Avatar

Shramitha bejja

ವಿವಿಧ ನಿಗಮ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರೊಂದಿಗೆ ಶಾಸಕ ಮಂಜುನಾಥ ಭಂಡಾರಿ ಸಭೆ.ಪಕ್ಷದ ಬಲವರ್ಧನೆಗೆ ಸೂಚನೆ.

ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಮಂಗಳವಾರ ವಿವಿಧ ನಿಗಮಗಳು, ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು.ಈ ಸಂದರ್ಭದಲ್ಲಿ ತಮ್ಮ ತಮ್ಮ ನಿಗಮ, ಪ್ರಾಧಿಕಾರ ಹಾಗೂ ಅಕಾಡೆಮಿಗಳಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡಲು ನಿಮ್ಮೊಂದಿಗೆ ನಾನಿದ್ದೇನೆಂಬ ಭರವಸೆ ನೀಡಿದರು.ನಿಗಮದ ಅಧ್ಯಕ್ಷರುಗಳು ಸರ್ಕಾರದ ಅಧಿಕಾರಿಗಳು ಹಾಗೂ ಜನರೊಂದಿಗೆ ಸ್ಪಂದನಾಶೀಲವಾಗಿ ಸಮನ್ವಯತೆಯಿಂದ ವರ್ತಿಸಬೇಕೆಂದು ಈ ವೇಳೆ ಶಾಸಕರು ಸಲಹೆ ನೀಡಿದರು. ಪಕ್ಷವೂ ತಮ್ಮನ್ನು ಗುರುತಿಸಿ ನೀಡಿರುವ ಸ್ಥಾನಮಾನಗಳಿಗೆ…

Read More

ಡಿಸಿ ಮನ್ನಾ ಉಳಿಕೆ ಜಮೀನನ್ನು ದಲಿತರಿಗೆ ಮಂಜೂರು ಮಾಡಿ: ದಲಿತ ಸಂಘಟನೆಯಿಂದ ಶಾಸಕ ಅಶೋಕ್ ರೈ ಗೆ ಮನವಿ.

ಪುತ್ತೂರು: ಡಿ ಸಿ ಮನ್ನಾ ಉಳಿಕೆ ಜಮೀನನ್ನು ನಿವೇಶನ ರಹಿತ ಪ ಜಾತಿ ಮತ್ತು ಪಪಂಗಡದ ವರಿಗೆ ಮಂಜೂರು ಮಾಡುವಂತೆ ಸರಕಾರಕ್ಕೆ ಆಗ್ರಹಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ದ ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮನವಿ ಮಾಡಿದರು. ಶಾಸಕರನ್ನು ಭೇಟಿಯಾದ ನಿಯೋಗ ಈ ವಿಚಾರದಲ್ಲಿ ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಆದರೆ ಇದುವರೆಗೂ ಯಾವ ಜನಪ್ರತಿನಿಧಿಗಳೂ ನಮ್ಮ ಬೆಂಬಲಕ್ಕೆ ಬಂದಿಲ್ಲ. ಈ ಬಾರಿ ನಿಮ್ಮ ಮೂಲಕ ನಾವು ಮನವಿ…

Read More

ಶಾಲಾ ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿ ಕೋಟ್ಯಂತರ ರೂ. ವಂಚನೆ: ಇಬ್ಬರ ಬಂಧನ

ಉಡುಪಿ: ಶಾಲಾ ಕಾಲೇಜುಗಳ ಬಸ್‌ಗಳಿಗೆ ನಕಲಿ ವಿಮೆ ಪಾಲಿಸಿ ಮಾಡಿ ಕೋಟ್ಯಂತರ ರೂ. ವಂಚಿಸುತ್ತಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.ಸಾಸ್ತಾನ ಕುಂಜಿಕೆರೆ ರಸ್ತೆಯ ರಾಕೇಶ ಎಸ್.(33) ಹಾಗೂ ಶಿರಸಿಯ ಚರಣ ಬಾಬು ಮೇಸ್ತ ಬಂಧಿತ ಆರೋಪಿಗಳು. ಆರೋಪಿಗಳು ನಕಲಿ ವಿಮೆ ಮೂಲಕ ಕೋಟ್ಯಂತರ ರೂ. ಹಣ ವಂಚನೆ ಎಸಗಿದ್ದಾರೆ ಎಂದರು. 2024ರ ನ.25ರಂದು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಾಡಿ –…

Read More

ಅಕ್ಷಯ ಕಲ್ಲೇಗ ಕೊಲೆ ಪ್ರಕರಣದ‌ 3ನೇ ಆರೋಪಿಯ ಜಾಮೀನು ಅರ್ಜಿ ವಜಾ.

ಮಂಗಳೂರು: ಅಕ್ಷಯ ಕಲ್ಲೇಗ ಕೊಲೆ ಪ್ರಕರಣದ‌ 3ನೇ ಆರೋಪಿಯ ಜಾಮೀನು ಅರ್ಜಿ ವಜಾಗೊಂಡಿದೆ.ಎರಡು ವರ್ಷಗಳ ಹಿಂದೆ ಪುತ್ತೂರಿನ ನೆಹರೂ ನಗರದಲ್ಲಿ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಜಾಮೀನು ಕೋರಿ 3ನೇ ಆರೋಪಿ ಮಂಜುನಾಥ್ ಅಲಿಯಾಸ್ ಹರಿ ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಆತ ಅನಾರೋಗ್ಯದ ಕಾರಣ ನೀಡಿ ಜಾಮೀನಿನಲ್ಲಿ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದ. ದೂರುದಾರರ ಪರ ಸರಕಾರಿ…

Read More

ಶ್ರೀನಿವಾಸ ಟೆಕ್ನಾಲಜಿಯಲ್ಲಿ ಅಂತಾರಾಷ್ಟ್ರೀಯ ಹ್ಯಾಕಥಾನ್ ಶ್ರೀನಥೋನ್ 2025 ಕಾರ್ಯಕ್ರಮ.

ಮಂಗಳೂರು: ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಾಳಚಿಲ್ ಸಂಸ್ಥೆಯು ಅಂತರಾಷ್ಟ್ರೀಯ ಹ್ಯಾಕಥಾನ್ “Srinathon-25” ಕಾರ್ಯಕ್ರಮವನ್ನು ಅಕ್ಟೋಬರ್ 9 ಮತ್ತು 10 ರಂದು ಆಯೋಜಿಸುತ್ತಿದ್ದು, ಈ ಮೂಲಕ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ತರಿಸಿ, ನಿಜ ಜೀವನದ ಸವಾಲುಗಳಿಗೆ ನವೀನ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರೇಪಿಸಲಾಗುವುದು ಎಂದು ಸಂಸ್ಥೆಯ ಪ್ರಾಂಶುಪಾಲರಾದ ಡಾ ಶ್ರೀನಿವಾಸ ಮೈಯ ಡಿ ತಿಳಿಸಿದರು . ಅವರು ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈವರೆಗೆ 114 ತಂಡಗಳು…

Read More

ಮಸ್ಕತ್‌ನಲ್ಲಿ ಅ.10ರಂದು ‘ಪೆಪೆರೆ ಪೆಪೆ ಢುಂ’! ಬ್ರಾಸ್ ಬ್ಯಾಂಡ್ ಸ್ಪರ್ಧೆ.

ಮಂಗಳೂರು: ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ಕಲೆ ಪ್ರಚಾರ ಮತ್ತು ಉತ್ತೇಜನಕ್ಕಾಗಿ ‘ಆಮಿ ಆನಿ ಆಮ್ಮಿಂ’ ಸಂಸ್ಥೆಯು ಆಯೋಜಿಸಿರುವ ‘ಪೆಪೆರೆ ಪೆಪ್ ಢುಂ’ ಸ್ಪರ್ಧೆಯ ಎರಡನೇ ಆವೃತ್ತಿ ಅಕ್ಟೋಬರ್ 10 ರಂದು ಒಮಾನ್ ರಾಜಧಾನಿ ಮಸ್ಕತ್‌ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡೆನಿಸ್ ಡಿಸಿಲ್ವಾ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು , ಮಸ್ಕತ್‌ ನ ರುವಿಯ ಅಲ್ ಫಲಾಜ್ ಹೋಟೆಲ್‌ನಲ್ಲಿ ನಡೆಯುವ ಈ ಸಂಗೀತ ಮೇಳವನ್ನು ಎಂಸಿಸಿಪಿ ಅಧ್ಯಕ್ಷ…

Read More

ಮನೆಯೊಂದರಲ್ಲಿ ಬೆಂಕಿ ಅನಾಹುತ . ಅದೃಷ್ಟವಶಾತ್ ಪಾರಾದ ಮನೆ ಮಂದಿ.

ಮನೆಯಲ್ಲಿ ಬೆಂಕಿ ಅನಾಹುತ ಉಂಟಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಡ್ಡಿಬಾಗಿಲು ಎಂಬಲ್ಲಿ ನಡೆದಿದೆ.ಘಟನೆಯಿಂದ ಮನೆಗೆ ಭಾರೀ ಹಾನಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಸಾವು ನೋವು ಉಂಟಾಗಿಲ್ಲ. ಹರೀಶ್ ಎಂಬುವವರು ಭಜನೆ ಗುರುಗಳಾಗಿದ್ದು ಅವರು ತಮ್ಮ ತಂಡದೊಂದಿಗೆ ಬೇರೆಡೆ ತೆರಳಿದ್ದರು. ಪತ್ನಿ ಹಾಗೂ ಒಬ್ಬಳು ಮಗಳು ತವರು ಮನೆಗೆ ಹೋಗಿದ್ದರು. ಇನ್ನಿಬ್ಬರು ಮಕ್ಕಳು ಮನೆಯಲ್ಲಿ ಇದ್ದರು. ಅವರು ಸಂಜೆಯ ವೇಳೆ…

Read More

ಜೋಡು ದಂಟೆ ಶ್ರೀ ಕೊರಗಜ್ಜ ದೈವದ ಭಕ್ತಿ ಹಾಡು ಚಿತ್ರೀಕರಣ ಮುಹೂರ್ತ.

ವಿಟ್ಲ:ಸಿಂಚನ ಕ್ರಿಯೇಷನ್ಸ್ ಅರ್ಪಿಸುವ ರೋಹಿತ್ ನೋಣಯ್ಯ ಪೂಜಾರಿ, ಇರಂದೂರು ಪಡೀಲ್. ನಿರ್ಮಾಣ ದ “ಜೋಡು ದಂಟೆ”ಕೊರಗಜ್ಜ ನ ಭಕ್ತಿ ಹಾಡು ಟೈಟಲ್ ಬಿಡುಗಡೆ, ಹಾಗೂ ಚಿತ್ರೀಕರಣ ದ ಮುಹೂರ್ತ ಸುರುಳಿ ಮೂಲೆ ಕೊರಗಜ್ಜ ದೈವ ಸ್ಥಾನದಲ್ಲಿ ನಡೆಯಿತು.. ವೇದಿಕೆ ಯಲ್ಲಿ ಕೃಷ್ಣ ಯ್ಯ ಕೆ. ವಿಟ್ಲ ಅರಮನೆ, ಮಾಮೇಶ್ವರ ದೇವಸ್ಥಾನ ದ ವೀರಪ್ಪ ಗೌಡ, ಹಿಂದೂ ಜಾಗರಣೆ ವೇದಿಕೆ ಮಂಗಳ ಪದವು ಘಟಕದ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಶೆಟ್ಟಿ,ಕೊರಗಜ್ಜ ಕ್ಷೇತ್ರ ಸುರುಳಿ ಮೂಲೆ ಇದರ ಗೌರವ ಅಧ್ಯಕ್ಷರು…

Read More

5 ವರ್ಷದೊಳಗಿನ ಮಕ್ಕಳಿಗೆ ಸಿರಫ್‌ ಕೊಡುವಾಗ ಎಚ್ಚರಿಕೆ ಅಗತ್ಯ — ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: 5 ವರ್ಷದೊಳಗಿನ ಮಕ್ಕಳಿಗೆ ಸಿರಫ್‌ ಕೊಡುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ಮಾಡಲಾಗಿದೆ, ಡ್ರಗ್ಸ್‌ ಕಲಬೆರಕೆ ಬಗ್ಗೆ ಈ ಹಿಂದೆಯೇ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ದೇಶದ ಬೇರೆ ರಾಜ್ಯಗಳಲ್ಲಿ ಕಾಫ್‌ ಸಿರಫ್‌ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾದೆ ಎಂದೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹಾಸನದ ಚೆನ್ನರಾಯಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕಳಪೆ ಕಾಫ್ ಸಿರಫ್ ಕರ್ನಾಟಕ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮುನ್ನೆಚ್ವರಿಕೆ ಕ್ರಮವಾಗಿ…

Read More

ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮಂಗಲ್ಪಾಡಿ ಮಂಜೇಶ್ವರ ನೇತ್ರತ್ವ ಸಮಿತಿ ‘ಬಾಲವೇದಿ ಸೃಜನೋತ್ಸವ’.

ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಮಂಗಲ್ಪಾಡಿ ಮಂಜೇಶ್ವರ ನೇತ್ರತ್ವ ಸಮಿತಿ ಬಾಲವೇದಿ ಸೃಜನೋತ್ಸವ ಆದಿತ್ಯವಾರ ಯುವಶಕ್ತಿ ಫ್ರೆಡ್ಸ್ ಸರ್ಕಲ್ ಲೈಬ್ರೆರಿ ಯಲ್ಲಿ ನಡೆಯಿತು. ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ದಾಸಪ್ಪ ಶೆಟ್ಟಿ ಮಾಸ್ಟರ್ ಉದ್ಘಾಟನೆ ಮಾಡಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಮಂಗಲ್ಪಾಡಿ ನೇತೃತ್ವ ಸಮಿತಿ ಕನ್ವೆನರ್ ರವೀಂದ್ರ ಶೆಟ್ಟಿ ಬೋಳ್ಳಾರು ವಹಿಸಿದರು. ಮುಖ್ಯ ಅತಿಥಿ ಯಾದ ಭಾಗ್ಯ ಕರುಣಾಕರ ಬರ್ಲಾಯಾ ಸೃಜನೋತ್ಸವದ ಬಗ್ಗೆ ಮಾಹಿತಿ ನೀಡಿದರು .ಈ ಕಾರ್ಯಕ್ರಮದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್…

Read More
error: Content is protected !!