಂದು ಪೊಲೀಸರು ಸಿಕ್ಕ ದಾಖಲೆಗಳ ಆಧಾರದಲ್ಲಿ ಶಂಕಿಸಿದ್ದಾರೆ. ಬಿಹಾರ ಮೂಲದ ರಾಹುಲ್ ಕುಮಾರ್ ಎಂಬಾತ ಎರಡು ತಿಂಗಳ ಹಿಂದೆ ಕೇರಳದಲ್ಲಿ ನಾಪತ್ತೆಯಾದ ಕುರಿತು ಮಂಜೇಶ್ವರ ಠಾಣೆಯಲ್ಲಿ ಆಗಸ್ಟ್ 7ರಂದು ಪ್ರಕರಣ ದಾಖಲಾಗಿತ್ತು. ಆದರೆ ಈತ ಎಲ್ಲಿಗೆ…

Read More

ವಾಹನ ಚೋರನನ್ನು ಬಂಧಿಸಿದ ಪೊಲೀಸರು. ಪಿಕಪ್‌ ವಾಹನ ಮತ್ತು ಬೈಕ್‌ ವಶ .

ಮಂಗಳೂರು: ಅಂತರ್ ರಾಜ್ಯ ಕುಖ್ಯಾತ ವಾಹನ ಚೋರನನ್ನು ಬಂಧಿಸಿರುವ ಪೊಲೀಸರು ಪಿಕಪ್‌ ವಾಹನ ಮತ್ತು ಬೈಕ್‌ ವಶಪಡಿಸಿಕೊಂಡಿದ್ದಾರೆ. ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ ಕೇರಳ ರಾಜ್ಯದ ಕುಖ್ಯಾತ ಅಂತರ್ ರಾಜ್ಯ ವಾಹನ ಕಳವು ಆರೋಪಿಯೋರ್ವನನ್ನು ದಸ್ತಗಿರಿ ಮಾಡಿ ಪಿಕಪ್‌ ವಾಹನ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್‌ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಂಧಿತನನ್ನು ಕೇರಳದ ಹಂಝ ಕುಪ್ಪಿಕಂಡ @ ಹಂಸ @ ಹಂಝ ಪೊನ್ನನ್…

Read More

ಅಕ್ರಮ ಕಸಾಯಿ ಖಾನೆ ಮಾಡಿಕೊಂಡಿದ್ದ ಮನೆಯ ಮೇಲೆ ಪೊಲೀಸರ ದಾಳಿ. ಆರೋಪಿಗಳ ಬಂಧನ.

ಮಂಗಳೂರು: ಅಕ್ರಮ ಕಸಾಯಿ ಖಾನೆ ಮಾಡಿಕೊಂಡಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ 3 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿ ಮನೆಯನ್ನು ಮುಟ್ಟು ಗೋಲು ಹಾಕಲು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಅಂಚೆ ಕಛೇರಿ ರಸ್ತೆಯ ಅಬ್ದುಲ್ ಖಾದರ್ ತನ್ನ ಮನೆಯಲ್ಲಿ ಅಕ್ರಮವಾಗಿ ದನ ವಧೆಯನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಪಡೆದ ಸುರತ್ಕಲ್ ಪೊಲೀಸ್ ಠಾಣೆ ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚೊಕ್ಕಬೆಟ್ಟುವಿನ…

Read More

ಅ.11ರಂದು ಮಣಿಪಾಲದಲ್ಲಿ “ಮಾನಸಿಕ ಆರೋಗ್ಯ ಜಾಗೃತಿ ಓಟ”

ಉಡುಪಿ: ಮಣಿಪಾಲ ಮಾಹೆಯ ವಿದ್ಯಾರ್ಥಿಗಳ ವ್ಯವಹಾರ ವಿಭಾಗ, ಕೆಎಂಸಿಯ ವಿದ್ಯಾರ್ಥಿ ಕ್ರೀಡಾ ಸಮಿತಿ ಹಾಗೂ ಎಫ್ಐಟಿವಿಐಬಿ ಎಕ್ಸ್ ಸ್ಫೋರ್ಟ್ಸ್ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ “ಮಾನಸಿಕ ಆರೋಗ್ಯ ಜಾಗೃತಿ ಓಟ”ವನ್ನು ಇದೇ ಅ.11ರಂದು ಮಣಿಪಾಲ ಮಾಹೆ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ ಎಂದು ಮಾಹೆಯ ವಿದ್ಯಾರ್ಥಿಗಳ ವ್ಯವಹಾರ ವಿಭಾಗದ ಮುಖ್ಯಸ್ಥೆ ಗೀತಾ ಮಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ 5 ಕಿ.ಮೀ ಜಾಗೃತಿ ಓಟವು ಅ.11ರಂದು ಸಂಜೆ 5ಗಂಟೆಗೆ ಮಣಿಪಾಲ ಮಾಹೆ ಕ್ಯಾಂಪಸ್ ನಲ್ಲಿ…

Read More

ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯೇ ಸಹಕಾರಿ ಕ್ಷೇತ್ರದ ಮುಖ್ಯ ಉದ್ದೇಶ- ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಸಾಮಾಜಿಕ ಕಳಕಳಿಯ ಚಿಂತನೆ ಇಟ್ಟುಕೊಂಡು ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ. ಇದು ಸಹಕಾರಿ ಸಂಸ್ಥೆಯ ಪ್ರಗತಿಗೆ ಪೂರಕವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಉಡುಪಿ ಬಡಗುಬೆಟ್ಟು…

Read More

ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿ ವಶ.

ಮಂಜೇಶ್ವರ : ಮಂಜೇಶ್ವರ ಪೋಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಕೊಡ್ಲಮೊಗರಿನಲ್ಲಿ ಭಾರೀ ಗಾಂಜಾ ಬೇಟೆ. 116 ಕೆ ಜಿ ಗಾಂಜಾ ಹಾಗೂ ಮಿನಿ ಲಾರಿಯೊಂದನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಸುಳ್ಯಮೆ ಯಲ್ಲಿರುವ ಮನೆಯೊಂದರ ಶೆಡ್ ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಾಗಿ ತೆಗೆದಿರಿಸಲಾಗಿದ್ದ ರೀತಿಯಲ್ಲಿ ಗಾಂಜಾ ಪತ್ತೆ ಹಚ್ಚಲಾಗಿದೆ. ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ್ದೆಂದು ಶಂಕಿಸಲಾಗುತ್ತಿರುವ ಮಿನಿ ಲಾರಿ ಶೆಡ್ ನ ಸಮೀಪದಲ್ಲಿ ನಿಲುಗಡೆಯಾಗಿತ್ತು.ರಹಸ್ಯ ಮಾಹಿತಿಯಂತೆ ಎ ಎಸ್ಪಿ ನಂದ ಗೋಪಾಲ್ ರವರ ನೇತೃತ್ವದಲ್ಲಿ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ…

Read More

ಓಟ್ ಚೋರ ಬಿಜೆಪಿಗೆ ವಿಗ್ರಹ ಚೋರ ಸಿಪಿಎಂ ಸಾಥ್- ಕಾಂಗ್ರೆಸ್ ಆರೋಪ.

ಮತದಾರ ಯಾದಿಯಲ್ಲಿ ಕ್ರಿಮಿನಲ್ ಸ್ವಭಾವದ ಹಸ್ತಕ್ಷೇಪ ನಡೆಸಿ ಅಧಿಕಾರಕ್ಕೇರಿದ ಬಿಜೆಪಿಗೆ ಕೇರಳದ ಶಬರಿಮಲೆ ಕ್ಷೇತ್ರದಲ್ಲಿ ಸ್ವರ್ಣ ಕವಾಟಗಳ ಕಳ್ಳತನದಲ್ಲಿ ಜವಾಬ್ದಾರಿಕೆಯಿರುವ ಸರಕಾರವು ಕೈ ಜೋಡಿಸಿರುವುದಾಗಿ ಅನುಮಾನಗಳಿವೆ. ಉಗಾಂಡಾದ ಯಾವುದೋ ಕುಗ್ರಾಮದಲ್ಲಿ ಎರಡು ದಿನ ನಳ್ಳಿ ನೀರು ಬರದಿದ್ದರೆ ಮೂರನೇ ದಿನ ದೆಹಲಿಯ ಉಗಾಂಡಾ ರಾಯಭಾರ ಕಚೇರಿಯ ಮುಂಭಾಗ ಹೋರಾಟ ನಡೆಸುವ ಸಿಪಿಎಂ ಈ ಓಟ್ ಕಳ್ಳತನದ ಬಗ್ಗೆ ಚಕಾರವೆತ್ತಿಲ್ಲ. ಅದೇ ರೀತಿ ಭಾರತದ ಅತ್ಯಂತ ಪವಿತ್ರ ಆರಾಧನಾ ಕೇಂದ್ರವಾಗಿರುವ ಶಬರಿಮಲೆ ಕ್ಷೇತ್ರದ ಬಾಗಿಲು, ಗೋಡೆಗಳ ಸ್ವರ್ಣ ಚೋರತನಕ್ಕೆ…

Read More

“ದುಬೈ ಗಡಿನಾಡ ಉತ್ಸವ -2025” ಅ. 25 ರಂದು

ದುಬೈ : ಯುಎಇಯಲ್ಲಿ ಇರುವ ಎಲ್ಲಾ ಗಡಿನಾಡಿನ ಹಾಗೂ ಕರುನಾಡಿನ ಕನ್ನಡಿಗರನ್ನು ಒಟ್ಟುಗೂಡಿಸಿ “ದುಬೈ ಗಡಿನಾಡ ಉತ್ಸವ -2025″ವನ್ನು ಅದ್ದೂರಿಯಾಗಿ ಆಚರಿಸುವ ಹಾಗೂ ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಗಲ್ಫ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಾಂತುರು ರವರು ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಶುಭವನ್ನು ಹಾರೈಸಿದರು. ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ಔದ್ ಮೇಥದ ಗ್ಲೆಂಡೇಲ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ…

Read More

ದಕ್ಷಿಣ ಕನ್ನಡ ಜಿಲ್ಲಾ 10ನೇ ಗಮಕ ಕಲಾ ಸಮ್ಮೇಳನ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅ.17 ಮತ್ತು 18ರಂದು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 10ನೇ ಗಮಕ ಕಲಾ ಸಮ್ಮೇಳನ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅ.17 ಮತ್ತು 18ರಂದು ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರವಚನಗಾರ, ಸಾಹಿತಿ, ಹಿರಿಯ ವಿದ್ವಾಂಸ ಮುಳಿಯ ಶಂಕರ ಭಟ್ಟ ಅವರು ವಹಿಸಲಿದ್ದಾರೆ ಎಂದು ಸಮ್ಮೇಳನದ ಗೌರವ ಮಾರ್ಗದರ್ಶಕ ಪ್ರದೀಪ ಕುಮಾರ ಕಲ್ಕೂರ ತಿಳಿಸಿದರು. ಅವರು ಪತ್ರಿಕಾಭವನದಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಅ.17 ರಂದು ಮಧ್ಯಾಹ್ನ 2.30ಕ್ಕೆ ಒಡಿಯೂರಿನ ಸಾಧ್ಯ ಶ್ರೀ ಮಾತಾನಂದಮಯೀ ಉಪಸ್ಥಿತಿಯಲ್ಲಿ ಡಾ.ಹರಿಕೃಷ್ಣ ಪುನರೂರು ಅವರು…

Read More
error: Content is protected !!