Avatar

Shramitha bejja

ಮಿಥುನ್ ರೈ ಅವರ ಸಮಾಜ ಸ್ಪಂದನೆಯೇ ಸ್ಪೂರ್ತಿ : ಅಶೋಕ್ ಪೂಜಾರ್

ಮೂಲ್ಕಿ: ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸದಾ ಬೆರೆತು ಸಾಮಾಜಿಕ ಸ್ಪಂದನೆ ನೀಡುವ ಯುವನೇತಾರ ಮಿಥುನ್ ರೈ ಅವರೇ ನಮಗೆ ಸ್ಪೂರ್ತಿಯಾಗಿದ್ದು ಅವರ ಹುಟ್ಟು ಹಬ್ಬದ ದಿನದಂದು ಸಮಾಜದ ಚಿಂತನೆ ಮಾಡುವ ಅವಕಾಶ ನಮಗೆಲ್ಲರಿಗೂ ಸಿಕ್ಕಿದೆ ಎಂದು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು. ಅವರು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲನ್ನು ವಿತರಿಸಿ ಮಾತನಾಡಿದರು. ಆಸ್ಪತ್ರೆಯ ಡಾ….

Read More

HORN’ ಹಾರ್ನ್’ ಕಿರು ಚಿತ್ರದ ಮುಹೂರ್ತ ಸಮಾರಂಭ.

ಮಂಗಳೂರು : ಈಗ ಪ್ರತಿಭಾವಂತ ಯುವಕರು ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಮೊದಲು ಈ ರೀತಿ ಕಿರುಚಿತ್ರ ಮಾಡುವುದು ವಾಡಿಕೆ ಆಗಿದೆ ಅದರಂತೆಯೇ ಕಿರುಚಿತ್ರಕ್ಕೆ ಬೇಡಿಕೆ ಕೂಡಾ ಬಂದಿದೆ. ನಾವು ಈಗ ಹೇಳುತ್ತಿರುವ ಕಿರುಚಿತ್ರದಲ್ಲಿ ತುಂಬಾ ವಿಶೇಷಕರ ಸಂಗತಿಗಳಿವೆ. ಆ ವಿಶೇಷಕರ ವಿಷಯಗಳಿಂದ ತುಂಬ ಸದ್ದು ಮಾಡುತ್ತಿರುವ ಕಿರುಚಿತ್ರದ ಹೆಸರು HORN’ ಹಾರ್ನ್’. ಈ ಕಿರು ಚಿತ್ರದ ಮುಹೂರ್ತ ಸಮಾರಂಭ ಶಕ್ತಿನಗರದ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು.ಉಮೇಶ್ ಶೆಣೈಯವರು ಈ ಕಿರುಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು. ಹಾರ್ನ್…

Read More

ಕಾಸರಗೋಡು “ಸಿಂಧೂರ🔴 ಮಹಿಳಾ ಸಂಘ” ಉದ್ಘಾಟನೆ.

ಕಾಸರಗೋಡು: ಕಾಸರಗೋಡು ಜಿಲ್ಲೆಯ ಬೆದ್ರಡ್ಕ ರಾಮ್ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನವಾಗಿ ಮಹಿಳಾ ಸಂಘ ರೂಪೀಕರಣಗೊಂಡಿತು. ಮೊಗ್ರಾಲ್ ಪುತ್ತೂರು ಪಂಚಾಯತಿನ 9 ನೇ ವಾರ್ಡು ಸದಸ್ಯೆ ಶ್ರೀಮತಿ ಪ್ರಮೀಳಾ ಮಜಲ್ ದೀಪ ಬೆಳಗಿಸಿ ರಾಮ್ ನಗರದ “ಸಿಂಧೂರ🔴 ಮಹಿಳಾ ಸಂಘ”ವನ್ನು ಉದ್ಘಾಟಿಸಿದರು. ರಾಮ್ ನಗರ ರಾಮ್ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಶ್ರೀ ಸಂದೇಶ್, ಕಾರ್ಯದರ್ಶಿ ಶ್ರೀ ಶರತ್, ಕೋಶಾಧಿಕಾರಿ ಶ್ರೀ ಸತೀಶ್ (ಸಚ್ಚಿ) ಉಪಸ್ಥಿತರಿದ್ದರು. ಶ್ರೀ ರಂಜು ರಾಮ್ ನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ನೂತನ ಸಂಘದ…

Read More

ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆ . ಸಂಕಷ್ಟದಲ್ಲಿ ಗ್ರಾಮಸ್ಥರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಮಂಗಲ್ಪಾಡಿ , ವರ್ಕಾಡಿ ಗ್ರಾಮ ಪಂಚಾಯತು ಸೇರಿದಂತೆ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆಯು ಕಂಡುಬರುತ್ತಿದ್ದು, ಈ ಪರಿಣಾಮವಾಗಿ ವಿವಿಧ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡ ಸ್ಥಿತಿಯಲ್ಲಿ ಉಳಿದಿವೆ. ಗ್ರಾಮಸ್ಥರು ಈ ಸ್ಥಿತಿಯಿಂದ ಸಂಕಷ್ಟಕ್ಕೀಡಾಗುತಿದ್ದು, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಕಾರ್ಯದರ್ಶಿ ಹುದ್ದೆ ಕಳೆದ ಕೆಲವು ತಿಂಗಳಿಂದ ಖಾಲಿ ಬಿದ್ದಿದೆ. ಈ ಕಾರಣದಿಂದ ಹಲವು ಯೋಜನೆಗಳು ವಿಳಂಬಗೊಳ್ಳುತ್ತಿದೆ. ಇದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಸಹ ಯೋಜನೆಗಳ ಅನುಷ್ಠಾನಕ್ಕೆ…

Read More

ಕನಿಲ ಶ್ರೀ ಭಗವತೀ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕೊಡುಗೈ ದಾನಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ.

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ದಾರದ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಾ ಇದ್ದು . ಇಂದು ಕೊಡುಗೈ ದಾನಿ ಬಡವರ ಬಂಧು ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಕೂಳೂರು ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ . ಬರದಿಂದ ಸಾಗುತ್ತಿರುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ, ರೂಪುರೇಷೆ ನೋಡಿ ಕೆಲವೊಂದು ಸಲಹೆಯನ್ನು ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಸಮಿತಿಯಿಂದ ಸದಾಶಿವ ಶೆಟ್ಟಿಯವರಿಗೆ ಶಾಲು ಹೊದಿಸಿ ಫಲ ಪುಷ್ಪವನಿತ್ತು ಗೌರವಿಸಲಾಯಿತು.ಈ ಹಿಂದೆ…

Read More

ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದ ಸ್ಥಳೀಯರು, ಶಾರದೆಯನ್ನ ರಸ್ತೆಯಲ್ಲಿರಿಸಿ ಪ್ರತಿಭಟನೆ ನಿರತರಾದ ಉಳ್ಳಾಲ ಜನರು …. !

ಮಂಗಳೂರು : ನಿನ್ನೆ ರಾತ್ರಿ ನಡೆದ ದಸರಾ ಶೋಭಾಯಾತ್ರೆಯಲ್ಲಿ ಮಧ್ಯರಾತ್ರಿ ಆಗುತ್ತಿದ್ದಂತೆ ಪೊಲೀಸರು ಟ್ಯಾಬ್ಲೊಗಳ ಧ್ವನಿವರ್ಧಕ ಸ್ಥಗಿತಗೊಳಿಸಿದ್ದು ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆಗೆ ಕಾರಣವಾಯಿತು.ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರು ಯುವಕರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧಿತರನ್ನ ಬಿಡುಗಡೆ ಮಾಡಲು ಆಗ್ರಹಿಸಿ ಶೋಭಾಯಾತ್ರೆ ಸ್ಥಗಿತಗೊಳಿಸಿ ಠಾಣೆಯ ಎದುರಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.ಬಿಜೆಪಿ ಮುಖಂಡರ ಮಧ್ಯಪ್ರವೇಶದಿಂದ ಪೊಲೀಸರು ಇಬ್ಬರು ಯುವಕರನ್ನು ಬಿಡುಗಡೆಗೊಳಿಸಿದರು. ಉಳ್ಳಾಲದ ಶಾರದಾ ನಿಕೇತನದಲ್ಲಿ ಪೂಜಿಸಲ್ಪಟ್ಟ ಸಾರ್ವಜನಿಕ ಶಾರದಾ ವಿಗ್ರಹದ ಜಲಸ್ತಂಭನದ ಪ್ರಯುಕ್ತ ನಡೆದ…

Read More

ಸಿದ್ದರಾಮಯ್ಯ ಸಿಎಂ ಹುದ್ದೆ ಕಳೆದುಕೊಳ್ಳುತ್ತಾರೆ ನಿಜವಾಗುತ್ತಾ ಆರ್.ಅಶೋಕ್ ನುಡಿಯುತ್ತಿರುವ ಭವಿಷ್ಯ …… ?

ಬೆಳಗಾವಿ: ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ಸಿ. ಎಂ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ . ಬೆಳಗಾವಿಯಲ್ಲಿ ಮಾತನಾಡಿದ ಅವರು, “ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಾಂತ್ರಿ ಅಂತ ಹೇಳಿ ಒಬ್ಬರು ಸಚಿವರು ಈಗ ಮನೆಗೆ ಹೋಗಿದ್ದಾರೆ. ಒಪ್ಪಂದ ಆಗಿರೋದು ನಿಜ. ಈಗ ಜಗಳ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.“ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿಕೆಶಿ ಹಠ ಬಿಡ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದ್ರೆ…

Read More

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ದ ಭವ್ಯ ಶೋಭಾಯಾತ್ರೆ.

ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದ ಹಾಗೂ ಭಕ್ತಿ ಭಾವದ ಸಮ್ಮಿಲನದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ದ ಭವ್ಯ ಶೋಭಾಯಾತ್ರೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಆರಂಭಗೊಂಡು, ಶುಕ್ರವಾರ ಮುಂಜಾನೆಯವರೆಗೆ ವೈಭವದಿಂದ ನೆರವೇರಿತು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಭವ್ಯ ಶೋಭಾಯಾತ್ರೆಯನ್ನು ಸಹಸ್ರಾರು ಜನರು ಕಣ್ಣುಂಬಿಕೊಂಡರು. ಶ್ರೀ ಕ್ಷೇತ್ರ ಕುದ್ರೋಳಿಯಿಂದ ಗುರುವಾರ ಸಂಜೆ ಹೊರಟ ದಸರಾ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ…

Read More

ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮ.

ಮಂಗಳೂರು: ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಕಾರ್ಯಕ್ರಮ ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಮಹಾತ್ಮ ಗಾಂಧಿ ಅವರು ಬ್ರಿಟಿಷರ, ದಬ್ಬಾಳಿಕೆ, ದೌರ್ಜನ್ಯವನ್ನು ಮೆಟ್ಟಿನಿಂತು ದೇಶದ ಜನತೆಯ ಪ್ರೀತಿ, ವಿಶ್ವಾಸಗಳಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ನಡೆ-ನುಡಿ, ಚಿಂತನೆ, ಆದರ್ಶ, ಜೀವನ ಶೈಲಿ ದೇಶದಲ್ಲಿ ಇನ್ನೂ ಜೀವಂತವಾಗಿದ್ದರಿಂದ ಪ್ರಜಾಪ್ರಭುತ್ವ ಉಳಿದಿದೆ. ಗಾಂಧಿ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ .ಪ್ರಯಾಣಿಕರಲ್ಲಿ ಗೊಂದಲ.

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ ಮಾಡಿರುವುದು ಪ್ರಯಾಣಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ನಯಾ ಬಜಾರಿನ ಮಂಗಳೂರು ಕಡೆಗೆ ಸಂಚರಿಸುವ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಮಂಗಲ್ಪಾಡಿ ಎಂಬ ಹೆಸರಿನಲ್ಲಿ ಫಲಕವನ್ನು ಸ್ಥಾಪಿಸಿರುವುದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿದೆ. ನಯಾಬಜಾರಿಗೆ ಹೊರಗಿನಿಂದ ಆಗಮಿಸುವ ಪ್ರಯಾಣಿಕರೂ, ಹೊಸದಾಗಿ ಬರುವ ಬಸ್ ಚಾಲಕರೂ ಈ ಸ್ಥಳವನ್ನು ಅರ್ಥಮಾಡಿಕೊಳ್ಳದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹತ್ತಿರದಲ್ಲಿರುವ ಕೈಕಂಬ ಬಸ್ ನಿಲ್ದಾಣಕ್ಕೆ ತಲುಪಿದಾಗ ಮಾತ್ರವೇ ಅರ್ಥವಾಗುತ್ತಿದೆ. ನಯಾ ಬಜಾರ್ ಬಸ್ ನಿಲ್ದಾಣವನ್ನು ದಾಟಿ ಹೋಗಿರುವುದು….

Read More
error: Content is protected !!